ಕರೆಂಟ್ ಬಿಲ್ ನೋಡಿ ತಲೆತಿರುಗಿ ಬಿದ್ದ ನಟಿ, ರಾಜ್ಯದ ಜನತೆಗೆ ಕೊರೋನಾ ಭೀತಿ; ಜೂ.29ರ ಟಾಪ್ 10 ಸುದ್ದಿ!
ಬೆಂಗಳೂರಿನಲ್ಲಿ ಕೊರೋನಾ ಆತಂಕ ಹೆಚ್ಚಾಗುತ್ತಿರುವ ಕಾರಣ ಜನ ತಮ್ಮ ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ಲಾಕ್‌ಡೌನ್ ಅವಧಿ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಕೆಲ ನಿಯಮಗಳು ಬದಲಾಗುತ್ತಿದೆ. ಗುಜರಾತ್ ಮಾಜಿ ಸಿಎಂಗೆ ಕೊರೋನಾ ವಕ್ಕರಿಸಿದೆ. ಇತ್ತ ಮನೆಯಲ್ಲೇ ಕೊರೋನಾ ತಪಾಸಣೆ ನಡೆಸುವ ಕಿಟ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ಬೆಜ್ಜಿ ಬಿದ್ದ ಸ್ಯಾಂಡಲ್ವುಡ್ ನಟಿ. ಜೂನ್ 29ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
ಕೊರೋನಾ ಭೀತಿ: ಸ್ವಂತ ವಾಹನಗಳಲ್ಲಿ ಊರುಗಳತ್ತ ಜನ ದೌಡು!
ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೆಚ್ಚಿಬಿದ್ದಿರುವ ಜನರು ಊರುಗಳತ್ತ ದೌಡಾಯಿಸುತ್ತಿದ್ದಾರೆ.
ಮಾಜಿ ಸಿಎಂಗೆ ಕೊರೋನಾ ಸೋಂಕು: ಮೋದಿಯಿಂದ ಕರೆ!...
ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖಂಡ ಶಂಕರ್ ಸಿನ್ಹ ವಘೇಲಾ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ಅಹಮದಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲೇ ಕೊರೋನಾ ಪರೀಕ್ಷೆ ಮಾಡಲು ಬರಲಿದೆ ಹೊಸ ಟೆಸ್ಟ್ ಕಿಟ್ !
ದೇಶಾದ್ಯಂತ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೊರೋನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿರುವವರಿಗಾಗಿ ಮನೆಯಲ್ಲೇ ಸ್ವಯಂ ಟೆಸ್ಟ್ ಮಾಡಿಕೊಳ್ಳುವ ಕಿಟ್‌ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದೆಹಲಿ ಐಐಟಿ ಹಾಗೂ ರಾಷ್ಟ್ರೀಯ ರಾಸಾಯನಿಕ ಲ್ಯಾಬೋರೇಟರಿ (ಎನ್‌ಸಿಎಲ್) ಇದನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಸಂಭವವಿದೆ.
ಕೊರೊನಾ ಮರಣ ಮೃದಂಗ: ರಾಜ್ಯದಲ್ಲಿ ಇಂದು ಮೂವರ ಸಾವು
ಕರ್ನಾಟಕದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಇಂದು ರಾಜ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಉಪನ್ಯಾಸಕರೊಬ್ಬರು ಸಾವನ್ನಪ್ಪಿದರೆ, ದಕ್ಷಿಣ ಕನ್ನಡದಲ್ಲಿ 60 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಬಾಗಲಕೋಟೆಯಲ್ಲಿ ಡಿ ದರ್ಜೆ ನೌಕರರೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಂತೂ ಕೊರೊನಾ ಮಿತಿ ಮೀರುತ್ತಿದೆ.
ಕರೆಂಟ್ ಬಿಲ್ ನೋಡಿ ತಲೆ ಸುತ್ತಿ ಬಿದ್ದ ಕನ್ನಡದ ನಟಿ; ಇಷ್ಟೊಂದು ಹಣ ಹೇಗೆ ಕಟ್ಟೋದು?
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದಲ್ಲಿ ಮಿಂಚುತ್ತಿರುವ ನಟಿ ಶ್ರದ್ಧಾ ದಾಸ್ ಲಾಕ್‌ಡೌನ್‌ನಲ್ಲಿ ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಬಿಲ್ ಎಷ್ಟು ಬಂದಿದೆ ಗೊತ್ತಾ ?
ತಮಿಳು ನಟ ವಿಶಾಲ್ ಜೊತೆ ಒಂದಾದ ರಾಕಿಂಗ್ ಸ್ಟಾರ್ ಯಶ್; ಯಾವ ವಿಚಾರಕ್ಕೆ?
ಕಾಲಿವುಡ್ ನಟ, ನಿರ್ದೇಶಕ ಹಾಗೂ ವಿತರಕ ವಿಶಾಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಈಗ ಕೈ ಜೋಡಿಸಿದ್ದಾರೆ. ತಲುಗು ಸಿನಿಮಾ ಕನ್ನಡ - ಸಿನಿಮಾ ಇನ್ನು ಮುಂದೆ ಒಂದೇ. ಯಾವುದೇ ಬೇಧಭಾವವಿಲ್ಲದೇ ಅಭಿಮಾನಿಗಳು ಎರಡೂ ಭಾಷಿಗರನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಈ ಸ್ಟಾರ್ ನಟರು ಮಾಡುತ್ತಿರುವ ಕೆಲಸ ನೋಡಿದ್ರೆ ನೀವೇ ಮೆಚ್ಚಿ ಕೊಳ್ಳುತ್ತೀರ.
ನಿಯಂತ್ರಣಕ್ಕೆ ಬಾರದ ಕೊರೋನಾ: ಸಂಜೆ 4ರಿಂದ ಬೆಳಗ್ಗೆ 6 ರವರೆಗೆ ಲಾಕ್‌ಡೌನ್ ಜಾರಿ..!
ಕೊರೋನಾ ಕರಿಛಾಯೆ ಜಿಲ್ಲೆಯ ಮೇಲೆ ಬಿದ್ದಿದ್ದು, ಕೊರೋನಾ ವೈರಸ್ ಎದುರು ಹೋರಾಡುವುದು ಬಹಳ ದೊಡ್ಡ ಸವಾಲಾಗಿರುವುದರಿಂದ ಜಿಲ್ಲೆಯಲ್ಲಿ ಇಂದಿನಿಂದ(ಜೂ.29) ರಿಂದ ಪ್ರತಿದಿನ ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಲೌಕ್‌ಡೌನ್ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಕೊರೋನಾ ಕಾರಣ ಆನ್‌ಲೈನ್ ಬುಕಿಂಗ್; 1ರ ಬದಲು 28 ಕಾರು ಬುಕ್ ಮಾಡಿದ ಗ್ರಾಹಕ ಕಂಗಾಲು!...
ಕೊರೋನಾ ವೈರಸ್ ಕಾರಣ ಬಹುತೇಕ ಕೆಲಸಗಳು ಆನ್‌ಲೈನ್, ಮನೆಯಲ್ಲೇ ನಡೆಯುತ್ತಿದೆ. ದಿನಸಿ, ತರಕಾರಿ, ಹಾಲು ಎಲ್ಲವೂ ಕೂಡ ಅನ್‌ಲೈನ್. ಇತ್ತ ವಾಹನ ಖರೀದಿ ಕೂಡ ಅನ್‌ಲೈನ್ ಆಗಿದೆ. ವೈರಸ್ ಭೀತಿಯಿಂದ ಗ್ರಾಹಕನೋರ್ವ ಟೆಸ್ಲಾ ಕಾರು ಖರೀದಿಸಲು ಆನ್‌ಲೈನ್ ಮೊರೆ ಹೋಗಿದ್ದಾರೆ. 1 ಕಾರು ಬುಕ್ ಮಾಡುವ ಬದಲು ಎಡವಟ್ಟಿನಿಂದ 28 ಕಾರು ಬುಕ್ ಮಾಡಿದ್ದಾನೆ. ಇಷ್ಟೇ ಅಲ್ಲ, ಈತ ಉಳಿಸಿದ್ದ ಹಣವೆಲ್ಲಾ ಕ್ಷಣ ಮಾತ್ರದಲ್ಲಿ ಆವಿಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಹೊಸ ರೂಲ್ಸ್; ಬದಲಾವಣೆ ಹೇಗಿರಲಿದೆ?...
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಜುಲೈ 7 ರ ಬಳಿಕ ಬೆಂಗಳೂರಿನಲ್ಲಿ ಹೊಸ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ಇದೆ. ಇಂತದ್ದೊಂದು ಸುಳಿವನ್ನು ಉಸ್ತುವಾರಿ ಸಚಿವ ಆರ್. ಅಶೋಕ್ ಕೊಟ್ಟಿದ್ದಾರೆ. ಈಗಾಗಲೇ ನೈಟ್ ಕರ್ಫ್ಯೂ ಹಾಗೂ ಭಾನುವಾರ ಲಾಕ್ಡೌನ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಇದರ ಜೊತೆಗೆ ಹೊಸ ರೂಲ್ಸ್ ಬರುವ ಸುಳಿವನ್ನು ಆರ್ ಅಶೋಕ್ ನೀಡಿದ್ದಾರೆ.
ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ!
ಸೆಕ್ಸ್ ಅನುಭವ ಕೊಡುವ ರೋಬೋಟ್‌ಗಳು ಐದಾರು ವರ್ಷಗಳಿಂದಲೂ ಬೇಡಿಕೆಯಲ್ಲಿವೆ. ಅದರಲ್ಲೂ ಕೆಲವು ಸೆಲೆಬ್ರಿಟಿಗಳಂತೆ ಕಾಣುವ ಗೊಂಬೆಗಳಿಗೆ ಭಾರಿ ಬೇಡಿಕೆ.