ತಿವಾರಿ ಟು ಒವೈಸಿ: ಸಾವರ್ಕರ್ ‘ಭಾರತ’ ವಿರೋಧಿಸುವ ‘ರತ್ನ’ಗಳು!
ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರ| ಮಹಾರಾಷ್ಟ್ರ ವಿಧಾನಸಭೆಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ| ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ಭರವಸೆ| ಸಾವರ್ಕರ್’ಗೆ ಭಾರತ ರತ್ನ ನೀಡುವುದಕ್ಕೆ ಪ್ರತಿಪಕ್ಷಗಳ ತೀವ್ರ ವಿರೋಧ| ನಿರ್ಧಾರದ ವಿರುದ್ಧ ಬಿಜೆಪಿ ಮೇಲೆ ಏಕಾಏಕಿ ಮುಗಿಬಿದ್ದ ವಿಪಕ್ಷಗಳು| ಸಾವರ್ಕರ್ ಅಷ್ಟೇ ಏಕೆ ಗಾಂಧಿ ಹಂತಕ ಗೋಡ್ಸೆಗೂ ಭಾರತ ರತ್ನ ನೀಡಿ ಎಂದು ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ| ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರದ ಕುರಿತು ವಿಪಕ್ಷಗಳ ಅನುಮಾನ| ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ಏನು ಎಂದು ಕೇಳುತ್ತಿವೆ ವಿಪಕ್ಷಗಳು|
ನವದೆಹಲಿ(ಅ.17): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ಅಧಿಕಾರಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಭರವಸೆ ನೀಡಿದೆ.
ಬಿಜೆಪಿಯ ಈ ನಿರ್ಧಾರ ದೇಶದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದು, ಸಾವರ್ಕರ್’ಗೆ ಭಾರತ ರತ್ನ ನೀಡುವ ನಿರ್ಧಾರವನ್ನು ವಿಪಕ್ಷಗಳು ಟೀಕಿಸಿವೆ.
ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಸಾವರ್ಕರ್ ಪಾತ್ರವನ್ನು ಪ್ರಶ್ನಿಸುತ್ತಿರುವ ವಿಪಕ್ಷಗಳು, ಪ್ರಮುಖವಾಗಿ ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಅವರ ಪಾತ್ರದ ಕುರಿತು ಅನುಮಾನ ವ್ಯಕ್ತಪಡಿಸುತ್ತಿವೆ.
ಇತಿಹಾಸದ ಪುಟಗಳಲ್ಲಿ ಹಾಯಾಗಿದ್ದ ವೀರ ಸಾವರ್ಕರ್ ಇದೀಗ ಏಕಾಏಕಿ ಮುನ್ನೆಲೆಗೆ ಬರಲು, ಮಹಾರಾಷ್ಟ್ರ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಅವಕಾಶ ಒದಗಿಸಿದೆ.
ವೀರ ಸಾವರ್ಕರ್‌ಗೆ ಭಾರತ ರತ್ನ: ಮಹಾರಾಷ್ಟ್ರ ಗೆಲ್ಲಲು ಬಿಜೆಪಿ ಪ್ರಯತ್ನ!
ದೇಶಾದ್ಯಂತ ಸಾವರ್ಕರ್ ಪರ, ವಿರೋಧ ಚರ್ಚೆ ಇದೀಗ ಜೋರಾಗಿದ್ದು, ಅವರು ಭಾರತ ರತ್ನಕ್ಕೆ ಅಹರ್ರೇ ಅಥವಾ ಅಲ್ಲವೇ ಎಂಬ ಚರ್ಚೆ ಶುರುವಾಗಿದೆ.
ಇದೇ ಕಾರಣಕ್ಕೆ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದು ಸರಿಯಲ್ಲ ಎಂಬುದು ವಿಪಕ್ಷಗಳ ನಿಲುವು. ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತಾದರೆ ಈ ದೇಶವನ್ನು ಆ ದೇವರೇ ಕಾಪಾಡಬೇಕು ಎಂದು ಕಾಂಗ್ರೆಸ್ ಅಪಸ್ವರ ಎತ್ತಿದೆ.
