ಬಲಿದಾನ ಮಾಡಿದ ಪೊಲೀಸ್ ಕೈಮೇಲಿದ್ದ ಆ ಸಂಖ್ಯೆ ಹೇಳಿದ ಘೋರ ಕತೆ!...

ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಶರನ್ನು ಹತ್ಯೆ ಮಾಡಿದ್ದ ಆರು ಜನ ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದ್ದು ಆರನೇಯ ಆರೋಪಿಯನ್ನು ಹತ್ಯೆ ಮಾಡಲಾಗಿದೆ.  ಜಿಂದ್ ಜಿಲ್ಲೆಯಲ್ಲಿ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ

‘ಬ್ರಹ್ಮ’ನ ಹೆಸರಲ್ಲಿ ಬಿಯರ್‌: ಜಾಹೀರಾತಿನಲ್ಲಿ ಬಿಕಿನಿಧಾರಿಣಿ!

ಬೆಲ್ಜಿಯಂನಲ್ಲಿ ‘ಬ್ರಹ್ಮ’ ಹೆಸರಿನ ಬಿಯರ್‌ ಬಿಡುಗಡೆ ಆಗಿರುವುದು ಹಾಗೂ ಈ ಬಿಯರ್‌ ಜಾಹೀರಾತಿನಲ್ಲಿ ನಿತಂಬ ಕಾಣಿಸುವಂತೆ ನಿಂತ ಯುವತಿಯೊಬ್ಬಳು ಪೋಸ್‌ ಕೊಡುತ್ತಿರುವುದು ಹಿಂದೂ ಧರ್ಮೀಯರನ್ನು ಕೆರಳಿಸಿದೆ.

ಕೊರೋನಾ ಅಟ್ಟಹಾಸ: ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ!...

ರಾಜ್ಯದಲ್ಲಿ ಕಳೆದ ಐದು ದಿನದಿಂದ ಸೋಂಕಿನ ಪಾಸಿಟಿವ್‌ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಕಳೆದ ಐದು ದಿನಗಳಿಂದ ಪ್ರತಿ 100 ಪರೀಕ್ಷೆಯಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ.

ಮುಂಬೈ, ದೆಹಲಿಗಿಂತ ಬೆಂಗ್ಳೂರು ಡೇಂಜರ್..! ಸೋಂಕಿತರು ಏರಿಕೆ, ಡಿಸ್ಚಾರ್ಜ್ ಆಗುವವರು ಇಳಿಕೆ...

ದೆಹಲಿ, ಮುಂಬೈಗಿಂತ ಬೆಂಗಳೂರು ಡೇಂಜರ್..ಡೇಂಜರ್.! ಕಳೆದ 3 ದಿನಗಳಲ್ಲಿ ಶೇ. 15.7 ರಷ್ಟು ಪಾಸಿಟೀವ್ ಕೇಸ್‌ಗಳು ಹೆಚ್ಚಳವಾಗಿವೆ. ಮೊನ್ನೆ 1235 ಕೇಸ್, ನಿನ್ನೆ 981 ಹೊಸ ಕೇಸ್‌ಗಳು ಪತ್ತೆಯಾಗಿವೆ. ಕಳೆದ 6 ದಿನಗಳಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಮಾತ್ರವಲ್ಲ, ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಕಡಿಮೆ ಇದೆ. 

ವಿಶ್ವಗೆದ್ದ ಧೋನಿಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ...

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ, ರಾಂಚಿ ಎನ್ನುವ ಗುಡ್ಡಗಾಡು ಭಾಗದಿಂದ ಬಂದು ದೇಶಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಪ್ರಚಂಡ ನಾಯಕ ಧೋನಿಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ. ಧೋನಿ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

37 ವರ್ಷಕ್ಕೇ ಅಧ್ಯಾತ್ಮದತ್ತ ಒಲವು ತೋರಿದ್ರಾ ನಟಿ ರಮ್ಯಾ?...

