ಮೋದಿ ಬಾಂಗ್ಲಾ ಭೇಟಿಗೆ ಇಸ್ಲಾಮಿಕ್‌ ಬೆದರಿಕೆ: ಆತಂಕ ಬೇಡವೆಂದ ಸರ್ಕಾರ

: ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಭೇಟಿ| ಕೆಲ ಎಡಪಂಥೀಯರು ಮತ್ತು ಕಟ್ಟರ್‌ ಇಸ್ಲಾಮಿಕ್‌ ಗುಂಪುಗಳು ತೀವ್ರ ವಿರೋಧ

Bangladesh dismisses security threat to PM Modi visit amid protests pod

ಢಾಕಾ(ಮಾ.22): ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಭೇಟಿಗೆ ಕೆಲ ಎಡಪಂಥೀಯರು ಮತ್ತು ಕಟ್ಟರ್‌ ಇಸ್ಲಾಮಿಕ್‌ ಗುಂಪುಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಬೆದರಿಕೆ ಹಾಕಿವೆ.

ಬಾಂಗ್ಲಾದೇಶ ಸ್ವತಂತ್ರವಾಗಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತು ಬಾಂಗ್ಲಾ ಸಂಸ್ಥಾಪಕ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮಾ.26 ಮತ್ತು 27ರಂದು ಎರಡು ದಿನಗಳ ಕಾಲ ಬಾಂಗ್ಲಾಕ್ಕೆ ಭೇಟಿ ನೀಡಲಿದ್ದಾರೆ. ಇದು ಕೊರೋನಾ ಆರಂಭವಾದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ವಿದೇಶಿ ಭೇಟಿಯಾಗಿದೆ.

ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿರುವ ಬಾಂಗ್ಲಾ ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್‌ ಮೊಮೆನ್‌, ‘ಮೋದಿ ಅವರನ್ನು ಆಹ್ವಾನಿಸಲು ಹೆಮ್ಮೆಯಾಗುತ್ತಿದೆ. ಕೆಲವರು ಅವರ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ವಿರೋಧಿಸಲಿ, ಸಮಸ್ಯೆ ಏನೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಆದರೆ ಕೆಲವರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ವಿದೇಶಿ ಅಥಿತಿಗಳ ಭದ್ರತೆಗೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಕಾರ‍್ಯಕ್ರಮಕ್ಕೆ ನೇಪಾಳ, ಶ್ರೀಲಂಕಾ, ಭೂತಾನ್‌, ಮಾಲ್ಡೀವ್‌್ಸ ಪ್ರಧಾನಿಗಳು ಸಹ ಭೇಟಿ ನೀಡಲಿದ್ದಾರೆ.

Latest Videos
Follow Us:
Download App:
  • android
  • ios