Asianet Suvarna News Asianet Suvarna News

ಮೋದಿಗೆ ಇಸ್ಲಾಮಿಕ್ ಗುಂಪಿನ ಬೆದರಿಕೆ, ಚಂದನವನದಲ್ಲಿ ಯುವರತ್ನ ಕೇಕೆ; ಮಾ.22ರ ಟಾಪ್ 10 ಸುದ್ದಿ!

ಪ್ರಧಾನಿ ನರೇಂದ್ರ ಮೋದಿಗ ಬಾಂಗ್ಲಾದೇಶ ಭೇಟಿಗೆ ಕಟ್ಟರ್ ಇಸ್ಲಾಮಿಕ್ ಗುಂಪುಗಳು ಬೆದರಿಕೆ ಹಾಕಿವೆ. 16 ವರ್ಷದ ಹಿಂದಿನ ರಹಸ್ಯ ಅಂಬಾನಿ ಮನೆ ಸಮೀರದ ಸ್ಫೋಟಕವಿಟ್ಟ ಪ್ರಕರಣದ ಮೂಲಕ ಬಹಿರಂಗವಾಗಿದೆ. ಯುವರತ್ನ’ ಚಿತ್ರದ ಟ್ರೇಲರ್‌ ಮೂಲಕ ವೀವ್ಸ್ ಪಡೆದು ದಾಖಲೆ ಬರೆದಿದೆ. ಚಿನ್ನದ ಬೆಲೆ ಇಳಿಕೆ, ತಿಮ್ಮಪ್ಪನ ಭಕ್ತರ ಮುಡಿ ಕೂದಲಿನಲ್ಲಿ ಸ್ಮಗ್ಲಿಂಗ್ ಸೇರಿದಂತೆ ಮಾರ್ಚ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

PM Modi Bangaladesh Visit to Yuvarathna movie top 10 news of March 22 ckm
Author
Bengaluru, First Published Mar 22, 2021, 5:09 PM IST

ಅಂಬಾನಿ ನಿವಾಸದ ಬಳಿ ಸ್ಫೋಟಕವಿಟ್ಟಿದ್ದೇಕೆ? 16 ವರ್ಷ ಹಿಂದಿನ ರಹಸ್ಯ ಬಯಲು!...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಮುಕೇಶ್ ಅಂಬಾನಿಯ ಮುಂಬೈನ ನಿವಾಸ ಆಂಟಿಲಿಯಾ ಬಳಿ ಪತ್ತೆಯಾದ ಸ್ಫೋಟಕ ಪ್ರಕರಣದದ ತನಿಖೆಯಲ್ಲಿ ಶಾಕಿಂಗ್ ಮಾಹಿತಿ ಬಯಲಾಗುತ್ತಿವೆ. ಪೊಲೀಸ್‌ ಅಧಿಕಾರಿಯೊಬ್ಬರು ಖುದ್ದು ಈ ಷಡ್ಯಂತ್ರ ಹೆಣೆದು, ಬಳಿಕ ತಾವೇ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.

ಮೋದಿ ಬಾಂಗ್ಲಾ ಭೇಟಿಗೆ ಇಸ್ಲಾಮಿಕ್‌ ಬೆದರಿಕೆ: ಆತಂಕ ಬೇಡವೆಂದ ಸರ್ಕಾರ...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಭೇಟಿಗೆ ಕೆಲ ಎಡಪಂಥೀಯರು ಮತ್ತು ಕಟ್ಟರ್‌ ಇಸ್ಲಾಮಿಕ್‌ ಗುಂಪುಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಬೆದರಿಕೆ ಹಾಕಿವೆ.

ಭಾರತ ಸೇನೆ ನಂ.4 ಶಕ್ತಿಶಾಲಿ: ಜಗತ್ತಿನಲ್ಲಿ ಈಗ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ!...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಭಾರತ ಸೇನೆ ನಂ.4 ಶಕ್ತಿಶಾಲಿ!| ಮಿಲಿಟರಿ ಬಲ| ಚೀನಾ, ಅಮೆರಿಕ, ರಷ್ಯಾ ಸೇನೆಗಳಿಗೆ ಮೊದಲ ಮೂರು ಸ್ಥಾನ: ಮಿಲಿಟರಿ ಡೈರೆಕ್ಟ್ ರಾರ‍ಯಂಕ್‌| ಜಗತ್ತಿನಲ್ಲಿ ಈಗ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ ಹೆಚ್ಚು| ಆಗಸದಲ್ಲಿ ಅಮೆರಿಕ ಪ್ರಬಲ

ಡ್ಯಾಡಿ ಡ್ಯೂಟಿ, ಲಗೇಜ್‌ ಹೊತ್ತ ಕೊಹ್ಲಿ: ಫೋಟೋ ವೈರಲ್‌!...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುಣೆಗೆ ತೆರಳುವ ವೇಳೆ, ಏರ್‌ಪೋರ್ಟ್‌ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪುತ್ರಿ ವಾಮಿಕಾ ಹಾಗೂ ತಮ್ಮ ಲಗೇಜನ್ನು ಒಬ್ಬರೇ ಹೊತ್ತುಕೊಂಡು ಹೋಗುವ ದೃಶ್ಯ ನೋಡುಗರ ಗಮನ ಸೆಳೆಯಿತು. 

5 ಮಿಲಿಯನ್‌ ದಾಟಿದ 'ಯುವರತ್ನ' ಟ್ರೇಲರ್‌; ಪವರ್‌ ಪ್ಯಾಕ್‌ ಡೈಲಾಗ್‌, ಪುನೀತ್‌ ಖದರ್‌!...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಪುನೀತ್‌ ರಾಜ್‌ಕುಮಾರ್‌ ಹಾಗೂ ಸಂತೋಷ್‌ ಆನಂದ್‌ರಾಮ್‌ ಕಾಂಬಿನೇಷನ್‌ನ ‘ಯುವರತ್ನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಟ್ರೇಲರ್‌ ಬಿಡುಗಡೆ ಮಾಡಿದ ಚಿತ್ರತಂಡ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ‘ಯುವಸಂಭ್ರಮ’ದ ಹೆಸರಿನಲ್ಲಿ ಪ್ರವಾಸ ಹೊರಟಿದೆ. 

ಬಹುದಿನಗಳ ಬಳಿಕ ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಹೀಗಿದೆ ಇಂದಿನ ರೇಟ್!...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಕೊರೋನಾ ಹಾವಳಿಯಿಂದ ಬೆಲೆ ಏರಿಕೆ ಕಂಡಿದ್ದ ಚಿನ್ನದ ಮೌಲ್ಯ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

ಜಗತ್ತಿನ ಅತ್ಯಂತ ಡೇಂಜರಸ್ ರಸ್ತೆಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಂ.1...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಅಂತಾರಾಷ್ಟ್ರೀ ಚಾಲಕ ಸಂಘದ ಕಂಪನಿಯಾಗಿರು ಝುಟೋಬಿ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆಗಳ ಪಟ್ಟಿಯಲ್ಲಿ  ದಕ್ಷಿಣ ಆಫ್ರಿಕಾ ಮೊದಲನೆಯ ಸ್ಥಾನದಲ್ಲಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದೆ. ಹಾಗೆಯೇ, ಅತ್ಯಂತ ಸುರಕ್ಷಿತ ರಸ್ತೆಗಳ ಪಟ್ಟಿಯಲ್ಲಿ ನಾರ್ವೇ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ.

ಚೀನಾಗೆ ಸ್ಮಗಲ್ ಆಗುತ್ತಿದೆ ತಿಮ್ಮಪ್ಪನ ಭಕ್ತರ ಮುಡಿ ಕೂದಲು, ಭಾರತಕ್ಕೆ ಕೋಟಿ ಕೋಟಿ ನಷ್ಟ!...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು, ಅಲ್ಲಿ ಮುಡಿ ಕೊಟ್ಟು ಬರುವುದು ಪದ್ಧತಿ. ಇಲ್ಲಿ ಕೊಟ್ಟ ಮುಡಿ ಕೂದಲು ಚೀನಾಗೆ ಸ್ಮಗ್ಲಿಂಗ್ ಅಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ತಿರುಪತಿಯಿಂದ ಕಳ್ಳ ಮಾರ್ಗದಲ್ಲಿ ಚೀನಾಗೆ ಹೋಗುತ್ತಿದೆಯಂತೆ ಮುಡಿ ಕೂದಲು!

ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ!...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಅತಿ ದೊಡ್ಡ ಹಾಗೂ ಅಪಾಯಕಾರಿ ಕ್ಷುದ್ರ ಗ್ರಹ ಎಂದೇ ಪರಿಗಣಿಸಲ್ಪಟ್ಟಿದ್ದ ‘2001ಎಫ್‌032’ ಹೆಸರಿನ ಕ್ಷುದ್ರಗ್ರಹ| ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ

'ನಾವು ಹೇಳಿದ್ರೆ ಹುಸಿ ವಿಜ್ಞಾನ, ನೀವು ಹೇಳಿದ್ರೆ ಸಂಶೋಧನೆ! ಪತಂಜಲಿ ಪಂಚ್...

PM Modi Bangaladesh Visit to Yuvarathna movie top 10 news of March 22 ckmPM Modi Bangaladesh Visit to Yuvarathna movie top 10 news of March 22 ckm

ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.   ಆಯುರ್ವೇದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎನ್ನುವವರು  ಆರೋಗ್ಯ ಸ್ನೇಹಿ ಗೋಡೆ ಬಣ್ಣ,  ಎಲ್‌ ಇಡಿಇ ಬಲ್ಬ್ ಗಳಿಗೆ ಯಾವ ಆಧಾರದಲ್ಲಿ ಅನುಮೋದನೆ ಕೊಟ್ಟಿದ್ದಾರೆ ಎಂದು ಪ್ರಶ್ನೆ  ಇಟ್ಟಿದ್ದಾರೆ.

Follow Us:
Download App:
  • android
  • ios