ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನು ಬಾಹುಬಲಿಯನ್ನು ಕೊಂದಂತೆ ನಾವು --

ಏಜೆನ್ಸಿ ವೌ (ಉ.ಪ್ರ.) : ರಂಗೇರಿರುವ ಉತ್ತರಪ್ರದೇಶ ಚುನಾವಣಾ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಬಾಹುಬಲಿ’ ಚಿತ್ರವನ್ನು ಪ್ರಸ್ತಾಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

‘ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನು ಬಾಹುಬಲಿಯನ್ನು ಕೊಂದಂತೆ ನಾವು ಕ್ರಿಮಿನಲ್‌ಗಳನ್ನು ಮಟ್ಟ ಹಾಕಲಿದ್ದೇವೆ’ ಎಂದು ಹೇಳಿದ್ದಾರೆ. ವೌ ಜಿಲ್ಲೆಯಲ್ಲಿ ಸೋಮವಾರ ಬಿಜೆಪಿ ರಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇಷ್ಟು ವರ್ಷ ದುರಾಡಳಿತ ನಡೆಸಿದ್ದಕ್ಕಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಯನ್ನೂ ಜನ ಶಿಕ್ಷಿಸಬೇಕು’ ಎಂದು ಕರೆ ನೀಡಿದರು.

3ನೇ ಹಂತದ ಚುನಾವಣೆ ನಡೆದ ನಂತರ ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ಗೆ ಸೋಲು ಖಚಿತ ಎಂಬ ಅರಿವಾಗಿದೆ. ಹೀಗಾಗಿ ಕೊನೇ ಪಕ್ಷ ಯಾರಿಗೂ ಬಹುಮತ ಬಾರದಂತೆ ನೋಡಿಕೊಂಡು ಅತಂತ್ರ ವಿಧಾನಸಭೆ ಸೃಷ್ಟಿಗೆ ಈ ಮೂರು ಪಕ್ಷಗಳು ಸಂಚು ರೂಪಿಸಿವೆ.

ಬಿಜೆಪಿ ಸೋಲಿಸಲು ನೀವು ಏನು ಬೇಕಾದರೂ ಮಾಡಿ. ನಾನು ಚಿಂತಿಸಲ್ಲ. ಆದರೆ ನಿಮ್ಮಿಂದ ಈಗಾಗಲೇ ಹಾಳಾಗಿರುವ ಉತ್ತರಪ್ರದೇಶದ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ’ ಎಂದು ಕಿಡಿಕಾರಿದರು.