ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ| ಹೂಸ್ಟನ್’ನಲ್ಲಿ ಮೋದಿ ಭೇಟಿಯದ ಕಾಶ್ಮೀರಿ ಪಂಡಿತರ ನಿಯೋಗ! ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಗೆ ಬೆಂಬಲ| 370ನೇ ವಿಧಿ ರದ್ದತಿ ತೀರ್ಮಾನಕ್ಕೆ ಕಾಶ್ಮೀರಿ ಪಂಡಿತರ ಬೆಂಬಲ|  ‘370ನೇ ವಿಧಿ ರದ್ದತಿಯಿಂದ ಕಾಶ್ಮೀರಿ ಪಂಡಿತರ ಪುನರ್ವಸತಿಗೂ ಸಹಾಯಕಾರಿ’|

ಹೂಸ್ಟನ್(ಸೆ.22): ಅಮೆರಿಕ ಪ್ರವಾಸದಲ್ಲಿರಯುವ ಪ್ರಧಾನಿ ಮೋದಿ ಅವರನ್ನು, ಕಾಶ್ಮೀರಿ ಪಂಡಿತರ ನಿಯೋಗ ಭೇಟಿ ಮಾಡಿದೆ.

Scroll to load tweet…

ಹೂಸ್ಟನ್‌ನಲ್ಲಿ ಮೋದಿ ಭೇಟಿ ಮಾಡಿದ ಕಾಶ್ಮೀರಿ ಪಂಡಿತರ ನಿಯೋಗ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಸ್ವಾಗತಿಸಿದೆ.

Scroll to load tweet…

370ನೇ ವಿಧಿ ರದ್ದತಿಯಿಂದ ಕಣಿವೆಯ ಅಭಿವೃದ್ಧಿ ಸೇರಿದಂತೆ ಕಾಶ್ಮೀರಿ ಪಂಡಿತರ ಪುನರ್ವಸತಿಗೂ ಸಹಾಯಕಾರಿಯಾಗಲಿದೆ ಎಂದು ನಿಯೋಗ ಸಂತೋಷ ವ್ಯಕ್ತಪಡಿಸಿದೆ ಎನ್ನಲಾಗಿದೆ.

Scroll to load tweet…

ಭಾರತದ ಪ್ರಗತಿಗೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಬೆಂಬಲಿಸುವುದಾಗಿ ನಿಯೋಗ ತಿಳಿಸಿದ್ದು, 7 ಲಕ್ಷ ಕಾಶ್ಮೀರಿ ಪಂಡಿತರ ಪರವಾಗಿ ಪ್ರಧಾನಿ ಮೋದಿ ಅವರಿಗೆರ ಧನ್ಯವಾದ ಸಲ್ಲಿಸುವುದಾಗಿ ನಿಯೋಗ ತಿಳಿಸಿದೆ.

Scroll to load tweet…

ಈ ವೇಳೆ ಕಾಶ್ಮೀರಿ ಪಂಡಿತರ ನಿಯೋಗವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಂಡಿತ ಸಮುದಾಯ ಸಾಕಷ್ಟು ನೋವು ಸಹಿಸಿದ್ದು, ಇನ್ನು ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಭರವಸೆ ನೀಡಿದರು.