‘ಗೋಡ್ಸೆಗೆ ಕೊಟ್ಟರೆ ಒಳ್ಳೆದಲ್ವಾ’?:
ಬಿಜೆಪಿ ಸಾವರ್ಕರ್ ಬದಲು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೆ ಭಾರತ ರತ್ನ ನೀಡಿದರೆ ಒಳಿತು ಎಂದು ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ವ್ಯಂಗ್ಯವಾಡಿದ್ದಾರೆ.
ಸಾವರ್ಕರ್ ಕೇವಲ ಗಾಂಧಿ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದರು. ಆದರೆ ಗೋಡ್ಸೆ ನೇರವಾಗಿ ಗಾಂಧಿ ಅವರಿಗೆ ಗುಂಡಿಕ್ಕಿದ್ದ. ಇವರ ಸಿದ್ಧಾಂತವನ್ನೇ ಪ್ರತಿಪಾದಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇರವಾಗಿ ಗೋಡ್ಸೆ ಅವರಿಗೇ ಭಾರತ ರತ್ನ ನೀಡಲಿ ಎಂಬುದು ತಿವಾರಿ ವಾದ.
ಸಾವರ್ಕರ್ ಹೆಸರು ಭಾರತರತ್ನಕ್ಕೆ ಶಿಫಾರಸು; ಕಾಂಗ್ರೆಸ್, ಒವೈಸಿ ತೀವ್ರ ಆಕ್ಷೇಪ
‘ಗಾಂಧಿ ಎದೆಗೆ ಗುಂಡಿಕ್ಕಿದ ಗೋಡ್ಸೆಗೂ ಕೊಡಿ ಭಾರತ ರತ್ನ’:
ಇನ್ನು ಎಐಎಂಐಎಂ ಮುಖ್ಯಸ್ಥ, ನವಭಾರತದ ಮುಸ್ಲಿಂ ಸಮುದಾಯದ ಹೊಸ ಧ್ವನಿ ಎಂದೇ ಬಿಂಬಿತವಾಗಿರುವ ಅಸದುದ್ದೀನ್ ಒವೈಸಿ ಕೂಡ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇವಲ ಸಾವರ್ಕರ್ ಮಾತ್ರ ಏಕೆ, ಗಾಂಧಿ ಅವರ ಎದೆಗೆ ಗುಂಡಿಕ್ಕಿದ ನಾಥೂರಾಮ್ ಗೋಡ್ಸೆಗೂ ಭಾರತ ರತ್ನ ನೀಡಿದರೆ ಚೆಂದ ಎಂದು ಒವೖಸಿ ಬಿಜೆಪಿಯನ್ನು ಕಿಚಾಯಿಸಿದ್ದಾರೆ.
‘ಗಾಂಧಿ ಹತ್ಯೆಗೆ ಸಾವರ್ಕರ್ ಪ್ರೇರಣೆ’:
ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ , ನಾಥೂರಾಮ್ ಗೋಡ್ಸೆಗೆ ಮಹಾತ್ಮಾ ಗಾಂಧಿ ಅವರನ್ನು ಕೊಲ್ಲುವಂತೆ ಪ್ರೆರೇಪಿಸಿದ್ದೇ ಸಾವರ್ಕರ್ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವೀರ ಸಾವರ್ಕರ್ ಸಿದ್ಧಾಂತವನ್ನು ಒಪ್ಪುವ ಅಥವಾ ಒಪ್ಪದೇ ಇರುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರುವುದು ದಿಟ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವನ್ನು ನಗಣ್ಯ ಎನ್ನುವುದನ್ನು ಒಪ್ಪುವುದು ಕಷ್ಟ.
ಸಾವರ್ಕರ್ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಆಗ್ತಿರಲಿಲ್ಲ: ಉದ್ಧವ್ ಠಾಕ್ರೆ!
ಬ್ರಿಟಿಷರ ದಾಸ್ಯದ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಕರಿನೀರಿನ ಶಿಕ್ಷೆಗೂ ಗುರಿಯಾಗಿದ್ದಲ್ಲದೇ ಅಖಂಡ ಭಾರತದ ಕನಸು ಕಾಣುತ್ತಲೇ ಕಣ್ಣು ಮುಚ್ಚಿದವರು ಸಾವರ್ಕರ್ ಎಂದು ಇತಿಹಾಸವೇ ಹೇಳುತ್ತದೆ.