ಬಿಟ್ಟಿ ಸಿಗತ್ತೆ ಎಂದು ಬಾಚಿಕೊಳ್ಳುವ ಬುದ್ಧಿ... ಸತ್ಯ ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ ಗರಂ
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣದ ಕುರಿತು ಸತ್ಯ ಸೀರಿಯಲ್‌ನಲ್ಲಿ ಉಲ್ಲೇಖಿಸಲಾಗಿದ್ದು, ಇದರ ಬಗ್ಗೆ ಕೆಲವು ನೆಟ್ಟಿಗರು ಗರಂ ಆಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರೆಂಟಿಗಳ ವಿರುದ್ಧ ಕೆಲವರು ಇದಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಇದರ ಬೆಂಬಲಕ್ಕೆ ನಿಂತಿದ್ದಾರೆ. ಮಹಿಳೆಯರಿಗೆ, ಬಡವರಿಗೆ ಸಿಗುತ್ತಿರುವ ಈ ಯೋಜನೆಗಳನ್ನು ಕೆಲವರು ಶ್ಲಾಘಿಸುತ್ತಿದ್ದಾರೆ. ಆದರೆ ಬಡವರ ಹೆಸರಿನಲ್ಲಿ ಶ್ರೀಮಂತರೇ ಈ ಭಾಗ್ಯಗಳ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಇನ್ನು ಹಲವರು ವಾದ. ಉಚಿತ ಬಸ್ ಸೌಕರ್ಯದ ವಿರುದ್ಧವೂ ಖಾಸಗಿ ವಾಹನಗಳ ಚಾಲಕರಿಂದ ಪ್ರತಿಭಟನೆ (protest) ನಡೆಯುತ್ತಿದ್ದರೆ, ಕೆಲವು ಮಹಿಳೆಯರು ಇದು ತಮಗೆ ಸಿಕ್ಕಿರುವ ವರದಾನ ಎನ್ನುತ್ತಿದ್ದಾರೆ. ಬೆರಳೆಣಿಕೆಯಷ್ಟು ಮಹಿಳೆಯರು ದುಡ್ಡು ಕೊಟ್ಟೇ ಪ್ರಯಾಣಿಸುತ್ತಿರುವುದೂ ಇದೆ. ಈಗ ಜೀ ಟೀವಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್‌ನಲ್ಲಿ ಉಚಿತ ಪ್ರಯಾಣದ ಕುರಿತು ಆಡಿರುವ ಮಾತುಗಳು ಕಾಂಗ್ರೆಸ್ ಅಭಿಮಾನಿಗಳನ್ನು ಕೆರಳಿಸಿದೆ. ಈ ಧಾರಾವಾಹಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಈ ಧಾರಾವಾಹಿಯಲ್ಲಿ ಬಡವರ ಮನೆಯ ಸತ್ಯಳನ್ನು ತಮ್ಮ ಮನೆಯ ಸೊಸೆ ಮಾಡಿಕೊಳ್ಳಲು ಆ ಮನೆಯ ಮಗಳು ಕೀರ್ತನಾಳಿಗೆ (ಧಾರಾವಾಹಿಯಲ್ಲಿ ವಿಲನ್) ಇಷ್ಟವಿರುವುದಿಲ್ಲ. ಇದೇ ಕಾರಣಕ್ಕೆ ಸಾಧ್ಯವಾದಾಗಲೆಲ್ಲಾ ಸತ್ಯ ಮತ್ತು ಆಕೆಯ ಕುಟುಂಬದವರ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾಳೆ. ಹೀಗೆ ಟೀಕೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಉಚಿತ ಯೋಜನೆಯ ಬಗ್ಗೆ ಆಕೆ ಹೇಳಿರುವ ಮಾತು ಕೆಲವರನ್ನು ಕೆರಳಿಸಿದೆ.
