ಬೆಂಗಳೂರಿನಲ್ಲಿ ಮುನಿರತ್ನ, ಸೋಮಶೇಖರ ಅವರ ಟೀಂ ಮನೆಗೆ ಬಂದು ಹೋದಾಗಲೇ ಡಿಕೆಶಿಗೆ ಈ ಸರ್ಕಾರ ಉಳಿಯೋದಿಲ್ಲ ಎನ್ನುವುದು ಅರ್ಥವಾಗಿದೆ. ಹೀಗಾಗಿ ಮುಂದಿನ ಒಂದು ವಾರ ಸತತ ಸಭೆ ನಡೆಸಿ, ಪಕ್ಷದಲ್ಲಿ ಓಡಾಡಿ, ಕಷ್ಟಪಡುವ ನಾಯಕ ನಾನೊಬ್ಬನೇ ಎಂದು ತೋರಿಸುವ ಭರ್ಜರಿ ಪ್ರಯತ್ನ ನಡೆಸಿದರು.

ಹೈಕಮಾಂಡ್‌ಗೆ ಸಿದ್ದರಾಮಯ್ಯ ಮೇಲೆ ಅಸಮಾಧಾನ?

ಕ್ಯಾಮೆರಾಗಳಿಗೆ ಬೇಕಾದಂತೆ ಎಲ್ಲ ಚಿತ್ರಕಥೆ ಹೆಣೆಯುತ್ತ ಹೋದ ಟ್ರಬಲ್  ಶೂಟರ್‌, ಮೊದಲು ಮುಂಬೈನಲ್ಲಿ ಹೊರಗೆ ಇಡ್ಲಿ ವಡೆ ತಿಂದು ಬೆವರು ಸುರಿಸಿ, 100 ಕ್ಯಾಮೆರಾ ಎದುರು ಮುಂಬೈಯಿಂದ ದಿಲ್ಲಿಗೆ ಏನೆಲ್ಲಾ ಸಂದೇಶ ಕೊಡಬೇಕಿತ್ತೋ ಅದೆಲ್ಲ ಕೊಟ್ಟು ಬಂದರು. ನಂತರ ರಾತ್ರಿ 2 ಗಂಟೆಗೆ ಸೋಮಶೇಖರ್‌ ಮನೆಗೆ ಹೋಗಿ, ಮೀಡಿಯಾಗಳಿಗೆ ವಿಶ್ಯುವಲ್ಸ್‌ ಕೊಟ್ಟರು.

ಕೊನೆಗೆ 3 ಗಂಟೆಗೆ ಎಂಟಿಬಿ ಮನೆಗೆ ಹೋಗಿ, ಅವರನ್ನು ಸಿದ್ದು ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಒಬ್ಬ ಕುರುಬ ನಾಯಕನ ಮೇಲೆ ಕೂಡ ಸಿದ್ದುಗೆ ಹೋಲ್ಡ್ ಇಲ್ಲ ಎಂದು ತೋರಿಸಿದರು. ಬೆಂಗಳೂರು, ದಿಲ್ಲಿಯಲ್ಲಿ ಕುಳಿತು ನೋಡುವವರಿಗೆ ಇದು ಅತಿ ಅನ್ನಿಸಿದರೂ, ಸೋತು ಸುಣ್ಣ ಆಗಿರುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಹೀಗೆ ಗಟ್ಟಿನಿಲುವು ತೆಗೆದುಕೊಳ್ಳುವವರು ಇಷ್ಟ ಆಗುತ್ತಾರೆ.

ಭೇಟಿಯಾಗಲು ಹೋದ ರಾಜ್ಯ ನಾಯಕರಿಗೆ ಶಾ ಬುದ್ಧಿವಾದ

ಅಷ್ಟೇ ಅಲ್ಲ, ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಡಿಕೆಶಿ ಬೆನ್ನಿಗೆ ನಿಂತರು ಎನ್ನುವುದು ಒಕ್ಕಲಿಗ ಸಮುದಾಯದಲ್ಲಿ ಅವರ ಬಗ್ಗೆ ಸ್ವೀಕಾರಾರ್ಹತೆ ಹೆಚ್ಚಿಸುತ್ತದೆ. ಡಿಕೆಗೆ ಅದೇ ಬೇಕಲ್ಲವೇ.. ಬೆಂಗಳೂರಲ್ಲಿ ಅಧಿಕಾರ ಹೋದರೆ ದಿಲ್ಲಿಗೆ ಬರಬೇಕು, ದೊಡ್ಡ ಪಾಲಿಟಿಕ್ಸ್‌ ಮಾಡಬೇಕು ಎಂದು ಶಿವಕುಮಾರ್‌ ತಲೆಯಲ್ಲಿ ಇರಬಹುದು ಎಂದು ಅನ್ನಿಸುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’  ಕ್ಲಿಕ್ ಮಾಡಿ