ನಿಮಗೆಷ್ಟು ಬೇಕೋ ಅಷ್ಟು ಮಕ್ಕಳು ಮಾಡಿಕೊಳ್ಳಿ : ಸರ್ಕಾರಕ್ಕೆ ಬದ್ರುದ್ದಿನ್ ಅಜ್ಮಲ್ ಸವಾಲ್
ನಿಮಗೆ ಎಷ್ಟು ಬೇಕೋ ಅಷ್ಟು ಮಕ್ಕಳು ಮಾಡಿಕೊಳ್ಳಿ. ಹೀಗೆಂದು ಹೇಳುವ ಮೂಲಕ ಮುಖಂಡರೋರ್ವರು ಸರ್ಕಾರಿ ನೀತಿಗೆ ಸವಾಲು ಒಡ್ಡಿದ್ದಾರೆ. ಏನದು ಸವಾಲು.
ನವದೆಹಲಿ [ಅ.28]: ನಿಮಗೆ ಎಷ್ಟು ಮಕ್ಕಳು ಬೇಕೋ ಅಷ್ಟು ಮಕ್ಕಳು ಮಾಡಿಕೊಳ್ಳಿ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದಿನ್ ಅಜ್ಮಲ್ ಮುಸ್ಲಿಂ ಸಮುದಾಯಕ್ಕೆ ಹೇಳಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ಬಂದ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರಿ ನೌಕರಿ ನಿಷೇಧ ನೀತಿಗೆ ಈ ಮೂಲಕ ಸವಾಲು ಹಾಕಿದ್ದಾರೆ.
ಇಸ್ಲಾಂ ಎಂದಿಗೂ ಎರಡು ಮಕ್ಕಳನ್ನು ಹೊಂದುವ ವಿಚಾರವನ್ನು ನಂಬುವುದಿಲ್ಲ. ಈ ಜಗತ್ತಿಗೆ ಬರುವ ವ್ಯಕ್ತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅಷ್ಟಕ್ಕೂ ಸರ್ಕಾರ ನಮಗೆ ಉದ್ಯೋಗ ನೀಡುತ್ತಿಲ್ಲ. ನಾವು ಸರ್ಕಾರದ ಉದ್ಯೋಗ ಬಯಸುವುದೂ ಇಲ್ಲವೆಂದು ಹೇಳಿದ್ದಾರೆ.
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ನೌಕರಿ ಇಲ್ಲ ಎಂದ ಸರ್ಕಾರ!...
ನನ್ನ ಸಮುದಾಯದ ಜನರೆ ನಿಮಗೆಷ್ಟು ಬೇಕೋ ಅಷ್ಟು ಮಕ್ಕಳು ಮಾಡಿಕೊಳ್ಳಿ. ಅವರಿಗೆ ಒಳ್ಳೆಯ ಶಿಕ್ಷಣ ನೀಡಿ. ಅವರೇ ತಮ್ಮ ವ್ಯವಹಾರ ಆರಂಭ ಮಾಡುತ್ತಾರೆ. ಅಲ್ಲದೇ ಕಂಪನಿಗಳನ್ನು ತೆರೆದು ಹಿಂದೂ ಸಹೋದರರಿಗೂ ಉದ್ಯೋಗ ನೀಡುತ್ತಾರೆ ಎಂದಿದ್ದಾರೆ.
ಜನಸಂಖ್ಯೆ ನಿಯಂತ್ರಣದ ಉದ್ದೇಶದಿಂದ ಇತ್ತೀಚೆಗಷ್ಟೇ ಅಸ್ಸಾಂ ಸರ್ಕಾರ ವಿವಿಧ ಕುಟುಂಬ ಕಲ್ಯಾಣ ಯೋಜನೆಗಳ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸರ್ಕಾರಿ ಉದ್ಯೋಗಕ್ಕೆ ಅನರ್ಹರು ಎಂದು ಘೋಷಿಸಿತ್ತು.
ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: