ನವದೆಹಲಿ(ಫೆ.12): ಮುಂಬೈನ ವೇಗದ ಬೌಲರ್‌ ಅರ್ಜುನ್‌ ತೆಂಡುಲ್ಕರ್‌ ಮುಂಬರುವ ಐಪಿಎಲ್ ಆಟಗಾರರ ಹರಾಜಿಗೆ ಲಭ್ಯವಿದ್ದು, ಸಚಿನ್ ತೆಂಡುಲ್ಕರ್ ಪುತ್ರನಿಗೆ ಮೂಲ ಬೆಲೆ 20 ಲಕ್ಷ ರುಪಾಯಿ ನಿಗದಿ ಪಡಿಸಲಾಗಿದೆ. ಅರ್ಜುನ್‌ ತೆಂಡುಲ್ಕರ್ ಅವರನ್ನು ಯಾವ ಫ್ರಾಂಚೈಸಿ ಖರೀದಿಸಲಿದೆ ಎನ್ನುವ ಕುತೂಹಲ ಜೋರಾಗಿದೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯುವ ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಒಟ್ಟು 292 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಫೆಬ್ರವರಿ 18ರಂದು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ 2021ನೇ ಸಾಲಿನ ಐಪಿಎಲ್‌ ಆಟಗಾರರ ಹರಾಜು ನಡೆಯಲಿದೆ. ಒಟ್ಟು 1114 ಆಟಗಾರರು ಮಿನಿ ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ 8 ಫ್ರಾಂಚೈಸಿಗಳು ತಮ್ಮ ಆದ್ಯತೆಯ ಹೆಸರುಗಳನ್ನು ಸೂಚಿಸಿದ್ದರು. ಈ ಪೈಕಿ 292 ಆಟಗಾರರನ್ನು ಹರಾಜಿಗೆ ಬಿಸಿಸಿಐ ಅಂತಿಮಗೊಳಿಸಿದೆ.

ಐಪಿಎಲ್‌ ಹರಾಜು 2021: ಯಾವ ಫ್ರಾಂಚೈಸಿ ಎಷ್ಟು ಆಟಗಾರರನ್ನು ಖರೀದಿಸಬಹುದು..?

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೂಲಕ ಅರ್ಜುನ್ ತೆಂಡುಲ್ಕರ್‌ ಹರಾಜಿಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದರು. ಜನವರಿ 15ರಂದು ಹರ್ಯಾಣ ವಿರುದ್ದ ಸೀನಿಯರ್ಸ್‌ ತಂಡಕ್ಕೆ ಸಚಿನ್ ತೆಂಡುಲ್ಕರ್ ಪುತ್ರ ಪಾದಾರ್ಪಣೆ ಮಾಡಿದ್ದರು. ಅರ್ಜುನ್‌ ತೆಂಡುಲ್ಕರ್ ಈ ಹಿಂದೆ ಟೀಂ ಇಂಡಿಯಾ ನೆಟ್‌ ಬೌಲರ್‌ ಆಗಿಯೂ ಕಾಣಿಸಿಕೊಂಡಿದ್ದರು. ಜತೆಗೆ ಅರ್ಜುನ್‌ ಮುಂಬೈ ಅಂಡರ್‌ 19 ತಂಡವನ್ನು ಪ್ರತಿನಿಧಿಸಿದ್ದರು. ಇನ್ನು 2018ರಲ್ಲಿ ಭಾರತ ಪರ ಅಂಡರ್‌ 19 ತಂಡಕ್ಕೂ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆ ಮಾಡಿದ್ದರು.