ಮುದ್ದೆ ಉಪ್ಸಾರು ಮಾಡೋದು ಹೇಗೆ? ಡ್ರೋನ್ ಪ್ರತಾಪ್ ರೆಸಿಪಿ ಹೇಳಿದ್ದಾರೆ ಕೇಳಿಸಿಕೊಂಡು ಟ್ರೈ ಮಾಡಿ
ಮುದ್ದೆಗೆ ಉಪ್ಸಾರು ಇದ್ದರೇನೇ ರುಚಿ. ಅದನ್ನು ಜನರು ನಾನಾ ವೆರೈಟಿಯಲ್ಲಿ ಮಾಡ್ತಾರೆ. ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಹೇಗೆ ಮಾಡಿದ್ದಾರೆ ನಿಮಗೆ ಗೊತ್ತಾ? ಟೇಸ್ಟ್ ಮಾಡಿ ನೋಡಿ.
ಮುದ್ದೆ – ಉಪ್ಸಾರು ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಅನೇಕರು, ಅವರು ಇವರು ಮಾಡಿದ್ದು ತಿಂತಾರೆಯೇ ವಿನಃ ಏನು ಮಾಡಿದ್ರೂ ಮುದ್ದೆ – ಉಪ್ಸಾರ್ ಮಾಡೋಕೆ ಬರಲ್ಲ ಕಣ್ರಿ ಎನ್ನುವವರಿದ್ದಾರೆ. ಉಪ್ಸಾರ್ ರುಚಿ ಸಖತ್ ಆಗಿರಬೇಕು ಅಂದ್ರೆ ನೀವು ಡ್ರೋನ್ ಪ್ರತಾಪ್ ಸ್ಟೈಲ್ ಟ್ರೈ ಮಾಡಿ. ಕಲರ್ಸ್ ಕನ್ನಡದ ಸವಿರುಚಿ ಸೀಸನ್ ಮೂರರಲ್ಲಿ ಡ್ರೋನ್ ಪ್ರತಾಪ್, ನಿರೂಪಕಿ ಜಾಹ್ನವಿ ಅವರಿಗೆ ಮುದ್ದೆ – ಉಪ್ಸಾರ್ ತಿನ್ನಿಸಿ ಸೈ ಎನ್ನಿಸಿಕೊಂಡಿದ್ದಾರೆ. ಡ್ರೋನ್ ಪ್ರತಾಪ್, ಸ್ವಲ್ಪ ಭಿನ್ನ ಶೈಲಿಯಲ್ಲಿ ಉಪ್ಸಾರ್ ಮಾಡಿದ್ದಾರೆ. ನೀವಿನ್ನೂ ಈ ಸ್ಟೈಲ್ ನಲ್ಲಿ ಮಾಡಿಲ್ಲ ಅಂದ್ರೆ ಟ್ರೈ ಮಾಡಿ.
ಕಲರ್ಸ್ (Colors) ಕನ್ನಡದ ಸವಿರುಚಿ ಎಲ್ಲರ ಮನಸ್ಸು ಗೆಲ್ಲುತ್ತಿರುವ ಶೋ. ಜಾಹ್ನವಿ ಆಂಕರಿಂಗ್ ಜೊತೆ ಬರುವ ಗೆಸ್ಟ್, ಮಾಡುವ ಅಡುಗೆ (Cooking) ಎಲ್ಲರ ಮೆಚ್ಚಿಗೆ ಗಳಿಸಿದೆ. ಸದಾ ವಿವಾದದಲ್ಲಿರುವ, ಬಿಗ್ ಬಾಸ್ (Bigg Boss) ಶೋನಲ್ಲಿ ಎರಡನೇ ಸ್ಥಾನ ಪಡೆದಿರುವ ಡ್ರೋನ್ ಪ್ರತಾಪ್, ಸವಿರುಚಿ ಶೋಗೆ ಬಂದು ಹೊಸ ಶೈಲಿಯಲ್ಲಿ ಉಪ್ಸಾರ್ ಮಾಡಿ ಗಮನ ಸೆಳೆದಿದ್ದಾರೆ.
ತಿನ್ನದೇ ಇರೋದ್ರಿಂದ ತೂಕ ಕಡಿಮೆಯಾಗಲ್ಲ..ವೈಟ್ ಲಾಸ್ ಬಗ್ಗೆ ನಿಮ್ಗೆ ಗೊತ್ತಿರದ ವಿಚಾರಗಳಿವು
ತರಕಾರಿ ಉಪ್ಸಾರಿಗೆ ಬೇಕಾಗುವ ಪದಾರ್ಥ : ಡ್ರೋನ್ ಪ್ರತಾಪ್ ಸೊಪ್ಪಿನ ಉಪ್ಸಾರಿಗೆ, ಗುಂಟೂರು ಮೆಣಸಿನ ಕಾಯಿ, ಬ್ಯಾಡಗಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಟೊಮಾಟೊ, ಹೆಸರು ಬೇಳೆ, ಹೆಸರು ಕಾಳು, ತೊಗರಿ ಬೇಳೆ, ಸಬ್ಬಸಿಗೆ ಸೊಪ್ಪು, ಪಾಲಾಕ್ ಸೊಪ್ಪು, ಹರವೆ ಸೊಪ್ಪು, ಮೆಂತ್ಯ ಸೊಪ್ಪು, ಕಾಳು ಮೆಣಸು, ಸಾಸಿವೆ, ಕರಿಬೇವು, ಜೀರಿಗೆ, ಹುಣಸೆ ಹಣ್ಣು, ಈರುಳ್ಳಿಯನ್ನು ತೆಗೆದುಕೊಂಡಿದ್ದಾರೆ.
ಸೊಪ್ಪಿನ ಉಪ್ಸಾರ್ ಮಾಡುವ ವಿಧಾನ : ಮೊದಲು ಒಂದು ಕುಕ್ಕರನ್ನು ಗ್ಯಾಸ್ ಮೇಲಿಟ್ಟು, ಅದಕ್ಕೆ ಎರಡು ಎರಡು ಕಪ್ ನೀರನ್ನು ಹಾಕಿ ಗ್ಯಾಸ್ ಆನ್ ಮಾಡಿ. ನೀರಿಗೆ ಟೊಮೊಟೊ ಹಾಕಿ, ಹೆಸರು ಬೇಳೆ ಹಾಗೂ ಹೆಸರು ಕಾಳು, ಉಪ್ಪು ಮತ್ತು ತೊಗರಿ ಬೇಳೆಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ. ಎರಡು ಸಿಟಿಯಾಗುವವರೆಗೆ ಹಾಗೆ ಬಿಡಿ. ಇತ್ತ ಇನ್ನೊಂದು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಮೆಣಸಿನಕಾಯಿಯನ್ನು ಹಾಕಿ. ಗುಂಟೂರು ಮೆಣಸಿನ ಕಾಯಿಗೆ ಬ್ಯಾಡಗಿ ಮೆಣಸಿನ ಕಾಯಿ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಮೆಣಸಿನಕಾಯಿ ನಂತ್ರ ಕಾಳು ಮೆಣಸಿನ ಕಾಳುಗಳನ್ನು ಬಾಣಲೆಗೆ ಹಾಕಿ ಬಿಸಿ ಮಾಡಿಕೊಳ್ಳಿ.
ನಂತ್ರ ಕೆಂಪು ಮೆಣಸು ಹಾಗೂ ಬೆಳ್ಳುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಹುಣಸೆ ಹಣ್ಣನ್ನು ಅರೆಯುವ ಕಲ್ಲಿನ ಮೇಲಿಟ್ಟು ನುಣ್ಣುಗೆ ಅರೆದುಕೊಳ್ಳಿ. ಕುಕ್ಕರ್ ಸೀಟಿ ಕೂಗಿ ಆರಿದ ಮೇಲೆ ಕುಕ್ಕರ್ ಮುಚ್ಚಳ ತೆಗೆದು, ಅದಕ್ಕೆ ಸಬಸಿಗೆ ಸೊಪ್ಪು, ಮೆಂತ್ಯ ಸೊಪ್ಪು, ಹರಿವೆ ಸೊಪ್ಪು, ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ಎಲ್ಲ ಸೊಪ್ಪು ಚೆನ್ನಾಗಿ ಬೆಂದ ಮೇಲೆ ಅದನ್ನು ಬಸಿದುಕೊಳ್ಳಿ. ಬಸಿದ ನೀರಿಗೆ ಅರೆದಿಟ್ಟುಕೊಂಡ ಮಸಾಲೆ ಸೇರಿಸಬೇಕು. ಇತ್ತ ಬಸಿದ ಮೇಲೆ ಉಳಿದ ತರಕಾರಿ, ಬೇಳೆಗೆ ಒಗ್ಗರಣೆ ಹಾಕಬೇಕು. ಹಾಗಾಗಿ ಒಂದು ಪಾತ್ರೆಯನ್ನು ಬಿಸಿ ಮಾಡಿ, ಅದಕ್ಕೆ ಎರಡು ಚಮಚ ಎಣ್ಣೆ ಹಾಕಿಕೊಳ್ಳಿ. ನಂತ್ರ ಸಾಸಿವೆ ಹಾಕಿ. ಆ ನಂತ್ರ ಮೆಣಸಿನ ಕಾಯಿ ಹಾಕಿ. ಕರಿಬೇವು, ಜೀರಿಗೆ, ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈರುಳ್ಳಿ ಕಂದು ಬಣ್ಣಕ್ಕೆ ಬಂದ ಮೇಲೆ ಬಸಿದಿಟ್ಟ ಬೇಳೆ, ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ದುಬಾರಿ ಕ್ರೀಮ್ ಕೊಂಡು ಮುಖಕ್ಕೆ ಹಚ್ಚಬೇಕಿಲ್ಲ, ಈ ಡ್ರೈಫ್ರೂಟ್ಸ್ ತಿಂದ್ರೆ ಮುಖ ಫಳಫಳ ಹೊಳೆಯುತ್ತೆ
ಇನ್ನು ಮಸಾಲೆ ಬೆರೆಸಿದ ಉಪ್ಸಾರನ್ನು ಚೆನ್ನಾಗಿ ಕುದಿಸಿದ್ರೆ ಮುದ್ದೆಗೆ ಉಪ್ಸಾರು ಸಿದ್ಧ. ಇದನ್ನು ತಿಂದ ಚಾಹ್ನವಿ ವಾವ್ ಅಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಗಿ ಮುದ್ದೆ ಮಾಡಿ ಕಷ್ಟಪಟ್ಟಿದ್ದ ಡ್ರೋನ್ ಪ್ರತಾಪ್ ಉಪ್ಸಾರ್ ಮಾಡೋ ಶೈಲಿ ನೋಡಿ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ.