ಸಿದ್ದುಗೆ HDK ಗುದ್ದು, ಟ್ವಿಟರ್‌ಗೆ ಕರ್ನಾಟಕದ ಕೂ ಸೆಡ್ಡು; ಫೆ.12ರ ಟಾಪ್ 10 ಸುದ್ದಿ!
ಜೆಡಿಎಸ್ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಇತ್ತ ಭಾರತದ ರಕ್ಷಣಾ ರಹಸ್ಯ ಮಾಹಿತಿ ಸೋರಿಕೆ ಮಾಡಿದ DRDO ಫೋಟೋಗ್ರಾಫರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಮೆರಿಕದ ಟ್ವೀಟರ್‌ಗೆ ಕರ್ನಾಟಕ ‘ಕೂ’ ಸಡ್ಡು ಹೊಡೆದಿದೆ. ಬೋಲ್ಡ್ ಲುಕ್‌ನಲ್ಲಿ ರಶ್ಮಿಕಾ, ಐಪಿಎಲ್ ಹರಾಜಿನಲ್ಲಿ 290 ಕ್ರಿಕೆಟಿಗರು ಸೇರಿದಂತೆ ಫೆಬ್ರವರಿ 12ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ, DRDO ಫೋಟೋಗ್ರಾಫರ್‌ಗೆ ಜೀವಾವಧಿ ಶಿಕ್ಷೆ !...
ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಫೋಟೋಗ್ರಾಫರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.
ಮೋದಿ ಕುರಿತ ಮಾನಹಾನಿ ವಿಡಿಯೋ; ಗೂಗೂಲ್ CEO ಸುಂದರ್ ಪಿಚೈ ಸೇರಿ 17 ಮಂದಿ ವಿರುದ್ಧ FIR!...
ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾನಹಾನಿ ಮಾಡಿದ ಆರೋಪದ ಮೇಲೆ ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ 17 ಮಂದಿ ವಿರುದ್ಧ ವಾರಣಾಸಿ ಪೊಲೀಸರು FIR ದಾಖಲಿಸಿದ್ದಾರೆ.
ಮನೆ ಮನೆ ಮುಸುರೆ ತಿಕ್ಕುತ್ತಿದ್ದವಳು ಈಗ ಮಿಸ್ ಇಂಡಿಯಾ ರನ್ನರ್ ಅಪ್...
ಮನೆ ಮನೆಯಲ್ಲಿ ಮುಸುರೆ ತಿಕ್ಕಿ, ರಾತ್ರಿಯೂ ಕೆಲಸ ಮಾಡಿ, ಹಗಲು ಓದುತ್ತಿದ್ದವಳು ಈಗ ಮಿಸ್ ಇಂಡಿಯಾ ರನ್ನರ್ ಅಪ್.. ಇದು ರಿಕ್ಷಾ ಚಾಲಕನ ಮಗಳು ಮಿಸ್ ಇಂಡಿಯಾ ಸ್ಟೇಜ್‌ನಲ್ಲಿ ಮಿಂಚಿದ ಕಥೆ.. ಇಲ್ನೋಡಿ ಪೋಟೋಸ್
ಅಮೆರಿಕದ ಟ್ವೀಟರ್‌ಗೆ ಕರ್ನಾಟಕ ‘ಕೂ’ ಸಡ್ಡು; ಏನಿದು ಕೂ ಆಪ್?...
‘ಕೂ’ ಎನ್ನುವುದು ಟ್ವೀಟರ್ ರೀತಿಯ ಒಂದು ಸಾಮಾಜಿಕ ಜಾಲತಾಣ ವೇದಿಕೆ. ಕೂ ಆ್ಯಪ್ 2020ರ ಮಾಚ್‌ರ್‍ನಲ್ಲಿ ಬಿಡುಗಡೆಗೊಂಡಿದೆ. ಭಾರತದಲ್ಲೇ ಅಭಿವೃದ್ಧಿಯಾದ ಆ್ಯಪ್ ಇದಾಗಿದೆ.
ಐಪಿಎಲ್ ಹರಾಜು 2021: ಅರ್ಜುನ್ ತೆಂಡುಲ್ಕರ್ ಮೂಲಬೆಲೆ ಕೇವಲ 20 ಲಕ್ಷ ರುಪಾಯಿ..!...
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ 2021ನೇ ಸಾಲಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ಲಭ್ಯರಿದ್ದು, ಅರ್ಜುನ್‌ಗೆ ಕೇವಲ 20 ಲಕ್ಷ ರುಪಾಯಿ ಮೂಲ ಬೆಲೆ ನಿಗದಿ ಮಾಡಲಾಗಿದೆ.
ಟಾಪ್ ಟಕ್ಕರ್‌ನಲ್ಲಿ ಬಾದ್ ಶಾ ಜೊತೆ ಕಿರಿಕ್ ಚೆಲುವೆಯ ಬೋಲ್ಡ್ ಲುಕ್..!...
ಬಾಲಿವುಡ್ ಖ್ಯಾತ ರ್ಯಾಪರ್ ಬಾದ್ ಶಾ ಜೊತೆಗೆ ವಿಡಿಯೋ ಸಾಂಗ್ ಮಾಡಿದ ರಶ್ಮಿಕಾ ಮಂದಣ್ಣ ಟಾಪ್ ಟಕ್ಕರ್‌ನಲ್ಲಿ ಬೋಲ್ಡ್ & ಡಿಫರೆಂಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಇಲ್ನೋಡಿ ಫೋಟೋಸ್
ಮತ್ತಷ್ಟು ಏರಿದ ಪೆಟ್ರೋಲ್ ದರ : ಜೇಬಿಗೆ ಬರೆ...
ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆ ಏರಿಕೆ ಪರ್ವ ಮುಂದುವರಿದಿದೆ. ಲೀಟರ್‌ಗೆ 100ನ್ನು ಸಮೀಪಿಸಿದೆ.
PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್...
ಇ-ಬೈಕ್ ಸಾಮಾನ್ಯವಾಗಿ ತುಟ್ಟಿಯಾಗಿರುತ್ತವೆ. ಆದರೆ, ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ವೊಂದು ಪರ್ಸನಲ್ ಹಾಗೂ ಕಮರ್ಷಿಯಲ್ ಬಳಕೆಗೆ ಅನುಕೂಲವಾಗುವಂಥ ಇ-ಬೈಕ್ ಅಭಿವೃದ್ಧಪಡಿಸಿದ್ದು, ಅದರ ಬೆಲೆ 30 ಸಾವಿರ ಇರಲಿದೆ ಮತ್ತು ಇದಕ್ಕೆ ಯಾವುದೇ ನೋಂದಣಿ ಹಾಗೂ ಚಲಾಯಿಸಲು ಚಾಲನಾ ಪರವಾನಿಗೆ(ಡಿಎಲ್) ಬೇಕಾಗಿಲ್ಲ!
ಜೆಡಿಎಸ್ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ...
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತೆ ಆಕ್ರೋಶ ಹೊರಹಾಕಿದ್ದಾರೆ.
'ಈ ಬಾರಿ ಮೋದಿ ವಿಕಾಸ, ಮಮತಾ ವಿನಾಶ ಸಮರ'...
ಮಮತಾ ಬ್ಯಾನರ್ಜಿ ಅವರೊಬ್ಬ ವಿಫಲ ಆಡಳಿತಗಾರ್ತಿ ಎಂದು ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಮೋದಿ ವಿಕಾರ ಮಮತಾ ವಿನಾಶ ಎಂದು ಹೇಳಿದರು.