ಬಲಿದಾನ ಮಾಡಿದ ಪೊಲೀಸ್ ಕೈಮೇಲಿದ್ದ ಆ ಸಂಖ್ಯೆ ಹೇಳಿದ ಘೋರ ಕತೆ!

ಹತರಾದ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆ/ ಆರೋಪಿಗಳ ಬಂಧನಕ್ಕೆ ಸುಳಿವು ನೀಡಿದ ವಾಹನ ಸಂಖ್ಯೆ/ ಸಾವಿಗೂ ಮುನ್ನ ಅಂಗೈ ಮೇಲೆ ವಾಹನ ಸಂಖ್ಯೆ ಬರೆದುಕೊಂಡಿದ್ದ ಪೊಲೀಸ್ ಅಧಿಕಾರಿ

Haryana Cop Left Clue To Identity Of Accused Before He Was Killed

ಚಂಡಿಘಡ(ಜು. 06) ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಶರನ್ನು ಹತ್ಯೆ ಮಾಡಿದ್ದ ಆರು ಜನ ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದ್ದು ಆರನೇಯ ಆರೋಪಿಯನ್ನು ಹತ್ಯೆ ಮಾಡಲಾಗಿದೆ.  ಜಿಂದ್ ಜಿಲ್ಲೆಯಲ್ಲಿ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ

ಹತನಾದ ಆರೋಪಿಯ ಗುರುತು ಪತ್ತೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ ಆಗಿತ್ತು. ಆದರೆ ದುಷ್ಕರ್ಮಿಗಳಿಂದ ಹತರಾದ ಪೊಲೀಸ್ ಕಾನ್ಸೇಟಬಲ್ ತಮ್ಮ ಸಾವಿಗೂ ಮುನ್ನ ಆರೋಪಿಗಳ ವಾಹನ ಸಂಖ್ಯೆಯನ್ನು ಕೈಮೇಲೆ ಬರೆದುಕೊಂಡಿದ್ದರು. ಈ ಒಂದು ಸುಳಿವು ಇಲ್ಲ ಎಂದಾಗಿದ್ದರೆ ಪೊಲೀಸರು ಆರೋಪಿಗಳ ಪತ್ತೆಗೆ ಬೇರೆ ಬೇರೆ ಮಾರ್ಗ ಹಿಡಿಯಬೇಕಾಗಿತ್ತು. 

ಉಗ್ರ ದಾಳಿಯಾದರೇನು? ಭಾರತೀಯ ಸೈನಿಕರ ಕೈಯಲ್ಲಿ ಈ ಕಂದ ಸುರಕ್ಷಿತ

ಪೊಲೀಸ್ ಅಧಿಕಾರಿಗಳ ಪೋಸ್ಟ್ ಮಾರ್ಟ್ಂ ಸಂದರ್ಭ ಈ ವಾಹನ ಸಂಖ್ಯೆ ಕಣ್ಣಿಗೆ ಕಂಡಿದೆ. ಇದೊಂದು ದೊಡ್ಡ ಸುಳಿವಾಗಿ  ಪರಿಣಮಿಸಿದೆ. ಸ್ಪೇಶಲ್ ಆಫೀಸರ್ ಕಪ್ತಾನ್ ಸಿಂಗ್ ಮತ್ತು ರವೀಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ವೀರ ಮರಣ ಅಪ್ಪಿದ ಕಾನ್ಸ್ಟೇಬಲ್ ರವೀಂದ್ರ ಸಿಂಗ್ ಅವರಿಗೆ ಪೊಲೀಸ್ ಪದಕಕ್ಕೂ ಶಿಫಾರಸು ಮಾಡಲಾಗಿದೆ.

ಪೊಲೀಸರು ಸಾಮಾನ್ಯವಾಗಿ ಇಂಥ ಸುಳಿವುಗಳನ್ನು ಪತ್ತೆ ಮಾಡಿ ಇಡುತ್ತಾರೆ. ಪೋಸ್ಟ್ ಮಾರ್ಟ್ಂ ವೇಳೆ ಸಹೋದ್ಯೋಗಿಗಳು ಪತ್ತೆ ಮಾಡಿದ್ದು ಆರೋಪಿಗಳನ್ನು  ಶೀಘ್ರವಾಗಿ ಬಂಧಿಸಲು ನೆರವಾಯಿತು ಎಂದು ಹರಿಯಾಣ ಪೊಲೀಸ್ ಹಿರಿಯ ಅಧಿಕಾರಿ ಮನೋಜ್ ಯಾದವ್ ತಿಳಿಸಿದ್ದಾರೆ.

ನಿಷೇಧಾಜ್ಞೆ ಇದ್ದ ಪ್ರದೇಶದಲ್ಲಿ ಪುಂಡರ ತಂಡ ಒಂದು ಮದ್ಯದ ಪಾರ್ಟಿ ಮಾಡುತ್ತಿತ್ತು.  ಇದನ್ನು ಪ್ರಶ್ನೆ ಮಾಡಿದ ಕಪ್ತಾನ್ ಸಿಂಗ್ ಮತ್ತು ರವೀಂದ್ರ ಸಿಂಗ್ ಮೇಲೆ ಆಯುಧಗಳಿಂದ ದುಷ್ಕರ್ಮಿಗಳು ದಾಳಿ ಮಾಡಿ  ಹತ್ಯೆ ಮಾಡಿದ್ದರು. 

Latest Videos
Follow Us:
Download App:
  • android
  • ios