ರಾಜಸ್ಥಾನ (ಡಿ. 18): ಭರ್ಜರಿ ವಿಜಯದ ನಂತರವೂ ರಾಹುಲ್‌ರಿಗೆ ತಲೆನೋವು ತಂದಿದ್ದು ರಾಜಸ್ಥಾನದ ಮುಖ್ಯಮಂತ್ರಿ ಆಯ್ಕೆ. ಮೊದಲ ದಿನವೇ ಅಶೋಕ್ ಗೆಹ್ಲೋಟ್ ಪರವಾಗಿ ಸೋನಿಯಾ ಒಲವು ವ್ಯಕ್ತವಾದಾಗ ಬೇಸರಿಸಿಕೊಂಡ ಸಚಿನ್ ಪೈಲಟ್ ಸಿಟ್ಟಿನಿಂದಲೇ ‘ಕಳೆದ 5 ವರ್ಷಗಳಲ್ಲಿ ತಾನು ಪಟ್ಟ ಕಷ್ಟ ಎಲ್ಲವನ್ನೂ ವಿವರಿಸಿ, ಈಗ ಯಾಕೆ ಗೆಹ್ಲೋಟ್‌ರನ್ನು ತರುತ್ತಿದ್ದೀರಿ?’ ಎಂದು ನೇರವಾಗಿಯೇ ರಾಹುಲ್‌ರನ್ನು ಕೇಳಿದ್ದಾರೆ.

ಮ. ಪ್ರ.ದಲ್ಲಿ ಜ್ಯೋತಿರಾದಿತ್ಯರನ್ನು ಬಿಟ್ಟು ಕಮಲ್‌ನಾಥ್‌ಗೆ ಮಣೆ ಹಾಕಿದ್ಯಾಕೆ?

ಇದೆಲ್ಲದರ ಮಧ್ಯೆ ದೌಸಾದಲ್ಲಿ ಗುಜ್ಜರ್‌ಗಳು ಬೀದಿಗಿಳಿದು ಹಿಂಸಾಚಾರ ಆರಂಭಿಸಿದಾಗ ರಾಹುಲ್ ಗಾಂಧಿ ಗೆಹ್ಲೋಟ್ ಮತ್ತುಪೈಲಟ್ ಇಬ್ಬರನ್ನೂ ಎದುರುಬದುರು ಕೂರಿಸಿ ಒಂದು ಗಂಟೆ ಮಾತನಾಡಿದರೂ ಪರಿಹಾರ ಸಿಕ್ಕಿರಲಿಲ್ಲ. ರಾಜಸ್ಥಾನದಲ್ಲಿ ಪೈಲಟ್  ಯುವಕರು ಹೌದಾದರೂ 6 ಪ್ರತಿಶತ ಇರುವ ಗುಜ್ಜರ್ ಹಾಗೂ ಮೀನಾಗಳ ಜೊತೆಗಿನ ತಿಕ್ಕಾಟವೇ ದೊಡ್ಡ ಸಮಸ್ಯೆ. ಲೋಕಸಭೆಗಿಂತ ಮುಂಚೆ ಇದರಲ್ಲಿ ಸಿಕ್ಕಿಹಾಕಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ.

ಮಧ್ಯಪ್ರದೇಶದ ಸಿಎಂ ಇಂದಿರಾ ಗಾಂಧಿಯವರ 3 ನೇ ಪುತ್ರ!

ಕೊನೆಗೆ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಕುಳಿತುಕೊಂಡು ಸಚಿನ್ ಪೈಲಟ್‌ಗೆ ‘ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಸುತ್ತೇವೆ. ಒಪ್ಪಿಕೊಳ್ಳಿ ..’ ಎಂದಾಗ ಮೊದಲಿಗೆ ಸಾಧ್ಯವೇ ಇಲ್ಲ ಎಂದ ಸಚಿನ್ ಮರುದಿನ ಬೆಳಿಗ್ಗೆ ಒಪ್ಪಿಕೊಂಡರು. ಅಶೋಕ್ ಗೆಹ್ಲೋಟ್‌ಗಿರುವ ಪ್ಲಸ್ ಎಂದರೆ ತೀರಾ ಹಿಂದುಳಿದ ಮಾಳಿ ಜಾತಿಯವರು. ಹೀಗಾಗಿ ಹಿಂದುಳಿದ 31 ಜಾತಿಗಳು ಅಶೋಕ್ ಗೆಹ್ಲೋಟ್ ಹೆಸರ ಮೇಲೆ ಒಟ್ಟಾಗಿ ಬರುತ್ತವೆ. 

2019 ಲೋಕಸಭಾ ಚುನಾವಣೆ: ಬಿಜೆಪಿಗೆ ಪ್ರಬಲ ಸ್ಪರ್ಧಿಗಳೇ ಇಲ್ಲ!

ಭೂಪೇಶ್ ವಾಚಾಳಿ, ಅದೇ ಸಮಸ್ಯೆ!

ಒಂದು ಕಾಲದಲ್ಲಿ ಹಿಂದುಳಿದ ವರ್ಗಗಳ ಅಸಮಾಧಾನದ ಕಾರಣದಿಂದ ಹಿಂದಿ ಪ್ರದೇಶವನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಈಗ ರಾಜಸ್ಥಾನದ ಜೊತೆಗೆ ಛತ್ತೀಸ್‌ಗಢದಲ್ಲಿ ಕೂಡ 14 ಪ್ರತಿಶತ ಇರುವ ಹಿಂದುಳಿದ ಕುರ್ಮಿ ಸಮುದಾಯದ ಭೂಪೇಶ್ ಬಾಘೇಲ್ ಅವರನ್ನು ಮುಖ್ಯಮಂತ್ರಿಯಾಗಿ ಕೂರಿಸಿದೆ.

ಆರ್‌ಬಿಐ: ನೆಹರು ಮಾಡಿದ್ದನ್ನೇ ಮಾಡಿದ ಮೋದಿ ಮೇಲೇಕೆ ಕಣ್ಣು?

ಛತ್ತೀಸ್‌ಗಢದಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ ರಮಣ ಸಿಂಗ್‌ರಿಂದ ಉಪಕೃತರಾಗದ ಕಾಂಗ್ರೆಸ್ ನಾಯಕರೇ ಇರಲಿಲ್ಲ. ಅಜಿತ್ ಜೋಗಿಯಿಂದ ಹಿಡಿದು ಕಾಂಗ್ರೆಸ್‌ನ ಬಹುತೇಕ ಶಾಸಕರ ಕೆಲಸಗಳನ್ನು ರಮಣ್ ಭಾಯಿ ಕುಳಿತಲ್ಲೇ ಮಾಡಿ ಕಳುಹಿಸುತ್ತಿದ್ದರು. ಆದರೆ ಇದಕ್ಕೆ ಅಪವಾದ ಭೂಪೇಶ್ ಬಾಘೇಲ್.

ನಿಂತಲ್ಲಿ ಕೂತಲ್ಲಿ ರಮಣ್ ವಿರುದ್ಧ ಟೀಕೆ ಮಾಡಿದ್ದರಿಂದಲೇ ಕಾಂಗ್ರೆಸ್‌ಗೆ ಗೆಲುವು ಸಿಕ್ಕಿದೆ. ಆದರೆ\ ಭೂಪೇಶ್ ಸ್ವಲ್ಪ ವಾಚಾಳಿ. ವಿರೋಧ ಪಕ್ಷದಲ್ಲಿದ್ದಾಗ ಓಕೆ. ಮುಖ್ಯಮಂತ್ರಿ ಆದ ಮೇಲೆ ಹೇಗೆ ಮ್ಯಾನೇಜ್ ಮಾಡುತ್ತಾರೆ ನೋಡಬೇಕು.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