1) 64 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ಇಲ್ಲಿದೆ ಪೂರ್ಣ ಪಟ್ಟಿ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಗಣ್ಯರಿಗೆ ಈ ಸಾಲಿನ ಅಂದರೆ 64ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕಲೆ (ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ), ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗರಿಗೆ ಪ್ರಶಸ್ತಿ ಸಲ್ಲುತ್ತದೆ.

 

2) ಕನಕಪುರದಲ್ಲಿ ಡಿಕೆಶಿ ಅದ್ದೂರಿ ಸ್ವಾಗತಕ್ಕೆ ಬ್ರೇಕ್!

ಜೈಲಿನಿಂದ ಬಿಡುಗಡೆಯಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ಕನಕಪುರಕ್ಕೆ ಆಗಮಿಸುತ್ತಿದ್ದು, ಆದರೆ ಅವರ ಅದ್ದೂರಿ ಸ್ವಾಗತಕ್ಕೆ ಬ್ರೇಕ್ ಬಿದ್ದಿದೆ.  ಅಭಿಮಾನಿಗಳು ಡಿಕೆಶಿ ಬ್ರದರ್ಸ್ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ ಇದಕ್ಕೆ ತಡೆಯಾಗಿದೆ. ಇದರಿಂದ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. 

3) ಡಿಸಿಎಂ ಬಂದೋಬಸ್ತ್‌ಗೆ ಗರ್ಭಿಣಿ ಪೇದೆ: Sorry ಕೇಳಿ ರಜೆಗೆ ಕಳುಹಿಸಿದ SP


ಮಂಗಳೂರು- ಉಡುಪಿ ಮಾರ್ಗದಲ್ಲಿ  ತುಂಬು ಗರ್ಭಿಣಿ ಮಹಿಳಾ ಪೇದೆಯೊಬ್ಬರನ್ನು ಬಂದೋಬಸ್ತ್ ಕಾರ್ಯದಲ್ಲಿ ನಿಯೋಜಿಸಿದ್ದ ಫೋಟೋವೊಂದು ವೈರಲ್‌ ಆಗಿತ್ತು. ಇದರ ಮುಂದುವರಿದ ಭಾಗದಲ್ಲಿ ಮಂಗಳೂರು ಪೊಲೀಸ್ ಆಯಕ್ತರು ಕ್ಷಮೆಯಚಿಸಿದ್ದಾರೆ. ಅಷ್ಟೇ ಅಲ್ಲದೇ ಜನರ ಮೆಚ್ಚುವಂತೆ ಕ್ರಮಕೈಗೊಂಡಿದ್ದಾರೆ.

4) ನಿಮಗೆಷ್ಟು ಬೇಕೋ ಅಷ್ಟು ಮಕ್ಕಳು ಮಾಡಿಕೊಳ್ಳಿ : ಸರ್ಕಾರಕ್ಕೆ ಬದ್ರುದ್ದಿನ್ ಅಜ್ಮಲ್ ಸವಾಲ್

ನಿಮಗೆ ಎಷ್ಟು ಮಕ್ಕಳು ಬೇಕೋ ಅಷ್ಟು ಮಕ್ಕಳು ಮಾಡಿಕೊಳ್ಳಿ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್  ಮುಖ್ಯಸ್ಥ ಬದ್ರುದ್ದಿನ್ ಅಜ್ಮಲ್ ಮುಸ್ಲಿಂ ಸಮುದಾಯಕ್ಕೆ ಹೇಳಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ಬಂದ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರಿ ನೌಕರಿ ನಿಷೇಧ ನೀತಿಗೆ ಈ ಮೂಲಕ ಸವಾಲು ಹಾಕಿದ್ದಾರೆ. 

5) ಬಿಜೆಪಿ ಸರ್ಕಾರ ಉರುಳಲು ಬಿಡಲ್ಲ ಎಂದ ಕುಮಾರಸ್ವಾಮಿಗೆ ಬಿಎಸ್‌ವೈ ಅಭಿನಂದನೆ!

 ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಉರುಳಲು ಬಿಡುವುದಿಲ್ಲ ಎಂದು ಅಚ್ಚರಿಕೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹಾಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

6) ದಾದಾ ಕೃಪೆಯಿಂದ ಆರಂಭಿಕ, ಮುಂದೆ ನಡೆದಿದ್ದು ಇತಿಹಾಸ ಎಂದ ಸೆಹ್ವಾಗ್!

ಬಿಸಿಸಿಐ ನೂತ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಜೊತೆಯಾಗಿ ಟೀಂ ಇಂಡಿಯಾ ಆಡಿ ಮಿಂಚಿದ್ದಾರೆ. ಗಂಗೂಲಿ ಅಗ್ರೆಸ್ಸೀವ್ ನಾಯಕನಾಗಿದ್ದರೆ, ಸೆಹ್ವಾಗ್ ಅಗ್ರೆಸ್ಸೀವ್ ಬ್ಯಾಟ್ಸ್‌ಮನ್.  ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದ ಬಳಿಕ ತಾನು ಆರಂಭಿಕನಾಗಿ ಬಡ್ತಿ ಪಡೆದ ರೋಚಕ ಕತೆಯನ್ನು ವಿರೇಂದ್ರ ಸೆಹ್ವಾಗ್ ವಿವರಿಸಿದ್ದಾರೆ.

7) BB7: ಕಣ್ಣಲ್ಲೇ ಬುಸುಗುಡುವ ನಾಗಿಣಿ ಬಗ್ಗೆ ವಾಸುಕಿ ಹೇಳಿದ್ದೇನು?

'ಭಾನುವಾರದ ಕಥೆ ಕಿಚ್ಚನ ಜೊತೆ' ಯಲ್ಲಿ ದೀಪಿಕಾ ದಾಸ್ ಮಾತನಾಡುವ ರೀತಿಯ ಬಗ್ಗೆ ಚರ್ಚಿಸುವಾಗ ವಾಸುಕಿ ವೈಭವ್ ಅದನ್ನು ಇಮಿಟೇಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

8) ಅನುಷ್ಕಾರನ್ನು ಬಿಟ್ಟು ಕಾಜಲ್ ಕೈ ಹಿಡಿಯುತ್ತಾರಾ ಪ್ರಭಾಸ್?.

ಸೌತ್ ಇಂಡಿಯನ್ ಮೋಸ್ಟ್ ಹ್ಯಾಪನಿಂಗ್ ನಟಿ ಕಾಜಲ್ ಅಗರ್ವಾಲ್ ನಟಿ ಕಾಜಲ್ ಅಗರ್ವಾಲ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.  ತೆಲುಗು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. 

9) ಟಿಪ್ಪು ಜಯಂತಿ ಬಗ್ಗೆ ಕ್ಯಾತೆ ತೆಗೆದ ಸಿಎಂ ಇಬ್ರಾಹಿಂ!

ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮಲ್ಲಿ ಮೂರ್ತಿಯೂ ಇಲ್ಲ. ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ‌ ಈ ಸಂಪ್ರದಾಯವೇ ಇಲ್ಲ ಎಂದು ವಿಧಾನಪರಿತ್ ಸದಸ್ಯ ಸಿ.‌ಎಂ. ಇಬ್ರಾಹಿಂ ಅವರು ಹೇಳಿದ್ದಾರೆ.

10) ಅಂಚೆ ಇಲಾಖೆಯಲ್ಲಿ ನೇಮಕಾತಿ: 2707 ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳಿಗೆ ಅಂಚೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ನೀಡಿದ್ದು, 2707  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಡಾಕ್ ಸೇವಕ (Gramin Dak Sevaks) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು  ನಿಗದಿತ ದಿನಾಂಕ ನವೆಂಬರ್  14, 2019ರೊಳಗೆ ಸಲ್ಲಿಸಲು ಕೋರಲಾಗಿದೆ.