ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ| ಹೂಸ್ಟನ್ ನಲ್ಲಿ ಬಿಡುವಿರದ ಕಾರ್ಯಕ್ರಮದಲ್ಲಿ ಮೋದಿ ಭಾಗಿ| ಇಂಧನ ವಲಯದ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಸಭೆ| ಉಭಯ ದೇಶಗಳ ನಡುವೆ ಇಂಧನ ಹೂಡಿಕೆಯ ಅವಕಾಶಗಳ ವಿಸ್ತರಣೆಗೆ ಒತ್ತು| ಸಿಇಒಗಳೊಂದಿಗಿನ ಪ್ರಧಾನಿ ಮೋದಿ ಭೇಟಿ ಫಲಪ್ರದ ಎಂದ ವಿದೇಶಾಂಗ ಸಚಿವಾಲಯ|

ಹೂಸ್ಟನ್(ಸೆ.22): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಹೂಸ್ಟನ್’ನಲ್ಲಿ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿ ಮಾಡಿರುವ ಪ್ರಧಾನಿ, ಇಂಧನ ವಲಯದ ಸಿಇಒ ಸಭೆಯಲ್ಲೂ ಭಾಗವಹಿಸಿದ್ದಾರೆ.

ಇಂಧನ ವಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎರಡೂ ದೇಶಗಳು ಇಂಧನ ವಲಯದಲ್ಲಿ ಪರಸ್ಪರ ಭದ್ರತೆ ಹಾಗೂ ಹೂಡಿಕೆ ಅವಕಾಶಗಳ ವಿಸ್ತರಣೆಗೆ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

Scroll to load tweet…

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಹಳ ಸಚಿವಾಲಯ, ಇಂಧನ ವಲಯದ ಸಿಇಒಗಳೊಂದಿಗೆ ಮೋದಿ ನಡೆಸಿದ ಮಾತುಕತೆ ಫಲಪ್ರದವಾಗಿತ್ತು ಎಂದು ತಿಳಿಸಿದೆ. 

ಸಭೆಯಲ್ಲಿ ಎರಡೂ ದೇಶಗಳು ಇಂಧನ ವಲಯದಲ್ಲಿ ಭದ್ರತೆ ಮತ್ತು ಪರಸ್ಪರ ಹೂಡಿಕೆ ಅವಕಾಶಗಳ ವಿಸ್ತರಣೆಗೆ ಒಟ್ಟಾಗಿ ಕೆಲಸ ಮಾಡುವ ನಿರ್ಣಯಕ್ಕೆ ಬರಲಾಯಿತು ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.