ಜಮ್ಮು ಕಾಶ್ಮೀರದ ಬಸ್ ನಲ್ಲಿ ಸ್ಫೋಟ|ಗಾಯಾಳುಗಳ ಸಂಖ್ಯೆ 26ಕ್ಕೇರಿಕೆ, ಐವರ ಸ್ಥಿತಿ ಗಂಭೀರ| ಜಮ್ಮುವಿನಿಂದ ದೆಹಲಿಗೆ ಹೊರಟಿದ್ದ ಬಸ್ ನಲ್ಲಿ ಸ್ಫೋಟ

ಶ್ರೀನಗರ[ಮಾ.07]: ಕಣಿವೆ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಬ್ಲಾಸ್ಟ್ ಸಂಭವಿಸಿದೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ನಲ್ಲಿ ಈ ಬಾಂಬ್ ಸಿಡಿದಿದ್ದು, ಹಲವರಿಗೆ ಗಾಯಗಳಾಗಿವೆ. ಸ್ಫೋಟದ ಹಿಂದಿನ ಕಾರಣವೇನು ಎಂಬುವುದು ಈವರೆಗೂ ತಿಳಿದು ಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಪೋಟದಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

Scroll to load tweet…

ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ನನ್ನು ಶ್ರೀನಗರದಿಂದ ಜಮ್ಮುವಿಗೆ ಸ್ಥಳಾಂತರಿಸಿದ ಕೆಲವೇ ಕ್ಷಣಗಳಲ್ಲಿ ಈ ಸ್ಫೋಟ ಸಂಭವಿಸಿದೆ ಎನ್ನುವುದು ಗಮನಾರ್ಹ. ಸ್ಫೋಟದ ಹಿನ್ನೆಲೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳವನ್ನು ಪೊಲೀಸರು ಹಾಗೂ ಭದ್ರತಾ ಪಡೆ ಸುತ್ತುವರೆದಿದ್ದು, ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸುತ್ತಿದೆ.