ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುಣೆಗೆ ತೆರಳುವ ವೇಳೆ, ಏರ್‌ಪೋರ್ಟ್‌ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪುತ್ರಿ ವಾಮಿಕಾ ಹಾಗೂ ತಮ್ಮ ಲಗೇಜನ್ನು ಒಬ್ಬರೇ ಹೊತ್ತುಕೊಂಡು ಹೋಗುವ ದೃಶ್ಯ ನೋಡುಗರ ಗಮನ ಸೆಳೆಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಹಮದಾಬಾದ್‌(ಮಾ.22): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಭಾನುವಾರ ಪುಣೆಗೆ ತೆರಳುವ ವೇಳೆ, ಏರ್‌ಪೋರ್ಟ್‌ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪುತ್ರಿ ವಾಮಿಕಾ ಹಾಗೂ ತಮ್ಮ ಲಗೇಜನ್ನು ಒಬ್ಬರೇ ಹೊತ್ತುಕೊಂಡು ಹೋಗುವ ದೃಶ್ಯ ನೋಡುಗರ ಗಮನ ಸೆಳೆಯಿತು. ಸಾಮಾಜಿಕ ತಾಣಗಳಲ್ಲಿ ಈ ಫೋಟೋ ವೈರಲ್‌ ಸಹ ಆಗಿದೆ.

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ವೇಳೆ ಕೊಹ್ಲಿ ತಮ್ಮ ಕುಟುಂಬ ಸದಸ್ಯರನ್ನು ಅಹಮದಾಬಾದ್‌ಗೆ ಕರೆಸಿಕೊಂಡಿದ್ದರು. ಇಲ್ಲಿಂದ ಏಕದಿನ ಸರಣಿ ಆಡಲು ಪುಣೆ ತೆರಳಿದ ಕೊಹ್ಲಿ, ಅಲ್ಲಿಗೂ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ತೆರಳಿದ್ದಾರೆ.

View post on Instagram

ಪುಣೆಗೆ ಬಂದಿಳಿದ ಟೀಂ ಇಂಡಿಯಾ

ಪುಣೆ: ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತ ತಂಡ ಭಾನುವಾರ, ಇಲ್ಲಿಗೆ ಬಂದಿಳಿಯಿತು. ಅಹಮದಾಬಾದ್‌ನಲ್ಲಿ ನಡೆದ ಕೊನೆಯ 2 ಟೆಸ್ಟ್‌ಗಳಲ್ಲಿ ಜಯಿಸಿದ್ದ ಭಾರತ, ಅಲ್ಲೇ ನಡೆದ 5 ಟಿ20 ಪಂದ್ಯಗಳ ಸರಣಿಯನ್ನು 3-2ರಲ್ಲಿ ತನ್ನದಾಗಿಸಿಕೊಂಡಿತ್ತು. 

T20 ಸರಣಿ ಗೆದ್ದ ಟೀಂ ಇಂಡಿಯಾಗೆ ಐಸಿಸಿ ಬರೆ; ತಪ್ಪು ಒಪ್ಪಿಕೊಂಡ ಕೊಹ್ಲಿ!

ಭಾನುವಾರ ಸಂಜೆ ಕೊಹ್ಲಿ ನೇತೃತ್ವದ ತಂಡ ವಿಶೇಷ ವಿಮಾನದ ಮೂಲಕ ಪುಣೆ ತಲುಪಿತು. ಮಾ.23ಕ್ಕೆ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಮಾ.26 ಹಾಗೂ ಮಾ.28ರಂದು ಕ್ರಮವಾಗಿ 2ನೇ ಹಾಗೂ 3ನೇ ಪಂದ್ಯ ನಡೆಯಲಿದೆ. ಏಕದಿನ ತಂಡದಲ್ಲಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.