ಧಾರವಾಡ(ಮಾ.07): ಸೈನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಹೇಳಿದ್ದಾರೆ. ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಕಲಾವತಿ, ಭಾರತೀಯ ಸೇನೆ ನಡೆಸಿದ ಏರ್‌ಸ್ಟ್ರೈಕ್ ಸಾಕ್ಷಿ ಕೇಳುತ್ತಿರುವವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಕಣಿವೆಯಲ್ಲಿ ಮತ್ತೊಂದು ಬ್ಲಾಸ್ಟ್: ಬಸ್ ನಲ್ಲಿ ಚೀನೀ ಗ್ರೆನೇಡ್ ಸ್ಫೋಟ

ಭಾರತೀಯ ಸೈನಿಕರನ್ನ ಪಾಕಿಸ್ತಾನ ಸಾಯಿಸುತ್ತಿದೆ. ಭಯೋತ್ವಾದನೆಗೆ ಕುಮ್ಮಕ್ಕು ನೀಡಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸುತ್ತಿದೆ. ಇಷ್ಟಾದರೂ ಪಾಕಿಸ್ತಾನವನ್ನ ಸುಮ್ಮನೆ ಬಿಡುತ್ತಿದ್ದಾರೆ ಅನ್ನೋದೇ ಗೊತ್ತಿಲ್ಲ. ನಾವು ಸೈನಿಕರನ್ನು ಕಳೆದುಕೊಳ್ಳುತ್ತಲೇ ಇದ್ದೇವೆ. ಆದರೆ ಪಾಕಿಸ್ತಾನದಲ್ಲಿ ಸೈನಿಕರನ್ನು ಕಳೆದುಕೊಳ್ಳುವ ಸ್ಥಿತಿ ಇಲ್ಲ ಎಂದು ಕಲಾವತಿ ಹೇಳಿದ್ದಾರೆ.

ಇದನ್ನೂ ಓದಿ: ಗಡಿಯಲ್ಲಿ ಪಾಕ್‌ ಸೇನಾ ಜಮಾವಣೆ ಹೆಚ್ಚಳ!

ಅವರು ಎಷ್ಟು ಸೈನಿಕರನ್ನು ಸಾಯಿಸಿದ್ದಾರೋ ಅದರ ಎರಡು ಪಟ್ಟು ಪಾಕ್ ಸೈನಿಕರನ್ನ ಸಾಯಿಸಬೇಕು. ಈ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದಿದ್ದಾರೆ. ಸೇನೆಯ ಪ್ರತಿ ಹೆಜ್ಜೆಯನ್ನು ಬೆಂಬಲಿಸಬೇಕು. ಈ ಮೂಲಕ ಮತ್ತಷ್ಟು ಸದೃಢಗೊಳಿಸಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ನೆಕ್ಸ್ಟ್ ಟೈಮ್ ಸಾಕ್ಷಿ ಕೇಳೋರನ್ನ ವಿಮಾನಕ್ಕೆ ಕಟ್ಟೋಣ: ವಿಕೆ ಸಿಂಗ್!

ಪುಲ್ವಾಮಾ ಭಯೋತ್ಪಾದ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಮಂಡ್ಯದ ಯೋಧ ಗುರು ಕೂಡ ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಿರುವ ಭಾರತೀಯ ಸೇನೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಅಡಗುಣತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದೆ.