ಸೌತ್ ಇಂಡಿಯನ್ ಮೋಸ್ಟ್ ಹ್ಯಾಪನಿಂಗ್ ನಟಿ ಕಾಜಲ್ ಅಗರ್ವಾಲ್ ನಟಿ ಕಾಜಲ್ ಅಗರ್ವಾಲ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.  ತೆಲುಗು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. 

ಒಂದು ಕಾಲದಲ್ಲಿ BB ಮನೆ ರೂಲ್ ಮಾಡಿದ ಲಾಸ್ಯ ನಾಗ್ ಈಗೇನು ಮಾಡ್ತಿದ್ದಾರೆ ಗೊತ್ತಾ?

ನಿರೂಪಕಿ ಲಕ್ಷ್ಮೀ ಮಂಚು Kill, Marry, hook Up ರೌಂಡ್ ನಲ್ಲಿ ಮದುವೆ ಬಗ್ಗೆ ಮಾತನಾಡುತ್ತಿದ್ದಾಗ  ಯಂಗ್ ಟೈಗರ್ ಜೂ. ಎನ್ ಟಿಆರ್, ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್,ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಆಪ್ಷನ್ ಕೊಟ್ಟಾಗ  ಕಾಜಲ್ ಅಗರ್ವಾಲ್ ಪ್ರಭಾಸ್ ಎಂದಿದ್ದಾರೆ. 

ನಟಿ ಕಾಜರ್ ಅಗರ್ವಾಲ್ ಗೆ ಪ್ರಭಾಸ್ ಮೇಲೆ ಮನಸ್ಸಾಗಿದೆಯಂತೆ! ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡುತ್ತಾ, ನನ್ನ ಹುಡುಗ ಪೊಸೆಸಿವ್ , ಕೇರಿಂಗ್ ಮತ್ತು ಆಧ್ಯಾತ್ಮಿಕ ಮನಸ್ಥಿತಿ ಹೊಂದಿರುವವನಾಗಿರಬೇಕು ಎಂದಿದ್ದಾರೆ. 

ಪ್ರಭಾಸ್ ಹಾಗೂ ಕಾಜಲ್ ಅಗರ್ವಾಲ್ ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗುತ್ತದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪ್ರಭಾಸ್, ಕಾಜಲ್ ಬಗ್ಗೆ ನೆಗೆಟಿವ್ , ಪಾಸಿಟೀವ್ ಬಗ್ಗೆ ಮಾತನಾಡುವಾಗ ಕಾಜಲ್ ಈಸ್ ಬ್ಯೂಟಿಫುಲ್ ಎಂದಿದ್ದಾರೆ. ಅದೇ ರೀತಿ ಅವರಿಗೆ ಅವರೇಜ್ ಡ್ರೆಸ್ಸಿಂಗ್ ಸೆನ್ಸ್ ಇದೆ ಅಂತಾನೂ ಹೇಳಿದ್ದಾರೆ. 

ಚೈತ್ರಾ ವಾಸುದೇವನ್ ಔಟ್ ಹೊರ ಬರುತ್ತಲೇ ಸುದೀಪ್ ಗೆ ಶಾಕ್ ಕೊಟ್ಟ ಸುಂದರಿ

ಕಾಜಲ್ ಅಗರ್ವಾಲ್ ಹಿಂದಿ ಸಿನಿಮಾ ಮುಂಬೈ ಸಾಗಾ ದಲ್ಲಿ ಜಾನ್ ಅಬ್ರಾಹಿಂ ಜೊತೆ ಕಾಣಿಸಿಕೊಂಡಿದ್ದಾರೆ.  ಸಂಜಯ್ ಗುಪ್ತಾ ನಿರ್ದೇಶನ ಮಾಡುತ್ತಿದ್ದಾರೆ. 

ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: