1948 ರ ಡಿಸೆಂಬರ್ 25 ರ ಕ್ರಿಸಮಸ್ ಹಬ್ಬದ ದಿನ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಗ್ವಾಲಿಯರ್ ಮತ್ತು ಕಾನ್ಪುರದಲ್ಲಿ.ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. 

ನವದೆಹಲಿ (ಆ. 17): 1948 ರ ಡಿಸೆಂಬರ್ 25 ರ ಕ್ರಿಸಮಸ್ ಹಬ್ಬದ ದಿನ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಗ್ವಾಲಿಯರ್ ಮತ್ತು ಕಾನ್ಪುರದಲ್ಲಿ.

Add Asianetnews Kannada as a Preferred SourcegooglePreferred

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಅಟಲ್ ಬಿಹಾರಿ, 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ 23 ದಿನಗಳ ಸೆರೆವಾಸ ಅನುಭವಿಸಿದರು. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ನೈಜ ರಾಜಕೀಯ ಜೀವನ ಆರಂಭವಾಗಿದ್ದು 1953 ರಲ್ಲಿ. ಹಿಂದಿ ಪತ್ರಿಕೆಯ ಪತ್ರಕರ್ತ ಪ್ರತಿನಿಧಿಯಾಗಿ ಶ್ಯಾಮಪ್ರಸಾದ್ ಮುಖರ್ಜಿ ಜೊತೆ ಕಾಶ್ಮೀರಕ್ಕೆ ತೆರಳಿದ ವಾಜಪೇಯಿ ಅವರು ಮುಖರ್ಜಿ ಬಂಧನದ ನಂತರ ಅಲ್ಲಿಂದ ಬರುವಾಗಲೇ ಇನ್ನುಮುಂದೆ ತನ್ನ ಜೀವನ ರಾಜಕೀಯದಲ್ಲಿ ಎಂದು ತೀರ್ಮಾನಿಸಿ ಬಂದಿದ್ದರು.

1957 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆರಿಸಿ ಬಂದ ವಾಜಪೇಯಿ ದಾಖಲೆಯ 9 ಬಾರಿ ಲೋಕಸಭೆ ಮತ್ತು 2 ಬಾರಿ ರಾಜ್ಯಸಭೆಯಲ್ಲಿ ಅಚಲರಾಗಿ ಕಾರ್ಯನಿರ್ವಹಿಸಿದರು. ಅಟಲ್ ಬಿಹಾರಿ ಮೊದಲ ಬಾರಿ ಲೋಕಸಭೆಗೆ ಬಂದಾಗ ಮಾಡಿದ ಭಾಷಣ ಕೇಳಿ ಆನಂದಿತರಾದ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಮುಂದೊಂದು ದಿನ ಈತ ಭಾರತದ ಪ್ರಧಾನಿಯಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ.

ಆಗ ದೆಹಲಿಯಲ್ಲಿ ಅಶೋಕ ಎಂಬ ಪಂಚತಾರಾ ಹೋಟೆಲ್ಲನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿತ್ತು. ವಾಜಪೇಯಿ ಅವರು ನೆಹರುಗೆ ನೇರವಾಗಿ ಸದನದಲ್ಲಿ ಹೇಳಿದ್ದು ಸರ್ಕಾರದ ಕೆಲಸ ಪಂಚತಾರ ಹೋಟೆಲ್ ನಿರ್ಮಿಸುವುದಲ್ಲ, ಆಸ್ಪತ್ರೆ ನಿರ್ಮಿಸಿ ಎಂದು. ಆಗ ನೆಹರು ಹೋಟೆಲ್ ನಿರ್ಮಿಸಿ ಬಂದ ದುಡ್ಡಿನಲ್ಲಿ ಆಸ್ಪತ್ರೆಯನ್ನು ನಿರ್ಮಿಸುತ್ತೇವೆ ಎಂದು ಹೇಳಿ ಸಮಾಧಾನ ಮಾಡಿದರಂತೆ. ಆಗಲೇ ಅಟಲ್‌ರ ಭಾಷಣ ಲೋಕಸಭೆಯಲ್ಲಿ ಸೂಪರ್ ಹಿಟ್.