Asianet Suvarna News Asianet Suvarna News

ವಾಟ್ಸಾಪ್ ಸಂದೇಶಗಳು ನಿಮ್ಮ ಬಯೋಮೆಟ್ರಿಕ್‌ ಡೇಟಾ ಕದಿಯೋದು ಹೌದಾ..?

‘ಎಲ್ಲಾ ಸ್ನೇಹಿತರೇ, ವಾಟ್ಸಾಪ್ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ. ಕೆಲ ವಾಟ್ಸಾಪ್ ಸಂದೇಶಗಳು ನಿಮ್ಮ ಹೆಬ್ಬೆಟ್ಟಿನ ಗುರುತು ನೀಡುವಂತೆ ಕೇಳುತ್ತಿವೆ. ಹೆಬ್ಬೆಟ್ಟು ಒತ್ತಿದ ಬಳಿಕವಷ್ಟೇ ಆ ಸಂದೇಶಗಳು ತೆರೆದುಕೊಳ್ಳುತ್ತಿವೆ.  ಇಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 
 

Stealing Bio Metric Data Using WhatsApp
Author
Bengaluru, First Published Aug 13, 2018, 2:09 PM IST

‘ಎಲ್ಲಾ ಸ್ನೇಹಿತರೇ, ವಾಟ್ಸಾಪ್ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ. ಕೆಲ ವಾಟ್ಸಾಪ್ ಸಂದೇಶಗಳು ನಿಮ್ಮ ಹೆಬ್ಬೆಟ್ಟಿನ ಗುರುತು ನೀಡುವಂತೆ ಕೇಳುತ್ತಿವೆ. ಹೆಬ್ಬೆಟ್ಟು ಒತ್ತಿದ ಬಳಿಕವಷ್ಟೇ ಆ ಸಂದೇಶಗಳು ತೆರೆದುಕೊಳ್ಳುತ್ತಿವೆ. 

ಸ್ವಾತಂತ್ರ್ಯ ದಿನಾಚರಣೆ, ಹೊಸ ವರ್ಷದ ಶುಭಾಷಯದ ನೆಪದಲ್ಲಿ ಬರುವ ಈ ಸಂದೇಶಗಳು ನಿಮ್ಮ ಹೆಬ್ಬೆಟ್ಟನ್ನು ಸ್ಕ್ಯಾನ್ ಮಾಡುತ್ತಿವೆ. ಇಂಥ ಸಂದೇಶಗಳಿಂದ ದೂರವಿರಿ. ಈ ರೀತಿ ನಿಮ್ಮ ಹೆಬ್ಬೆಟ್ಟನ್ನು ಸ್ಕ್ಯಾನ್ ಮಾಡುವುದರಿಂದ ಆ್ಯಪ್‌ ಮಾಲೀಕರು ನಿಮ್ಮ ಬಯೋಮೆಟ್ರಿಕ್‌ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದು. 

ನಿಮ್ಮ ಆಧಾರ್‌ ಪ್ಯಾನ್‌ ಸಂಖ್ಯೆ ಮತ್ತು ಬ್ಯಾಂಕ್‌ ಖ್ಯಾತೆಯೊಂದಿಗೆ ಲಿಂಕ್‌ ಹೊಂದಿರುತ್ತದೆ. ದಯವಿಟ್ಟು ಇಂತಹ ಸಂದೇಶಗಳು ಬಂದಾಗ ಎಚ್ಚರಿಕೆಯಿಂದಿರಿ. ಈ ಸಂದೇಶವನ್ನು ಎಲ್ಲರಿಗೂ ಕಳುಹಿಸಿ’ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರೊಂದಿಗೆ ಹ್ಯಾಶ್‌ಟ್ಯಾಗ್‌ ಹಾಕಿ ಟ್ರಾಯ್‌(ಟಿಆರ್‌ಎಐ) ಎಂದು ಬರೆಯಲಾಗಿದೆ.

ಹೀಗೆ ಹರಿದಾಡುತ್ತಿರುವ ಸಂದೇಶದ ಮೇಲೆ ನಿಮ್ಮ ಹೆಬ್ಬೆಟ್ಟು ಒತ್ತಿದ್ದಾಗ ಶುಭಾಷಯ ಕೋರುವ ಸಪ್ರೈರ ಗಿಫ್ಟ್‌ ತೆರೆದುಕೊಳ್ಳುತ್ತದೆ. ಇದರಿಂದ ಆ್ಯಪ್‌ ಮಾಲೀಕರು ಬಯೋಮೆಟ್ರಿಕ್‌ ಡೇಟಾವನ್ನು ಕದಿಯುತ್ತಾರೆ ಎಂದು ಭಯ ಹುಟ್ಟಿಸಲಾಗುತ್ತಿದೆ. ಆದರೆ ನಿಜಕ್ಕೂ ಹೆಬ್ಬೆಟ್ಟು ಒತ್ತಿದಾಗ ಬಯೋಮೆಟ್ರಿಕ್‌ ಮಾಹಿತಿಯನ್ನು ಕದಿಯಲಾಗುತ್ತಿದೆಯೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. 

ಇದು ವಾಟ್ಸ್‌ಆ್ಯಪ್‌ ಸ್ಕ್ಯಾಮ್ ಮತ್ತೊಂದು ವಿಧ. ಹೀಗೆ ಹೆಬ್ಬೆಟ್ಟು ಒತ್ತಿ ಸಂದೇಶ ತೆರೆದುಕೊಂಡಾಗ ನಿಮ್ಮ ಬಯೋಮೆಟ್ರಿಕ್‌ ಮಾಹಿತಿಯೇನೂ ಕದಿಯುವುದಿಲ್ಲ ಬದಲಾಗಿ ಅಲ್ಲಿ ಬರುವ ಜಾಹೀರಾತುಗಳಿಂದ ಹಣಗಳಿಸುತ್ತಾರೆ. ಥಂಬ್‌ಪ್ರಿಂಟ್‌ ಇಮೇಜ್‌ ಕೇವಲ ಗಿಫ್ಟ್‌ ಇಮೇಜ್‌. ಅದು ಆ್ಯನಿಮೇಟೆಡ್‌ ಇಮೇಜಾಗಿರುತ್ತದೆ. ಇಂತಹ ಇಮೇಜ್‌ ಕೆಳಗೆ ಸೆನ್ಸಾರ್‌ ಅಳವಡಿಸಲಾಗಿರುತ್ತದೆ. ಹೆಬ್ಬೆರಳು ಸ್ಪರ್ಶವಾದಾಗ ಆ ಸಂದೇಶ ತೆರೆದುಕೊಳ್ಳುತ್ತದಷ್ಟೆ. ಹಾಗಾಗಿ ಇಂತಹ ಸಂದೇಶಗಳು ನಿಮ್ಮ ಬಯೋಮೆಟ್ರಿಕ್‌ ಡೇಟಾವನ್ನು ಕದಿಯುತ್ತವೆ ಎಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು.

Follow Us:
Download App:
  • android
  • ios