ನವದೆಹಲಿ (ಫೆ.12): ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಬೆಲೆ ಏರಿಕೆ ಪರ್ವ 3ನೇ ದಿನವಾದ ಗುರುವಾರವೂ ಮುಂದುವರಿದಿದೆ. 

 ಪೆಟ್ರೋಲ್‌ಗೆ 25 ಪೈಸೆ ಹಾಗೂ ಡೀಸೆಲ್‌ಗೆ 30 ಪೈಸೆಯಷ್ಟುಏರಿಕೆಯಾಗಿದೆ. ಇದರೊಂದಿಗೆ ಕಳೆದ 3 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವು ತಲಾ 90 ಪೈಸೆಯಷ್ಟುಏರಿಕೆಯಾದಂತಾಗಿದೆ. 

ಮತ್ತೆ ತೈಲ ದರ ಏರಿಕೆ ಬರೆ, ಗ್ರಾಹಕ ಕಂಗಾಲು! ...

ಇದರಿಂದಾಗಿ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ ದರ 94.36 ರು. ಮತ್ತು ಡೀಸೆಲ್‌ ಬೆಲೆ 84.94 ರು.ಗೆ ಜಿಗಿದಿದ್ದರೆ, ದೆಹಲಿಯಲ್ಲಿ ಪೆಟ್ರೋಲ್‌ 87.85 ರು. ಮತ್ತು ಡೀಸೆಲ್‌ಗೆ 78.03 ರು.ಗೆ ತಲುಪಿದೆ. 

ಇದು ಈವರೆಗಿನ ಗರಿಷ್ಠ ದಾಖಲೆಯಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಪೆಟ್ರೋಲ್‌ ದರವು 90.78 ರು. ಹಾಗೂ ಡೀಸೆಲ್‌ಗೆ 82.72 ರು.ಗೆ ಮುಟ್ಟಿದೆ.