Asianet Suvarna News Asianet Suvarna News

ಬೆಂಗಳೂರು ಮೆಟ್ರೋಗೆ ಒಂದೇ ವರ್ಷದಲ್ಲಿ 129 ಕೋಟಿ ರು. ಲಾಭ

ನಮ್ಮ ಮೆಟ್ರೋ ಸತತ 2ನೇ ವರ್ಷ ಕಾರ್ಯಾಚರಣೆ ಮೂಲಕ ಲಾಭ ಗಳಿಸಿದೆ. ನಿಗಮವು ಕಾರ್ಯಾಚರಣೆಗೆ ₹606.18 ಕೋಟಿ ವೆಚ್ಚ ಮಾಡಿದ್ದು, ಒಟ್ಟಾರೆ ₹735.48 ಕೋಟಿ ಆದಾಯ ಗಳಿಸಿದೆ. ಇದು ನಮ್ಮ ಮೆಟ್ರೋ ಗಳಿಸಿದ ಈವರೆಗಿನ ಅತ್ಯಧಿಕ ಆದಾಯವಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗದ ವಿಸ್ತರಿತ ಕೆ.ಆರ್.ಪುರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವಿನ ಸಂಚಾರ ಪ್ರಾರಂಭ ಆಗಿರುವುದು ಮೆಟ್ರೋದ ಆದಾಯ ಹೆಚ್ಚಲು ಕಾರಣವಾಗಿದೆ. 

129 Crores Profit to Bengaluru Namma Metro in 2023 2024 grg
Author
First Published Apr 24, 2024, 12:35 PM IST

ಬೆಂಗಳೂರು(ಏ.24):  ಬೆಂಗಳೂರು ಮೆಟ್ರೋ ರೈಲು ನಿಗಮವು ರೈಲುಗಳ ಕಾರ್ಯಾಚರಣೆ ಮೂಲಕ 2023-2024ರ ಆರ್ಥಿಕ ವರ್ಷದಲ್ಲಿ ₹129.3 ಕೋಟಿ ಲಾಭ ಗಳಿಸಿದೆ. ವರ್ಷದಲ್ಲಿ ₹23.28 ಕೋಟಿಗೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.

ನಮ್ಮ ಮೆಟ್ರೋ ಸತತ 2ನೇ ವರ್ಷ ಕಾರ್ಯಾಚರಣೆ ಮೂಲಕ ಲಾಭ ಗಳಿಸಿದೆ. ನಿಗಮವು ಕಾರ್ಯಾಚರಣೆಗೆ ₹606.18 ಕೋಟಿ ವೆಚ್ಚ ಮಾಡಿದ್ದು, ಒಟ್ಟಾರೆ ₹735.48 ಕೋಟಿ ಆದಾಯ ಗಳಿಸಿದೆ. ಇದು ನಮ್ಮ ಮೆಟ್ರೋ ಗಳಿಸಿದ ಈವರೆಗಿನ ಅತ್ಯಧಿಕ ಆದಾಯವಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗದ ವಿಸ್ತರಿತ ಕೆ.ಆರ್.ಪುರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವಿನ ಸಂಚಾರ ಪ್ರಾರಂಭ ಆಗಿರುವುದು ಮೆಟ್ರೋದ ಆದಾಯ ಹೆಚ್ಚಲು ಕಾರಣವಾಗಿದೆ ಎಂದು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. 

ನಮ್ಮ ಮೆಟ್ರೋದಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಪುನರಾವರ್ತನೆ

2022-2023ರ ಆರ್ಥಿಕ ವರ್ಷದಲ್ಲಿ 17.72 ಕೋಟಿ ಪ್ರಯಾಣಿಕರು ಸಂಚರಿಸಿದ್ದರು. ₹594.01 ಕೋಟಿ ಆದಾಯ ಬಂದಿತ್ತು. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಆದಾಯ ಹೆಚ್ಚಾಗಿದೆ. 2021-22ರಲ್ಲಿ ₹228.76 ಕೋಟಿ ಆದಾಯವಿದ್ದರೆ ವೆಚ್ಚವು ₹345.6 ಕೋಟಿ ಆಗಿತ್ತು.

Follow Us:
Download App:
  • android
  • ios