ಸಂವಿಧಾನ ಕೆಟ್ಟವರ ಕೈಸೇರಿದರೆ ಅಪಾಯ: ಸಿಎಂ ಸಿದ್ದರಾಮಯ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗ ಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಅದರ ಆಶಯ ಜಾರಿಗೆ ಬರುತ್ತದೆ. ಇಲ್ಲದಿದ್ದರೆ ಅಪಾಯ ಎದುರಾಗುವ ಸಾಧ್ಯತೆಯಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah Talks Indian Constitution grg

ಬೆಂಗಳೂರು(ನ.27):  ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಟ್ಟರು. 

ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ಅಂಗೀಕರಣ 75ನೇ ದಿನೋತ್ಸವ ಉದ್ಘಾಟಿಸಿ, ಪ್ರಜಾಪ್ರಭುತ್ವ ದಿನದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಸಂಘಟನೆಗಳ ಮುಖಂಡರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದರು. 

ಬಿಜೆಪಿ, ಆರ್‌ಎಸ್‌ಎಸ್‌ ಸಂವಿಧಾನ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗ ಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಅದರ ಆಶಯ ಜಾರಿಗೆ ಬರುತ್ತದೆ. ಇಲ್ಲದಿದ್ದರೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಸಂವಿಧಾನದ ಮೌಲ್ಯಗಳನ್ನು ವಿರೋಧಿ ಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು. 

ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವು ದೆಂದರೆ ಎಂದರೆ ಸಾಮಾಜಿಕ ನ್ಯಾಯ, ಸಮಾನತೆ, ಬ್ರಾತೃತ್ವವನ್ನು ಪಾಲಿಸುವುದು ಎಂದರ್ಥ. ಜಾತೀ ಯತೆ ಹೋಗಿ ಸಮಾನತೆ ಬರಬೇಕು ಎಂದರೆ ರಾಜ ಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ ವನ್ನೂ ಒದಗಿಸಿಕೊಳ್ಳಬೇಕಿದೆ ಎಂದು ಹೇಳಿದರು. 

ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಂವಿಧಾನ ಎಂದರೆ ಎಲ್ಲ ಜಾತಿ, ಧರ್ಮಗಳನ್ನು ಕಾಪಾಡುವ ಮಹಾಗ್ರಂಥ, ರಾಜಕಾರಣಿಗಳು ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಮಾರಾಟವಾಗ ಬಾರದು ಎಂಬುದು ಅಂಬೇಡ್ಕರ್ ಮಾತು. ಅದನ್ನು ನಾವೆಲ್ಲ ಪಾಲಿಸಬೇಕು ಎಂದರು. 

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌. ಸಿ.ಮಹದೇವಪ್ಪ ಮಾತನಾಡಿ, ವಿಶ್ವದ ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ ಬಳಿಕ ಅಂಬೇಡ್ಕ‌ರ್ ಹಾಗೂ ಇತರೆ ತಜ್ಞರು ಸೇರಿ ತಮ್ಮದೇ ಶೈಲಿಯಲ್ಲಿ ದೇಶಕ್ಕೆ ಉತ್ಕೃಷ್ಟ ಅತ್ಯುನ್ನತವಾದ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನ ರಕ್ಷಣೆ ಮಾಡುವುದೇ ಕಾಂಗ್ರೆಸ್‌ನ ಮೂಲ ಗುರಿ ಎಂದು ತಿಳಿಸಿದರು. 

ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದ ರಾಜ್, ನಜೀರ್‌ ಅಹ್ಮದ್, ಶಾಸಕ ಯು.ಬಿ. ವೆಂಕಟೇಶ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಆಯುಕ್ತ ರಾಕೇಶ್ ಮತ್ತಿತರರಿದ್ದರು.

ಟ್ಯಾಬ್ ವಿತರಣೆ 

ಕರ್ನಾಟಕ ರಾಜ್ಯ ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಇತರೆ ಪೂರಕ ಪರೀಕ್ಷೆಗಳಿಗೆ ಅನುಕೂಲ ವಾಗುವ ಟ್ಯಾಬ್‌ಗಳನ್ನು ಇದೇ ವೇಳೆ ಸಿದ್ದರಾಮಯ್ಯ ವಿತರಿಸಿದರು. ಜತೆಗೆ ಕರ್ನಾಟಕ ರಾಜ್ಯ ವಸತಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವೆಬ್‌ಸೈಟ್‌ಗೆ ಇದೇ ವೇಳೆ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ 3 ಕೋಟಿಗೂ ಅಧಿಕ ಮಂದಿ ಸೇರಿ ಮಾನವ ಸರಪಳಿ ರೂಪಿಸಿದ ಕಾರ್ಯಕ್ರಮದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದರ ಪ್ರಮಾಣ ಪತ್ರ ಪಡೆದರು.

ಎಲ್ಲರೂ ಸಂವಿಧಾನ ಗೌರವಿಸಿ: ಹೊರಟ್ಟಿ

ಬೆಂಗಳೂರು: ದೇಶದ ಸಂವಿಧಾನದ ತಿರುಳನ್ನು ಅರಿತುಕೊಳ್ಳು ವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜಗತ್ತಿ ನಲ್ಲೇ ನಮ್ಮ ಸಂವಿಧಾನ ಶ್ರೇಷ್ಠವಾಗಿದ್ದು, ಇದನ್ನು ಎಲ್ಲರೂ ಗೌರವಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕರೆ ನೀಡಿದರು. 

ವಿಶ್ವಗುರು ಬುದ್ದ ಪ್ರೊಡಕ್ಷನ್ಸ್‌ನಿಂದ ಮಂಗಳ ವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸಂ ವಿಧಾನದ ಅಮೃತ ಮಹೋತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ನಮ್ಮ ಸಂವಿಧಾನದ ತಿರುಳನ್ನು ಅರ್ಥ ಮಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರಪಂಚದಲ್ಲೇ ನಮ್ಮ ಸಂವಿಧಾನ ಶ್ರೇಷ್ಠವಾಗಿದ್ದು ಎಲ್ಲರೂ ಇದನ್ನು ಗೌರವಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದಲ್ಲಿ ಜನಿಸದಿದ್ದರೆ ನಮ್ಮ ಸಂವಿಧಾನದಲ್ಲಿರುವ ಪರಿಕಲ್ಪನೆಯನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಸ್ವತಂತ್ರ ಭಾರತದ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದರು. 

ಕೊಪ್ಪಳ: ಆರ್‌ಎಸ್‌ಎಸ್‌ ಬಗ್ಗೆ ಪುರುಷೋತ್ತಮ ಬಿಳಿಮಲೆ ಟೀಕೆ, ಸಾಹಿತ್ಯಾಸಕ್ತರ ವಿರೋಧ

ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ಆಗದೆ ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು. ಹಳ್ಳಿಗಳಲ್ಲಿ ಸಂವಿಧಾನದ ಮಾಹಿತಿಯೇ ಇರುವುದಿಲ್ಲ. ಹೀ ಗಾಗಿ ಸಂವಿಧಾನದ ಬಗ್ಗೆ ಹಳ್ಳಿಗಳಲ್ಲಿ ಪರಿಣಾಮ ಕಾರಿಯಾಗಿ ಜಾಗೃತಿ ಮೂಡಿಸಬೇಕು. ಪರಿಶಿ ಷ್ಟರು ಮಾತ್ರ ಅಂಬೇಡ್ಕರ್ ಜಯಂತಿ ಆಚರಿಸದೇ ಎಲ್ಲ ಸಮುದಾಯವೂ ಜಯಂತಿ ಆಚರಿಸು ವಂತಾಗಬೇಕು ಎಂದು ಆಶಿಸಿದರು. 

ಈ ವೇಳೆ ಸಂವಿಧಾನ ಪೀಠಿಕೆ ಓದಲಾಯಿತು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ವಿಧಾ ನಸಭೆ ಸಚಿವಾಲಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಪರಿಷತ್‌ನ ಕೆ.ಆರ್.ಮಹಾಲಕ್ಷ್ಮಿ, ವಿಶ್ವಗುರು ಬುದ್ದ ಪ್ರೊಡ ಕ್ಷನ್ಸ್‌ನ ಪ್ರಧಾನ ನಿರ್ದೇಶಕ ಅರುಣ ಕುಮಾರ್‌ ನಾಗರಾಜ್ ದಿವಾ ಣಜಿ, ಯೋಜನೆ ವ್ಯವಸ್ಥಾಪಕ ಕನ್ನಾಯಕನಹಳ್ಳಿ ಕುಮಾರ್‌ರಾಮೇಗೌಡ, ಸಂಚಾಲಕರಾದ ಎಚ್.ಸತೀಶ್ ಕುಮಾರ್, ಸಿದ್ದಲಿಂಗ ಮೂರ್ತಿ, ಬಿ.ಆರ್.ಬೀರೇಶ್, ಸಂಯೋಜಕರಾದ ಪಿ.ಬಿ. ಸುರೇಶ್, ಶರಣಕುಮಾರ್ ಮತ್ತಿತರಿದ್ದರು.

Latest Videos
Follow Us:
Download App:
  • android
  • ios