ದಾದಾ ಕೃಪೆಯಿಂದ ಆರಂಭಿಕ, ಮುಂದೆ ನಡೆದಿದ್ದು ಇತಿಹಾಸ ಎಂದ ಸೆಹ್ವಾಗ್!

ವಿರೇಂದ್ರ ಸೆಹ್ವಾಗ್ ಭಾರತ ಕಂಡ ಅತ್ಯಂತ ಸ್ಫೋಟಕ ಹಾಗೂ ಯಶಸ್ವಿ ಆರಂಭಿಕ. ಸೆಹ್ವಾಗ್ ಆರಂಭಿಕನಾಗಿ ಯಶಸ್ಸು ಕಾಣಲು ಮಾಜಿ ನಾಯಕ, ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಾರಣ. ಹೇಗೆ ಅನ್ನೋದನ್ನು ಸ್ವತಃ ಸೆಹ್ವಾಗ್ ವಿವರಿಸಿದ್ದಾರೆ.

Sourav ganguly pushed me as a opener says virender sehwag

ನವದೆಹಲಿ(ಅ.28):  ಬಿಸಿಸಿಐ ನೂತ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಜೊತೆಯಾಗಿ ಟೀಂ ಇಂಡಿಯಾ ಆಡಿ ಮಿಂಚಿದ್ದಾರೆ. ಗಂಗೂಲಿ ಅಗ್ರೆಸ್ಸೀವ್ ನಾಯಕನಾಗಿದ್ದರೆ, ಸೆಹ್ವಾಗ್ ಅಗ್ರೆಸ್ಸೀವ್ ಬ್ಯಾಟ್ಸ್‌ಮನ್.  ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದ ಬಳಿಕ ತಾನು ಆರಂಭಿಕನಾಗಿ ಬಡ್ತಿ ಪಡೆದ ರೋಚಕ ಕತೆಯನ್ನು ವಿರೇಂದ್ರ ಸೆಹ್ವಾಗ್ ವಿವರಿಸಿದ್ದಾರೆ.

ಇದನ್ನೂ ಓದಿ: BCCIಗೆ ಗಂಗೂಲಿ ಬಿಗ್ ಬಾಸ್; ವಿಶೇಷ ರೀತಿಯಲ್ಲಿ ಶುಭಕೋರಿದ ಸೆಹ್ವಾಗ್!

ಸೆಹ್ವಾಗ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಅಂತಾರಾಷ್ಟ್ರೀಯ ಕರಿಯರ್ ಆರಂಭಿಸಿದರು. 1999ರಲ್ಲಿ ಪಾಕಿಸ್ತಾನ ವಿರುದ್ದ ಸೆಹ್ವಾಗ್ ಡೆಬ್ಯೂ ಮಾಡಿದರು.  ಮಿಡ್ಲ್ ಆರ್ಡರ್‌ನಲ್ಲಿ ಉತ್ತಮ ಪ್ರದರ್ಶನ ಕೂಡ ನೀಡಿದ್ದರು. ನಾನು ಆರಂಭಿಕನಾಗಿ ಬಡ್ತಿ ಪಡೆದ ಹಿಂದೆ ನಾಯಕ ಸೌರವ್ ಗಂಗೂಲಿ ಪ್ರಮುಕ ಕಾರಣ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: ಗಂಗೂಲಿ ಅಥವಾ ಲಕ್ಷ್ಮಣ್? ICC ಪ್ರಶ್ನೆಗೆ ಫ್ಯಾನ್ಸ್ ಉತ್ತರ!

ಗಂಗೂಲಿ ನನ್ನ ಬಳಿ ಬಂದು ಆರಂಭಿಕನಾಗಿ ಕಣಕ್ಕಿಳಿಯಬೇಕು ಎಂದರು. ಯಾಕೆ ನೀವು ಆರಂಭಿಕರಾಗಿ ಕಣಕ್ಕಿಳಿಯುತ್ತಿಲ್ಲವೇ? ಸಚಿನ್ ತೆಂಡುಲ್ಕರ್ ಕೂಡ ಇದ್ದಾರಲ್ಲ ಎಂದಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ, ಆರಂಭಿಕ ಸ್ಥಾನ ಖಾಲಿ ಇದೆ. ಸದ್ಯ ಮಧ್ಯಮ ಕ್ರಮಾಂಕದಲ್ಲಿ ಯಾರಾದರೂ ಇಂಜುರಿಯಾದರೆ ಮಾತ್ರ ನಿನಗೆ(ಸೆಹ್ವಾಗ್) ಸ್ಥಾನ. ನಾನು ನಿನಗೆ 3 ರಿಂದ 4 ಇನಿಂಗ್ಸ್ ಆರಂಭಿಕನಾಗಿ ಅವಕಾಶ ನೀಡುತ್ತೇನೆ. ಈ ಅವಕಾಶದಲ್ಲಿ ಕಳಪೆ ಪ್ರದರ್ಶನ ನೀಡಿದರೂ ನೀನು ತಂಡದಲ್ಲೇ ಮುಂದುವರಿಯುವಂತೆ ನೋಡಿಕೊಳ್ಳುತ್ತೇನೆ. ಕೊನೆಗೆ ನಾನು ನಿನ್ನನ್ನು ಡ್ರಾಪ್ ಮಾಡೋ ಮೊದಲು ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಆಡಲು ಅವಕಾಶ ಮಾಡಿಕೊಡುತ್ತೇನೆ ಎಂದು ಸೆಹ್ವಾಗ್ ಹೇಳಿದ್ದಾರೆ. 

ಗಂಗೂಲಿ ಈ ಮಾತುಗಳಿಂದ ನಾನು ಆರಂಭಿಕನಾಗಿ ಕಣಕ್ಕಿಳಿಯಲು ಒಪ್ಪಿಕೊಂಡೆ. ನಾಯಕ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ನನಗೆ ಹೆಚ್ಚಿನ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ಪ್ರಯತ್ನಿಸೋಣ ಎಂದು ಆರಂಭಿಕನಾದೆ ಎಂದಿದ್ದಾರೆ.  ಮುಂದೆ ನಡೆದಿದ್ದಲ್ಲವೂ ಇತಿಹಾಸ ಎಂದು ಸೆಹ್ವಾಗ್ ಹೇಳಿದ್ದಾರೆ. ಆರಂಭಿಕನಾಗಿ ಸೆಹ್ವಾಗ್ ಏಕದಿನದಲ್ಲಿ  7,518  ರನ್ ಹಾಗೂ ಟೆಸ್ಟ್ನಲ್ಲಿ 8,586 ರನ್ ಸಿಡಿಸಿದ್ದಾರೆ.

ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Latest Videos
Follow Us:
Download App:
  • android
  • ios