Asianet Suvarna News Asianet Suvarna News

64 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ಇಲ್ಲಿದೆ ಪೂರ್ಣ ಪಟ್ಟಿ

64 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ/ 2019  ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ/ ಪಟ್ಟಿ ಘೋಷಣೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ

64 Kannada Rajyotsava Award winners list 2019 Published
Author
Bengaluru, First Published Oct 28, 2019, 4:17 PM IST

ಬೆಂಗಳೂರು(ಅ. 28)   ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಗಣ್ಯರಿಗೆ ಈ ಸಾಲಿನ ಅಂದರೆ 64ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕಲೆ (ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ), ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗರಿಗೆ ಪ್ರಶಸ್ತಿ ಸಲ್ಲುತ್ತದೆ.

29 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ.  ನವೆಂಬರ್ 1 ಕನ್ನಡ ರಾಜ್ಯೋತ್ಸವ ಸಂದರ್ಭ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

2018ರಲ್ಲಿ ಯಾರಿಗೆಲ್ಲ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು?

2019 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ 
ಸಾಹಿತ್ಯ
ಡಾ. ಮಂಜಪ್ಪ ಶೆಟ್ಟಿ ಮಸಲಿ
ಪ್ರೊ. ಬಿ. ರಾಜಶೇಖರಪ್ಪ
ಚಂದ್ರಕಾಂತ ಕರದಳ್ಳಿ
ಡಾ. ಸರಸ್ವತಿ ಚಿಮ್ಮಲಗಿ

ರಂಗಭೂಮಿ
ಪರಶುರಾಮ ಸಿದ್ಧಿ
ಪಾಲ್ ಸುದರ್ಶನ್
ಹೂಲಿ ಶೇಖರ್
ಎನ್. ಶಿವಲಿಂಗಯ್ಯ
ಡಾ. ಎಚ್.ಕೆ.ರಾಮನಾಥ
ಭಾರ್ಗವಿ ನಾರಾಯಣ

ಸಂಗೀತ
ಛೋಟೆ ರೆಹಮತ್ ಖಾನ್’
ನಾಗವಲ್ಲಿ ನಾಗರಾಜ್
ಡಾ. ಮುದ್ದುಮೋಹನ
ಶ್ರೀನಿವಾಸ ಉಡುಪ

ಜಾನಪದ
ನೀಲ್ ಗಾರರು ದೊಡ್ಡಗವಿಬಸಪ್ಪ ಮಂಟೇಸ್ವಾಮಿ ಪರಂಪರೆ
ಹೊಳಿಬಸಯ್ಯ ದುಂಡಯ್ಯ ಸಂಬಳದ
ಭೀಮಸಿಂಗ್ ಸಕಾರಾಮ್ ರಾಥೋಡ್
ಉಸ್ಮಾನ್ ಸಾಬ್ ಖಾದರ್ ಸಾಬ್
ಕೊಟ್ರೇಶ ಚೆನ್ನಪ್ಪ ಕೊಟ್ರಪ್ಪನವರ
ಕೆ.ಆರ್.ಹೊಸಳಯ್ಯ

ಶಿಲ್ಪಕಲೆ
ವಿ.ಎ.ದೇಶಪಾಂಡೆ
ಕೆ.ಜ್ಞಾನೇಶ್ವರ

2018 ರ ಸಾಧಕರ ಚಿತ್ರಗಳು

ಚಿತ್ರಕಲೆ
ಯು. ರಮೇಶರಾಮ್
ಮೋಹನ ಸಿತನೂರು

ಕ್ರೀಡೆ
ವಿಶ್ವನಾಥ್ ಬಾಸ್ಕರ್ ಗಾಣಿಗ
ಚೇನಂಡ ವಿ.ಕುಟ್ಟಪ್ಪ
ನಂದಿತ ನಾಗನಗೌಡರ್

ಯೋಗ
ಶ್ರೀಮತಿ ವನಿತಕ್ಕ
ಕು. ಖುಷಿ

ಯಕ್ಷಗಾನ
ಶ್ರೀಧರ್ ಭಂಡಾರಿ ಪುತ್ತೂರು

ಬಯಲಾಟ
ವೈ. ಮಲ್ಲಪ್ಪ ಗವಾಯಿ

ಚಲನಚಿತ್ರ
ಶೈಲಶ್ರೀ

64 Kannada Rajyotsava Award winners list 2019 Published

ಕಿರುತೆರೆ
ಜಯಕುಮಾರ ಕೊಡಗನೂರ

ಶಿಕ್ಷಣ
 ಎಸ್. ಆರ್. ಗುಂಜಾಳ್
ಪ್ರೊ. ಟಿ. ಶಿವಣ್ಣ
ಡಾ. ಕೆ. ಸಿದಾನಂದಗೌಡ
ಡಾ. ಗುರುರಾಜ ಕರ್ಜಗಿ

ಸಂಕೀರ್ಣ
ಡಾ. ವಿಜಯ ಸಂಕೇಶ್ವರ
ಎಷ್.ಟಿ. ಶಾಂತ ಗಂಗಾಧರ್
ಡಾ. ಚನ್ನವೀರ ಶಿವಚಾರ್ಯರು
ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ. ಪ್ರಸಾದ
ಡಾ. ನಾ ಸೋಮೇಶ್ವರ್
ಕೆ. ಪ್ರಕಾಶ ಶೆಟ್ಟಿ ಅಧ್ಯಕ್ಷರು MGR ಗ್ರೂಪ್


ಪತ್ರಿಕೋದ್ಯಮ
ಬಿ.ವಿ. ಮಲ್ಲಿಕಾರ್ಜುನಯ್ಯ [ಕನ್ನಡಪ್ರಭ]

ಸಹಕಾರ
ರಮೇಶ ವೈದ್ಯ

ಸಮಾಜ ಸೇವೆ
ಎಸ್.ಜಿ.ಭಾರತಿ
ಶ್ರೀ ಕತ್ತಿಗೆ ಚನ್ನಪ್ಪ

ಕೃಷಿ
ಬಿ.ಕೆ. ದೇವರಾವ್
ವಿಶ್ವೇಶ್ವರ ಸಜ್ಜನ್

ಪರಿಸರ
ಸಾಲುಮರದ ವೀರಾಷಾರ್
ಶಿವಾಜಿ ಛತ್ರಪ್ಪ ಕಾಗಣಿಕರ್

ಸಂಘ ಸಂಸ್ಥೆ
ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್
ಪತಾಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಹನಮಂತಪುರ

ವೈದ್ಯಕೀಯ
ಡಾ. ಹನುಮಂತರಾಯ ಪಂಡಿತ್
ಡಾ. ಅಂಜನಪ್ಪ
ಡಾ ನಾಗರತ್ನ
ಡಾ.ಜೆ.ಟಿ.ಸುಭಾಷ್
ಡಾ. ಕೃಷ್ಣ ಪ್ರಸಾದ

ನ್ಯಾಯಾಂಗ
ಕುಮಾರ್ ಎನ್

ಹೊರನಾಡು
ಜಯವಂತ ವನ್ನೊಳ್ಳಿ
ಗಂಗಾಧರ ಬೇವಿನಕೊಪ್ಪ
ವಿ.ಜೆ. ಮೋಹನದಾಸ್

ಗುಡಿ ಕೈಗಾರಿಕೆ
ನವರತ್ನ ಇಂದುಕಮಾರ್

ವಿಮರ್ಶೆ
ಕೆ.ವಿ.ಸುಬ್ರಮಣ್ಯಂ

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ 1 ರಂದು  ಬೆಂಗಳೂರಿನಲ್ಲಿ ರಾಜ್ಯದ ಸಿಎಂ ಪ್ರದಾನ ಮಾಡುವುದು ವಾಡಿಕೆ.  ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, 20-25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. 

ರಾಜ್ಯೋತ್ಸವ ಪ್ರಶಸ್ತಿಯನ್ನು 1966 ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಬೆಂಗಳೂರು ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಗುತ್ತದೆ. 

ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ. 1992 ರಲ್ಲಿ ಎಸ್ ಬಂಗಾರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 172 ಜನರಿಗೆ ಪ್ರಶಸ್ತಿ ನೀಡಿದ್ದು ಒಂದು ದಾಖಲೆಯಾಗಿತ್ತು. ಆದರೆ 2005ರಲ್ಲಿ  ಧರಂ ಸಿಂಗ್ ಅವರ ಸರ್ಕಾರ 195  ಜನಕ್ಕೆ ಪ್ರಶಸ್ತಿ ನೀಡಿದ್ದು ಈವರೆಗಿನ ದಾಖಲೆಯಾಗಿ ಉಳಿದಿದೆ.

64 Kannada Rajyotsava Award winners list 2019 Published

64 Kannada Rajyotsava Award winners list 2019 Published

64 Kannada Rajyotsava Award winners list 2019 Published

64 Kannada Rajyotsava Award winners list 2019 Published

 

64 Kannada Rajyotsava Award winners list 2019 Published

64 Kannada Rajyotsava Award winners list 2019 Published

64 Kannada Rajyotsava Award winners list 2019 Published

64 Kannada Rajyotsava Award winners list 2019 Published

ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios