ವಾಷಿಂಗ್ಟನ್ :  ಇನ್ನುಮುಂದೆ ನನಗೆ ಓದಿದ್ದೇನು ನೆನಪಲ್ಲಿ ಇರೋದಿಲ್ಲ. ನಾನು ಬುದ್ದಿವಂತನೇ ಅಲ್ಲ ಎಂದು ಕೊರಗುವ ಅಗತ್ಯವಿಲ್ಲ. ಯಾಕೆಂದರೆ ವಿಜ್ಞಾನಿಗಳು ಇದಕ್ಕೂ ಒಂದು ಪರಿಹಾರವನ್ನು ಕಂಡು ಹಿಡಿಯುತ್ತಿದ್ದಾರೆ. 

ಕೃತ ಬುದ್ದಿ ಮತ್ತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು  ಇದಕ್ಕಾಗಿ ಔಷಧವನ್ನು ಶೋಧನೆ ಮಾಡುತ್ತಿದ್ದಾರೆ.  ಈ ವ್ಯವಸ್ಥೆ ರಚನಾತ್ಮಕ ಬಲವರ್ಧನೆ ವ್ಯವಸ್ಥೆ ಎಂದು ಹೆಸರಿಡಲಾಗಿದೆ.  ಇದರಿಂದ ವಿದ್ಯಾರ್ಥಿಗಳು ಕಲಿಯಲ್ಲ ಎನ್ನುವ ತಲೆ ನೋವು ಇರದು. 

ಎಷ್ಟು ತಿಳಿಸಿ ಹೇಳಿದರು ತಿಳಿದುಕೊಳ್ಳುವುದಿಲ್ಲ ಎನ್ನುವ  ದೂರುಗಳು  ಈ ಹೊಸ ಮೆಡಿಸಿನ್ ನಿಂದ ದೂರವಾಗಲಿದೆ. ಕೃತಕವಾಗಿ  ಔಷಧವು ವಿದ್ಯಾರ್ಥಿಗಳಿಗೆ ಶಿಕ್ಷಕರ 2 ನರ ಮಂಡಲಗಳು ಹೊಂದಾಣಿಕೆಯಾಗಿ ಕಲಿಕಾ ಸಾಮರ್ಥ್ಯ ಹೆಚ್ಚಳವಾಗುವಂತೆ ಮಾಡುತ್ತದೆ.  

ಇದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹೊಸತನವೊಂದು ಆರಂಭವಾಗಲಿದೆ ಎಂದು ನಾರ್ಥ್ ಕರೋಲಿನ ವಿಶ್ವವಿದ್ಯಾಲಯದ  ಅಲೆಕ್ಸಾಂಡರ್ ಟ್ರೋಸ್ಪಾ ಹೇಳಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಈ ಔಷಧ ಸೇವನೆಯಿಂದ ಹೆಚ್ಚಳ ಮಾಡಬಹುದಾಗಿದೆ.