ನವದೆಹಲಿ (ಡಿ. 11):  2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಒಬ್ಬರು ಬಿಟ್ಟರೆ ಲೋಕಸಭೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಹೆವಿ ವೇಟ್‌ಗಳು ಯಾರು ಎಂದು ನೋಡಿದಾಗ ಕಾಣುವುದು ಎರಡೇ ಹೆಸರು. ಒಬ್ಬರು ರಾಜನಾಥ್ ಸಿಂಗ್, ಇನ್ನೊಬ್ಬರು ನಿತಿನ್ ಗಡ್ಕರಿ. ಅಡ್ವಾಣಿ, ಜೋಶಿ, ಕಲರಾಜ್ ಮಿಶ್ರಾ ವಯಸ್ಸಿನ ಕಾರಣದಿಂದ ಸ್ಪರ್ಧಿಸೋದು ಅನುಮಾನ.

ಆರ್‌ಬಿಐ: ನೆಹರು ಮಾಡಿದ್ದನ್ನೇ ಮಾಡಿದ ಮೋದಿ ಮೇಲೇಕೆ ಕಣ್ಣು? 

ಅಧಿಕಾರದಲ್ಲಿರುವುದರಿಂದ ಯೋಗಿ ಮತ್ತು ಮೌರ್ಯ ಸ್ಪರ್ಧಿಸೋದಿಲ್ಲ. ಸುಷ್ಮಾ ಸ್ವರಾಜ್ ಸ್ಪರ್ಧಿಸೋದಿಲ್ಲ. ಆರೋಗ್ಯ ನೋಡಿದರೆ ಜೇಟ್ಲಿ ಸಾಹೇಬರೂ ಇಲ್ಲ. ಚುನಾವಣಾ ಉಸ್ತುವಾರಿ ನೋಡಬೇಕಾದ ಅಮಿತ್ ಶಾ ಇದರಿಂದ ದೂರವೇ. ಸತತವಾಗಿ ಗೆದ್ದು ಬರುತ್ತಿದ್ದ ಅನಂತಕುಮಾರ್ ಮತ್ತು ಗೋಪಿನಾಥ್ ತೀರಿಕೊಂಡಿದ್ದಾರೆ. ಯಡಿಯೂರಪ್ಪನವರೂ ಸ್ಪರ್ಧಿಸೋದಿಲ್ಲ.

ಸುಪ್ರೀಂ ಜಡ್ಜ್ ಕೊಠಡಿ ಹೊಕ್ಕು ಅಲ್ಲಿ ಇಲ್ಲಿ ನೋಡಿದ್ದ ಮೋದಿ!

ನಾಲ್ಕೂವರೆ ವರ್ಷ ಅಧಿಕಾರ ಉಂಡಿರುವ ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ನಿರ್ಮಲಾ ಸೀತರಾಮನ್, ಜೆ ಪಿ ನಡ್ಡಾ, ಭೂಪೇಂದ್ರ ಯಾದವ್, ಅನಿಲ್ ಜೈನ್ ರಾಜ್ಯಸಭೆಯಲ್ಲಿ ಆರಾಮವಾಗಿದ್ದಾರೆ. ಅವರೇನೂ ಕೈಕೆಸರು ಮಾಡಿಕೊಳ್ಳುವ ಮೂಡ್‌ನಲ್ಲಿ ಇಲ್ಲ.

ದೇಶಕ್ಕೆ ಯೋಗಾಸನ ಮಾಡಿಸುವ ಮೋದಿಗೆ ಇವರು ಶೀರ್ಷಾಸನ ಮಾಡಿಸುತ್ತಾರೆ!

ದಿಲ್ಲಿ ಅಧಿಕಾರದ ವಿಚಿತ್ರ ಏನಪ್ಪಾ ಎಂದರೆ, ಸೂತ್ರದಾರರೇ ಕೈಬಾಯಿ ಕೆಸರಿಸದೆ ಬೊಂಬೆ ಆಡಿಸೋದು. ಅವರಿಗೆಲ್ಲ ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಸುಲಭವಾಗಿ ಕ್ಯಾಬಿನೆಟ್ ಹುದ್ದೆ ಬೇಕಷ್ಟೆ. ಮಣ್ಣಲ್ಲಿ ಹೊರಳಾಡಿ, ಪೆಟ್ಟು ತಿಂದು, ಕೇಸ್ ಹಾಕಿಸಿಕೊಂಡು, ಜನರಿಂದ ಬೈಸಿಕೊಂಡು, ದುಡ್ಡು ಖರ್ಚು ಮಾಡಿ ಒಮ್ಮೆ ಎಂಪಿ ಆಗುವುದೇ ಸಾಕು ಬೇಕಾಗಿರುತ್ತದೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