ಸಿನಿಮಾ ರಂಗದಿಂದ ದೂರ ಉಳಿದರೂ ನಂಬರ್‌ 1 ಬ್ಯೂಟಿ ಮತ್ತು ಸೂಪರ್ ಹಿಟ್ ನಟಿ ಅಂದ್ರೆ ರಮ್ಯಾನೆ. ಇತ್ತೀಚಿಗೆ ನಡೆದ ಗುರು ಪೂರ್ಣಿಮೆಯಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಗಾಯಿತ್ರಿ ಮಂತ್ರ ಹಾಗೂ ಅದರ ಅರ್ಥಗಳನ್ನು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ರಮ್ಯಾ ಅಧ್ಯಾತ್ಮದತ್ತ ಒಲವು ತೋರಿಸುತ್ತಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಬಿಎಲ್ ‌ ಸಂತೋಷ್‌ಗೆ ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19 ಕುರಿತು ಬಿಜೆಪಿ ಕೈಗೊಂಡಿದ್ದ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭದಲ್ಲಿ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕುವೈತ್ ಮಸೂದೆ‌: 50 ಸಾವಿರ ಕನ್ನಡಿಗರ ಉದ್ಯೋಗಕ್ಕೆ ಕುತ್ತು!

 ಕೊರೋನಾ ಸಂಕಷ್ಟದ ಕಾರಣಕ್ಕಾಗಿ ಗಲ್‌್ಫ ದೇಶಗಳಲ್ಲಿದ್ದ ಸಾವಿರಾರು ಕನ್ನಡಿಗರು ಉದ್ಯೋಗ ಕಳೆದುಕೊಂಡು ತಾಯ್ನೆಲಕ್ಕೆ ಹಿಂದುರುಗುತ್ತಿರುವ ಸಂದರ್ಭದಲ್ಲಿಯೇ ಕುವೈತ್‌ನಲ್ಲಿರುವ 50 ಸಾವಿರಕ್ಕೂ ಅಧಿಕ ಕನ್ನಡಿಗರು ಇದೀಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಕುವೈಟ್‌ ಇದೀಗ ತನ್ನಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಉದ್ಯೋಗಿಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲು ಉದ್ದೇಶಿಸಿದೆ

ಅಪರಿಚಿತಳ ಜೊತೆ ಸೆಕ್ಸ್‌ನಲ್ಲಿರುವಾಗಲೇ ಹಾರ್ಟ್ ಆಟ್ಯಾಕ್: ಪರಿಹಾರಕ್ಕೆ ಕೋರ್ಟ್ ಆದೇಶ...

ಇದೊಂದು ವಿಚಿತ್ರ ಪ್ರಕರಣ.  ಬಿಜಿನಸ್ ಟ್ರಿಪ್ ನಲ್ಲಿದ್ದ ವ್ಯಕ್ತಿ ಅಪರಿಚಿತಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಮಗ್ನನಾಗಿದ್ದ. ಇದೇ ವೇಳೆ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಾನೆ.

ದೂತಾವಾಸ ಕಚೇರಿ ಮೂಲಕವೇ 30 ಕೆಜಿ ಅಕ್ರಮ ಚಿನ್ನ ಸಾಗಣೆ: ಸಿಎಂಗೆ ಢವ ಢವ....

ತಿರುವನಂತಪುರದ ಸೌದಿ ಅರೆಬಿಯಾ ದೂತಾವಾಸ ಕಚೇರಿಯಿಂದ 30 ಕೆಜಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿದ ಪ್ರಕರಣ ಈಗ ಕೇರಳ ಸಿಎಂ ಕಚೇರಿ ಕದ ತಟ್ಟಿದೆ. ಕೊರೋನಾ ಮಧ್ಯೆಯೇ ಕೇರಳದಲ್ಲಿ ವಿವಾದಕ್ಕೆ ಒಳಗಾದ ಈ ಪ್ರಕರಣದಿಂದ ಸಿಎಂಗೆ ಢವ ಢವ ಶುರುವಾಗಿದೆ.