'ಹೆಣ್ಣು ಏನ್ ಮಾಡ್ಬೇಕು ನೀವೇ ಹೇಳ್ಬಿಡಿ' ಎಂಬ ಭಾಗ್ಯಳ ಪ್ರತಿ ಮಾತಿಗೂ ಭಾವುಕರಾದ ನೆಟ್ಟಿಗರು
ಮಗಳನ್ನು ನೋಡಲು ಸತ್ಯಳ ತಾಯಿ ಮತ್ತು ಅಜ್ಜಿ ಆಕೆಯ ಮನೆಗೆ ಬರುತ್ತಾರೆ. ಈ ಸಂದರ್ಭದಲ್ಲಿ ಸತ್ಯಾಳ ಅತ್ತೆ, ತುಂಬಾ ಬಿಸಿಲು ಇದೆ, ನೀವು ಇಷ್ಟು ದೂರ ಹೇಗೆ ಬಂದಿರುವುದು ಎಂದು ವಿಚಾರಿಸುತ್ತಾರೆ. ಆಗ, ಸತ್ಯ ಹಾಗೂ ಆಕೆಯ ಕುಟುಂಬದವರನ್ನು ಇನ್‌ಸಲ್ಟ್ ಮಾಡುವ ಉದ್ದೇಶದಿಂದ ವಿಲನ್ ಕೀರ್ತನಾ ಫ್ರೀ ಬಸ್ ಇದೆಯಲ್ಲಾ, ಅದಕ್ಕೇ ಬಂದಿರಬೇಕು, ಇಂಥ ಯೋಜನೆಯಿಂದಲೇ ಇಂಥವರಿಗೆಲ್ಲಾ ಓಡಾಡಲು ತುಂಬಾ ಈಸಿಯಾಗಿರೋದು ಎಂದು ಚುಚ್ಚು ಮಾತು ಆಡುತ್ತಾಳೆ. ಇದು ಕೆಲವು ನೆಟ್ಟಿಗರನ್ನು ಕೆರಳಿಸಿದೆ. ಸರ್ಕಾರ ಮಹಿಳೆಯರಿಗೆ ನೀಡಿರುವ ಈ ಯೋಜನೆ ವಿರುದ್ಧ ಸತ್ಯ ಧಾರಾವಾಹಿಯಲ್ಲಿ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಸರ್ಕಾರದ ಯೋಜನೆಯನ್ನು ಗೇಲಿ ಮಾಡಲಾಗಿದೆ. ಥೂ ಅಸಹ್ಯ ಎಂದು ಹೇಳುತ್ತಿದ್ದಾರೆ.
ಧಾರಾವಾಹಿಯಲ್ಲಿ ವಿಲನ್ ಕೀರ್ತನಾ (Keethana) ಸತ್ಯಾ ತವರು ಮನೆಯವರನ್ನು ಗೇಲಿ ಮಾಡಿದ ನಂತರ, ಆಕೆಗೆ ಮುಖಭಂಗವಾಗುವಂತೆ ಸತ್ಯಾಳ ಅಜ್ಜಿ, ನಾವು ಬಸ್ಸಿಗೆ ಬಂದಿರುವುದು ನಿಜ. ಆದರೆ ಉಚಿತವಾಗಿ ಬರಲಿಲ್ಲ. ದುಡ್ಡು ಕೊಟ್ಟು ಬಂದಿದ್ದೇವೆ. ಇಂಥ ಯೋಜನೆಗಳು ಬಡವರಿಗೆ ಪ್ರಯೋಜನವಾದರೆ ಉತ್ತಮ. ಅದು ಅರ್ಹರಿಗೆ ಸಿಗಲಿ ಎನ್ನುತ್ತಾರೆ. ಟಿಕೆಟ್ ತೆಗೆದುಕೊಳ್ಳುವ ಶಕ್ತಿ ಇರುವಾಗ ಫ್ರೀಯಾಗಿ ಏಕೆ ಬರಬೇಕು ಎನ್ನುವ ಅಜ್ಜಿ, ಉಚಿತ ಕೊಡುಗೆ ಇದೆ ಎಂದ ಮಾತ್ರಕ್ಕೆ ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಅದಕ್ಕೆ ನಮ್ಮ ಸ್ವಾಭಿಮಾನ ಅಡ್ಡ ಬರುತ್ತದೆ ಎನ್ನುತ್ತಾರೆ. ಅದಕ್ಕೆ ಕೀರ್ತನಾಳಿಗೆ ಟಾಂಟ್ ಕೊಡುವ ಸತ್ಯಾ, ಕೆಲವರಿಗೆ ಬಿಟ್ಟಿ ಸಿಗತ್ತೆ ಎಂದು ಬಾಚಿಕೊಳ್ಳುವ ಬುದ್ಧಿ ಎನ್ನುತ್ತಾಳೆ. ಉಚಿತವಾದ ಭಾಗ್ಯಗಳನ್ನು ಪಡೆಯುತ್ತಿರುವ ಜನರಿಗೆ ಈ ಮಾತು ಸಿಕ್ಕಾಪಟ್ಟೆ ಕೋಪ ತರಿಸಿದ್ದು, ಸತ್ಯಾ ಧಾರಾವಾಹಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಹಳ್ಳಿ ಮೇಷ್ಟ್ರೇ ಹಾಡಿಗೆ ಸೀರೆಯಲ್ಲಿ ಸೊಂಟ ಬಳುಕಿಸಿ ಫ್ಯಾನ್ಸ್ ನಶೆಯೇರಿಸಿದ ಭೂಮಿಕಾ!