Asianet Suvarna News Asianet Suvarna News

ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ ಕಳುಹಿಸಿದ್ರೆ ಜಾಮೀನು ರಹಿತ ಪ್ರಕರಣ, ಬಂಧನ

  • ಸೋಶಿಯಲ್ ಮೀಡಿಯಾದಲ್ಲಿ  ತಪ್ಪು ಸಂದೇಶ, ಪ್ರಚೋದನೆ ಮಾಡಿದರೆ ಜಾಮೀನು ರಹಿತ ಪ್ರಕರಣ
  • ಗಾಂಜಾ ಬೆಳೆಯುವ, ಶಾಲಾ - ಕಾಲೇಜುಗಳಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ನಡೆಯದಂತೆ ನಿಗಾ
Non Bailable Warrant For Misuse of Social Media
Author
Bengaluru, First Published Sep 6, 2018, 5:06 PM IST

ಶಿವಮೊಗ್ಗ: ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ, ಪ್ರಚೋದನಾತ್ಮಕ ಸಂದೇಶಗಳನ್ನು ಹರಡಿದರೆ  ಜಾಮೀನು ರಹಿತ ಪ್ರಕರಣ ದಾಖಲು ಮಾಡಿ ಬಂಧಿಸಲಾಗುವುದೆಂದು ಎಡಿಜಿಪಿ ಕಮಲಪಂತ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲಪಂತ್, ರಾಜಧಾನಿ ಬೆಂಗಳೂರು ಬಿಟ್ಟರೇ ಅತಿ ಹೆಚ್ಚು ಎಫ್ ಐಆರ್ ಗಳು ಶಿವಮೊಗ್ಗದಲ್ಲಿ ದಾಖಲಾಗುತ್ತಿವೆ.  ಶಿವಮೊಗ್ಗ ಮತ್ತು ಭದ್ರಾವತಿ ಸೇರಿ ಕಮಿಷನರೇಟ್ ಮಾಡುವ ಪ್ರಸ್ತಾಪ ಸದ್ಯ ಇಲ್ಲ, ಎಂದು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗಾಂಜಾ ಬೆಳೆಯುವ ಪ್ರಕರಣಗಳು , ಶಾಲಾ - ಕಾಲೇಜುಗಳಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ನಡೆಯದಂತೆ ನಿಗಾ ವಹಿಸಲಾಗಿದೆ. ಅಲ್ಲದೇ ಡ್ರಗ್ಸ್ ಮತ್ತು ಗಾಂಜಾ ಮಾಫಿಯಾ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ. ರಾಜ್ಯದಲ್ಲಿ ಆಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ, ಬಾಂಗ್ಲಾದೇಶದ ವಲಸಿಗರ ಬಗ್ಗೆ ಪೋಲೀಸ್ ಇಲಾಖೆ ನಿಗಾ ವಹಿಸುತ್ತಿದೆ, ಎಂದು ಕಮಲ್ ಪಂತ್ ಅವರು ಹೇಳಿದ್ದಾರೆ.

ಶಿವಮೊಗ್ಗದ ಎಸ್ಪಿ ಚೇಂಬರ್ ನಿಂದ ಬೆಲೆಬಾಳುವ ಅನೆದಂತ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಜಿಯಿಂದ ಪ್ರತ್ಯೇಕ ತನಿಖೆ, ಹಾಗೂ ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಒಂದು ಎಫ್ ಐಆರ್ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ. ನಮ್ಮ ಇಲಾಖೆಯ ಅಸ್ತಿ ಕಳೆದುಕೊಂಡ ನೋವು ಇದೆ. ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ, ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

 

 

ಇದೇ ಸಂದರ್ಭದಲ್ಲಿ, ಕೋಮು ಗಲಭೆ ವಿಷಯಗಳಲ್ಲಿ ಶಿವಮೊಗ್ಗ ಜಿಲ್ಲೆಯ ವಾತಾವರಣ ಸಾಕಷ್ಟು ಸುಧಾರಣೆ ಆಗಿದೆ, ಎಂದು ಅವರು ಅಭಿಪ್ರಯಾಯ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios