ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ!
ಅತಿ ದೊಡ್ಡ ಹಾಗೂ ಅಪಾಯಕಾರಿ ಕ್ಷುದ್ರ ಗ್ರಹ ಎಂದೇ ಪರಿಗಣಿಸಲ್ಪಟ್ಟಿದ್ದ ‘2001ಎಫ್032’ ಹೆಸರಿನ ಕ್ಷುದ್ರಗ್ರಹ| ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ
ನ್ಯೂಯಾರ್ಕ್(ಮಾ.22): ಅತಿ ದೊಡ್ಡ ಹಾಗೂ ಅಪಾಯಕಾರಿ ಕ್ಷುದ್ರ ಗ್ರಹ ಎಂದೇ ಪರಿಗಣಿಸಲ್ಪಟ್ಟಿದ್ದ ‘2001ಎಫ್032’ ಹೆಸರಿನ ಕ್ಷುದ್ರಗ್ರಹ ಶನಿವಾರ ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಿದೆ. ಇದು ಭೂಮಿಗೆ ಅತ್ಯಂತ ಸಮೀಪದಲ್ಲೇ ಹಾದುಹೋಗುವ ಕಾರಣ ಅದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು.
ಪ್ರತಿ 810 ದಿನಕ್ಕೊಮ್ಮೆ ಸೂರ್ಯನನ್ನು ಸುತ್ತುಹಾಕುವ ಇದನ್ನು 2001ರಲ್ಲೇ ವಿಜ್ಞಾನಿಗಳು ಗುರುತಿಸಿದ್ದರು. ಜೊತೆಗೆ 2021 ಮಾ.21ರಂದು ರಾತ್ರಿಯ ಭೂಮಿಯ ಅತ್ಯಂತ ಸನಿಹದಲ್ಲೇ ಹಾದು ಹೋಗಲಿದೆ ಎಂದು ಪಕ್ಕಾ ಲೆಕ್ಕಾಹಾಕಿದ್ದರು. ಅದರಂತೆ ಭಾರತೀಯ ಕಾಲಮಾನ ಶನಿವಾರ ರಾತ್ರಿ 9.30ರ ವೇಳೆಗೆ ಭೂಮಿಯ ಪಕ್ಕದಲ್ಲೇ ಹಾದು ಹೋಗಿದೆ.
ಈ ವೇಳೆ ಅದರ ವೇಗ ಗಂಟೆಗೆ 1.24 ಲಕ್ಷ ಕಿ.ಮೀನಷ್ಟಿದ್ದು, ಭೂಮಿ ಮತ್ತು ಕ್ಷುದ್ರಗ್ರಹದ ನಡುವಿನ ಅಂತರ 20 ಲಕ್ಷ ಕಿ.ಮೀನಷ್ಟಿತ್ತು. ಈ ಕ್ಷುದ್ರಗ್ರಹ 440-680 ಮೀಟರ್‌ನಷ್ಟುಅಗಲವಿದೆ ಎಂದು ವಿಜ್ಞಾನಿಗಳು ಲೆಕ್ಕಹಾಕಿದ್ದಾರೆ.