ಬಾಲಾಕೋಟ್ ಸಾಕ್ಷಿ ಕೇಳಿದವರನ್ನೇ ವಿಮಾನಕ್ಕೆ ಕಟ್ಟಿದರೆ ಹೇಗೆ?| ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ ವ್ಯಂಗ್ಯಭರಿತ ಟ್ವೀಟ್| ಸಾಕ್ಷಿ ಕೇಳೋರನ್ನ ವಿಮಾನಕ್ಕೆ ಕಟ್ಟಿ ಕಳುಹಿಸೋಣ ಎಂದ ನಿವೃತ್ತ ಸೇನಾ ಮುಖ್ಯಸ್ಥ| ವಿಕೆ ಸಿಂಗ್ ಟ್ವೀಟ್ ಗೆ ಪ್ರತಿಪಕ್ಷಗಳ ಆಕ್ರೋಶ|
ನವದೆಹಲಿ(ಮಾ.06): ಬಾಲಾಕೋಟ್ ಏರ್ ಸರ್ಜಿಕಲ್ ಸ್ಟ್ರೈಕ್ ಕುರಿತು ಸಾಕ್ಷಿ ಕೇಳುತ್ತಿರುವವರನ್ನು ಕೇಂದ್ರ ಸಚಿವ, ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಲಾಕೋಟ್ ದಾಳಿಯ ಸಾಕ್ಷಿ ಕೇಳುತ್ತಿರುವವರನ್ನು ಮುಂದಿನ ಬಾರಿ ವಿಮಾನಕ್ಕೆ ಕಟ್ಟಿ ಹಾರಿಸಲಾಗುವುದು ಎಂದು ವಿಕೆ ಸಿಂಗ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಕೆ ಸಿಂಗ್, ಮುಂದಿನ ಬಾರಿ ದಾಳಿ ನಡೆದಾಗ ಸಾಕ್ಷಿ ಕೇಳುವವರನ್ನು ವಿಮಾನಕ್ಕ ಕಟ್ಟಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ರಾತ್ರಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದ ಪರಿಣಾಮ ನಾನು ಹಿಟ್ ಬಳಿಸಿದ್ದೆ. ನಾನು ಎಷ್ಟು ಸೊಳ್ಳೆಗಳು ಸತ್ತಿವೆ ಎಂದು ಎಣಿಸಲೇ ಎಂದು ವಿಕೆ ಸಿಂಗ್ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.
