Asianet Suvarna News Asianet Suvarna News

ಅಪರಾಧಿಗಳ ಜತೆ ಪಿಎಸ್‌ಐ ಡ್ಯಾನ್ಸ್‌ : ವಿಡಿಯೋ ವೈರಲ್‌

ಪಿಎಸ್‌ಐಯೊಬ್ಬರು ನಡುರಸ್ತೆಯಲ್ಲೇ ಅಪರಾಧಿಗಳ ಜೊತೆ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದ್ದು, ಪ್ರಕರಣದ ತನಿಖೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ್‌ ಆದೇಶಿಸಿದ್ದಾರೆ. 

PSI Dance With Culprits In Hubli Video Viral
Author
Bengaluru, First Published Dec 29, 2018, 10:35 AM IST
  • Facebook
  • Twitter
  • Whatsapp

ಹುಬ್ಬಳ್ಳಿ: ವಾಣಿಜ್ಯ ನಗರದ ಪೊಲೀಸ್‌ ಠಾಣೆಯ ಪಿಎಸ್‌ಐಯೊಬ್ಬರು ನಡುರಸ್ತೆಯಲ್ಲೇ ಅಪರಾಧಿಗಳ ಜೊತೆ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದ್ದು, ಪ್ರಕರಣದ ತನಿಖೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ್‌ ಆದೇಶಿಸಿದ್ದಾರೆ. 

ಹುಬ್ಬಳ್ಳಿ ನಗರದಲ್ಲಿರುವ ಸಬ್‌ ಜೈಲಿನಲ್ಲಿ 2011ರಲ್ಲಿ ದೊಂಬಿ, ಕಲಹ ಹಾಗೂ ಹಲ್ಲೆ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿರುವ ಕೈದಿಗಳೊಂದಿಗೆ ನಗರದ ಉಪನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಬಸವರಾಜ್‌ ಹೂಗಾರ, ನಗರ ಹೊರ ವಲಯದ ರಸ್ತೆ ಮಧ್ಯದಲ್ಲಿ ಡ್ಯಾನ್ಸ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

4 ವರ್ಷದ ಹಳೆಯ ವಿಡಿಯೋ ಇದು ಎನ್ನಲಾಗಿದೆ. ಸಬ್‌ಜೈಲ್‌ ಪ್ರಕರಣದಲ್ಲಿ ಅಪರಾಧಿಯಾಗಿರುವ ದುರ್ಗಪ್ಪ ಬಿಜವಾಡ ನನಗೆ ಮೊದಲಿನಿಂದಲೂ ಪರಿಚಯ. ಅಲ್ಲದೆ, ವಿಡಿಯೋ ಸಹ ತುಂಬಾ ಹಳೆಯದು. ಡ್ಯಾನ್ಸ್‌ ಮಾಡಿದಾಗ ಬಿಜವಾಡ ಯಾವುದೇ ರೀತಿಯ ತಪ್ಪು ಮಾಡಿರಲಿಲ್ಲ, ಆರೋಪಿಯೂ ಆಗಿರಲಿಲ್ಲ ಎಂದು ಪಿಎಸ್‌ಐ ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios