ಕೆಜಿಎಫ್ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಮಾಡಿರುವ ಟ್ವೀಟ್ ಭಾರೀ ಕುತೂಹಲ ಮೂಡಿಸಿದೆ.
ಬೆಂಗಳೂರು, [ಡಿ.21]: ಒಂದೆಡೆ ಕೆಜಿಎಫ್ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಬೆನ್ನಲ್ಲೇ, ಇನ್ನೊಂದೆಡೆ ರಾಕಿಂಗ್ ಸ್ಟಾರ್ ಯಶ್, ನಾಳೆ [ಶುಕ್ರವಾರ] ಕೆಜಿಎಫ್ ರಿಲೀಸ್ ಆಗಿತ್ತೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಚಿತ್ರದ ಟಿಕೆಟ್ ಅನ್ನು ಈಗ ಬುಕ್ ಮಾಡಿ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
KGF ಚಿತ್ರಕ್ಕೆ ಸಂಕಷ್ಟ: ಡಿ.21ಕ್ಕೆ ಬಿಡುಗಡೆ ಇಲ್ಲ
ನ್ಯಾಯಾಲಯದ ತಡೆ ಆದೇಶದ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿಲ್ಲವಾದರೂ, ಟಿಕೆಟ್ ಬುಕ್ ಮಾಡಿ ಎಂದು ತಿಳಿಸಿರುವುದು ಚಿತ್ರತಂಡದ ಮುಂದಿನ ನಡೆ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.
ಯಶ್ ರಿವೀಲ್ ಮಾಡಿದ್ರು ಕೆಜಿಎಫ್ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ
ಇನ್ನು ಈ ತಡೆ ಬಗ್ಗೆ ಕೆಜಿಎಫ್ ಚಿತ್ರ ತಂಡ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದು, ಕೋರ್ಟ್ ರಾತ್ರೋ ರಾತ್ರಿ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಕೆಜಿಎಫ್ ಬಿಡುಗಡೆಗೆ ಕ್ಷಣಗಣೆನೆ ಬೆನ್ನಲ್ಲಿಯೇ ಕೋರ್ಟ್ ತಡೆ ನೀಡಿರುವುದು ಅಭಿಮಾನಿಗಳಲ್ಲಿ ಚಿತ್ರತಂಡಕ್ಕೆ ಮಾತ್ರವಲ್ಲದೇ ಇಡೀ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
