ಆರ್‌ಎಸ್‌ಎಸ್‌ ಮತ್ತು ಬಿಜೆಪಿಯಲ್ಲಿ ಕರ್ನಾಟಕದ ಸೀಮಿತತೆ ದಾಟಿ ದೆಹಲಿಯಲ್ಲಿ ಇಡೀ ದೇಶದ ನಿರ್ಣಯ ಪ್ರಕ್ರಿಯೆವರೆಗೆ ಬಂದವರು ಕೆಲವೇ ಜನ. ಸಂಘದಲ್ಲಿ ಹೊ.ವೇ. ಶೇಷಾದ್ರಿ ಮತ್ತು ಈಗ ದತ್ತಾತ್ರೇಯ ಹೊಸಬಾಳೆ.

ಅತೃಪ್ತ ಶಾಸಕರ ಪರ ಮುಕುಲ್ ರೋಹಟಗಿ ವಾದ; ಒಂದು ದಿನದ ಫೀಸ್ ಮಾತ್ರ ಬಲು ದುಬಾರಿ!

ಇನ್ನು ಬಿಜೆಪಿಯಲ್ಲಿ ಜಗನ್ನಾಥ ರಾವ್‌ ಜೋಶಿ, ಅನಂತಕುಮಾರ್‌ ಮತ್ತು ಈಗ ಹೊಸ ಸೇರ್ಪಡೆ ಬಿ.ಎಲ್ ಸಂತೋಷ್‌. ಸಂಘದ ಪ್ರಚಾರಕ ಆಗಿಯೇ ಬಿಜೆಪಿಯಲ್ಲಿ ಇರುವ ಸಂತೋಷ್‌, ಏಕ್‌ದಂ ಮೋದಿ, ಶಾ ನಂತರದ ಸ್ಥಾನಕ್ಕೆ ಹೋಗಿ ತಲುಪಿದ್ದಾರೆ. ಈಗ ಸಂತೋಷ್‌ ಒಂದು ರೀತಿ ಬಿಜೆಪಿ ಹೈಕಮಾಂಡ್‌ ಎಂದು ಕರೆಯಬಹುದು.

ರಾಮ್ ಲಾಲ್ ಸಂಘಕ್ಕೆ ವಾಪಸ್ಸಾದ ನಂತರ ಆ ಜಾಗಕ್ಕೆ ಸತೀಶ್‌ ವೇಲಂಕರ್‌, ಸುನೀಲ್ ಅಂಬೇಕರ್‌ ಎಂಬ ಮರಾಠಿ ಪ್ರಚಾರಕರ ಹೆಸರು ಇದ್ದವಾದರೂ ಭಾಗವತ್‌, ಭಯ್ಯಾಜಿ, ಜೋಶಿ, ಹೊಸಬಾಳೆ, ಕೃಷ್ಣ ಗೋಪಾಲ್ ಇವರೆಲ್ಲ ಸೇರಿ ಆಯ್ಕೆ ಮಾಡಿದ್ದು ಪ್ರಖರ ಹಿಂದುವಾದಿ, ಇಂಗ್ಲಿಷ್‌ ಚೆನ್ನಾಗಿ ಬಲ್ಲ, ತಂತ್ರಜ್ಞಾನ ಉಪಯೋಗಿಸುವ ಸಂಘ ನಿಷ್ಠ ಸಂತೋಷ್‌ರನ್ನು.

ಅತೃಪ್ತ ಶಾಸಕರ ರಾಜೀನಾಮೆ; ಶೋ ಕೊಟ್ರಾ ಡಿಕೆಶಿ?

ಸಂತೋಷ್‌ ಒಬ್ಬ ಟಾಸ್ಕ್‌ ಮಾಸ್ಟರ್‌, ಕೆಲಸಗಾರ, ಬದ್ಧತೆ ಇರುವ ಪರಿಶ್ರಮಿ. ಆದರೆ, ತಾನು ಹೇಳಿದ್ದೇ ಸರಿ ಎಂಬ ಹಟಮಾರಿ ಸ್ವಭಾವವೇ ಸಮಸ್ಯೆ ಎಂದು ಕರ್ನಾಟಕದಲ್ಲಿ ಸಂಘ ಮತ್ತು ಬಿಜೆಪಿ ಎರಡರಲ್ಲೂ  ಭಿಪ್ರಾಯವಿದೆ. ಆದರೆ ದಿಲ್ಲಿಯಲ್ಲಿ ಸಂತೋಷ್‌ ಅವರಿಗೆ ಸಂಘ ಮತ್ತು ಬಿಜೆಪಿ ನಡುವೆ ಸಮನ್ವಯ ಕಾಪಾಡುವ ಕೆಲಸ ಕೊಡಲಾಗಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