Asianet Suvarna News Asianet Suvarna News

KGF ಚಿತ್ರಕ್ಕೆ ಸಂಕಷ್ಟ: ಡಿ.21ಕ್ಕೆ ಬಿಡುಗಡೆ ಇಲ್ಲ

KGF ಇನ್ನೇನು ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ಇದು ರಿಯಲಿ ಬಿಗ್ ಶಾಕ್. ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಗೆ ಕೋರ್ಟ್ ಬ್ರೇಕ್ ಹಾಕಿದೆ.  ಅಷ್ಟೇ ಅಲ್ಲ ಬಿಡುಗಡೆಗೆ ಡೆಡ್‌ಲೈನ್ ಸಹ ಕೊಟ್ಟಿದೆ.

Injunction order to Release Kannada Movie KFG  by Bengaluru ACMM on Dec 21
Author
Bengaluru, First Published Dec 20, 2018, 6:38 PM IST

ಬೆಂಗಳೂರು, [ಡಿ.20]: ಸ್ಯಾಂಡಲ್​ವುಡ್​​ನ ಬಹುನಿರೀಕ್ಷಿತ KGF ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ. KGF ಚಿತ್ರ ಬಿಡುಗಡೆಗೆ ಬೆಂಗಳೂರಿನ 10ನೇ ಎಸಿಎಂಎಂ ಮಧ್ಯಂತರ ತಡೆ ನೀಡಿ, ಆದೇಶಿಸಿದೆ.  ಆ ಮೂಲಕ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಕೆಜಿಎಫ್ 'ರೌಡಿ ತಂಗಂ' ಜೀವನಾಧಾರಿತ ಚಿತ್ರ ಎಂದು ಆರೋಪಿಸಲಾಗುತ್ತಿದೆ. ಈ ಚಿತ್ರ ಮಾಡಲು ಹಕ್ಕು ಪಡೆದಿದ್ದ ವೆಂಕಟೇಶ್​ ಎಂಬುವವರು 10ನೇ ಸಿಟಿ ಸಿವಿಲ್​​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಕೆಜಿಎಫ್‌ ಈ ತಂಗಂ ಆಧಾರಿತ ಚಿತ್ರವಾಗಿದ್ದು, ಇದರ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ವೆಂಕಟೇಶ್ ಆಗ್ರಹಿಸಿದ್ದರು. ಈ ಅರ್ಜಿಯನ್ನು ಸಮ್ಮಿತಿಸಿದ ಕೋರ್ಟ್ 2019ರ ಜನವರಿ 7ರವರೆಗೆ KGF​ ಚಿತ್ರ ಬಿಡುಗಡೆಗೆ ತಡೆ ನೀಡಿದೆ. 

 

 

ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ಚಿತ್ರದ ನಾಳಿನ ಎಲ್ಲ ಶೋಗಳ ಟಿಕೆಟ್ ಸೋಲ್ಡ್ ಔಟ್​ ಆಗಿದ್ದು, ತಡೆಯಾಜ್ಞೆಯಿಂದ ಇಡೀ ಚಿತ್ರತಂಡ ಹಾಗೂ ಚಿತ್ರಾಭಿಮಾನಿಗಳು ಕಂಗಾಲಾಗಿದ್ದಾರೆ.

Injunction order to Release Kannada Movie KFG  by Bengaluru ACMM on Dec 21

ಚಿನ್ನದ ಗಣಿಗೆ ಹೆಸರಾಗಿರುವ ಕೆಜಿಎಫ್‌ ಅನ್ನು ರಕ್ತಪಾತವಾದ ಸ್ಥಳವೆಂದು ಚಿತ್ರದಲ್ಲಿ ಬಿಂಬಿಸಲಾಗುತ್ತಿದ್ದು, ಚಿತ್ರದ ಟೈಟಲ್ ಬದಲಾಯಿಸಬೇಕೆಂದು ಮತ್ತೊಂದು ಕೇಸ್ ಬೆಂಗಳೂರಿನ ಸೆಷನ್ಸ್ ಕೋರ್ಟಿನಲ್ಲಿ ದಾಖಲಾಗಿದೆ. 

Follow Us:
Download App:
  • android
  • ios