ಅತೃಪ್ತ ಶಾಸಕರ ಪರ ಮುಕುಲ್ ರೋಹಟ್ಗಿ ವಾದ | ಒಂದು ದಿನದ ವಾದಕ್ಕೆ 15 ಲಕ್ಷ ಫೀ ತೆಗೆದುಕೊಳ್ಳುತ್ತಾರೆ | ಅಭಿಷೇಕ್‌ ಮನು ಸಿಂಘ್ವಿ ಹೆಚ್ಚುಕಡಿಮೆ 18 ಲಕ್ಷ ಪಡೆಯುತ್ತಾರೆ 

ಶಾಸಕರು ರೆಸಾರ್ಟ್‌ ತಲುಪಿದಾಕ್ಷಣ ಹೋಟೆಲ್, ವಿಮಾನ, ಬಸ್ಸು, ಊಟ, ಸ್ಪಾ ಖರ್ಚು ಲೆಕ್ಕಹಾಕುವ ಜನರು ಕೋರ್ಟ್‌ ಖರ್ಚಿನ ಲೆಕ್ಕ ಮಾತ್ರ ಹಾಕುತ್ತಿಲ್ಲ. ಶಾಸಕರು ರೆಸಾರ್ಟ್‌ನಲ್ಲಿ ಪಾದಸ್ಪರ್ಶ ಮಾಡಿದರೆಂದರೆ ಕೋರ್ಟ್‌ಗೆ ಕೇಸ್‌ ಬಂತು ಅಂತಲೇ ಲೆಕ್ಕ.

ಅತೃಪ್ತ ಶಾಸಕರ ರಾಜೀನಾಮೆ; ಶೋ ಕೊಟ್ರಾ ಡಿಕೆಶಿ?

ಈಗಿನ ಪ್ರಕರಣ ಗಮನಿಸಿದರೆ, ಅತೃಪ್ತ ಶಾಸಕರ ಪರವಾಗಿ ವಾದಿಸುವ ಮುಕುಲ್ ರೋಹಟಗಿ ಒಂದು ದಿನ, ಒಂದು ಸಲ ಬಂದು ವಾದಿಸಲು ತೆಗೆದುಕೊಳ್ಳುವ ಫೀಸ್‌ 15 ಲಕ್ಷ. ಅದು 5 ನಿಮಿಷದ ವಾದ ಇರಲಿ ಅಥವಾ 20 ನಿಮಿಷದ್ದಿರಲಿ.

ಇನ್ನು ಅಭಿಷೇಕ್‌ ಮನು ಸಿಂಘ್ವಿ ಹೆಚ್ಚುಕಡಿಮೆ 18 ಲಕ್ಷ ಪಡೆಯುತ್ತಾರೆ. ರಾಜೀವ್‌ ಧವನ್‌ ಅವರ ಫೀಸ್‌ 10 ಲಕ್ಷದವರೆಗೆ ಇದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ ಸುಪ್ರೀಂಕೋರ್ಟ್‌ ವಕೀಲರು ಯಾರೂ ಕ್ಯಾಶ್‌ ತಗೊಳೋದಿಲ್ಲ. ಬಿಳಿ ಲೆಕ್ಕದಲ್ಲೇ ಅಕೌಂಟ್‌ಗೆ ದುಡ್ಡು ಹಾಕಬೇಕು. ಅಡ್ವಾನ್ಸ್‌ ದುಡ್ಡು ಹಾಕದೇ ಯಾರೂ ವಾದ ಮಂಡಿಸುವುದಿಲ್ಲ.

ಹೈಕಮಾಂಡ್‌ಗೆ ಸಿದ್ದರಾಮಯ್ಯ ಮೇಲೆ ಅಸಮಾಧಾನ?

2012 ರಲ್ಲಿ ಒಮ್ಮೆ ಅನರ್ಹ ಶಾಸಕರ ಪರವಾಗಿ ವಾದಿಸಲು ಬರಬೇಕಿದ್ದ ವಕೀಲರೊಬ್ಬರು ಅಡ್ವಾನ್ಸ್‌ ದುಡ್ಡೇ ಕೊಟ್ಟಿಲ್ಲ ಎಂದು ಕೋರ್ಟ್‌ಗೆ ಬರಲು ಅರ್ಧ ಗಂಟೆ ತಡ ಮಾಡಿದಾಗ, ತಮ್ಮ ಊರುಗಳಲ್ಲಿ ಮೆರೆಯುವ ಶಾಸಕರ ಕಣ್ಣಲ್ಲಿ ನೀರು ಜಿನುಗುತ್ತಿತ್ತು! 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್ ’ ಕ್ಲಿಕ್ ಮಾಡಿ