ಭಾರತದಲ್ಲಿ ಹತರಾದ ಉಗ್ರರ ಕುಟುಂಬಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಲಷ್ಕರ್-ಎ-ತೊಯ್ಬಾದ ಹಿರಿಯ ಕಮಾಂಡರ್ ಖಾರಿ ಸಯೀದ್ ಅಬ್ದುಲ್ ಅಜೀಜ್, ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಭಾರತದಲ್ಲಿ ಸಾವನ್ನಪ್ಪಿದ ಉಗ್ರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ, ಲಷ್ಕರ್ ಸೀನಿಯರ್ ಕಮಾಂಡರ್ ಖಾರಿ ಸಯೀದ್ ಅಬ್ದುಲ್ ಅಜೀಜ್ ಪಾಕಿಸ್ತಾನದಲ್ಲಿ ಅನುಮಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಇಸ್ಲಾಮಾಬಾದ್ನಲ್ಲಿರುವ 'ಕುಬಾ ಮಸೀದ್'ನಲ್ಲಿ ಪ್ರಾರ್ಥನೆಗಾಗಿ ಬಂದ ವೇಳೆ ಏಕಾಏಕಿ ಕುಸಿತುಬಿದ್ದು ಕೊನೆಯುಸಿರೆಳೆದಿದ್ದಾನೆ. ಮಸೀದಿಗೆ ಆಮಿಸುವ ಕೆಲವೇ ಕ್ಷಣಗಳ ಮುನ್ನ ಒಂದು ರಹಸ್ಯ ಸ್ಥಳದಲ್ಲಿ ಊಟ ಮಾಡಿದ್ದ, ಇದಾದ ಬಳಿಕ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಆತನ ಮೇಲೆ ವಿಷಪ್ರಯೋಗ ನಡೆದಿದೆಯಾ ಎಂಬ ಅನುಮಾನ ಮೂಡಿದೆ.

ಆಗಸ್ಟ್ 08ರ ಶನಿವಾರದಂದು ಇಸ್ಲಾಬಾದ್ನಲ್ಲಿರುವ ಮಸೀದಿಯಲ್ಲಿ ಘಟನೆ ನಡೆದಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ. ಅದರಲ್ಲೂ ಮಸೀದಿ ಆವರಣ ಪ್ರವೇಶಿಸಿದ ಸಮಯದಲ್ಲಿಯೇ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಮೃತಪಟ್ಟ ಉಗ್ರ ಭಾರತದಲ್ಲಿರುವ ಉಗ್ರರ ಕುಟುಂಬಗಳಿಗೆ ಹಣದ ನೆರವು ನೀಡುವ ಕೆಲಸ ಮಾಡುತ್ತಿದ್ದನಂತೆ. ಈತನ ಸಾವಿಗೆ ನಿಖರ ಕಾರಣ ಎಂದು ಇದುವರೆಗೂ ತಿಳಿದು ಬಂದಿಲ್ಲ. ಇದರೊಂದಿಗೆ ಹಲವು ಅನುಮಾನಗಳು ಎದುರಾಗುತ್ತಿದೆ.

ಊಟದ ಬಳಿಕ ಏಕಾಏಕಿ ಸಾವು!

ಅಂತರಾಷ್ಟ್ರೀಯ ಮಾಧ್ಯಮಗಳ ವರದಿಯ ಅನ್ವಯ, ಖಾರಿ ಸಯೀದ್ ಅಬ್ದುಲ್ ಅಜೀಜ್ ಮಸೀದಿಗೆ ಆಗಮಿಸುವ ಕೆಲವು ನಿಮಿಷಗಳ ಮುನ್ನ ಒಂದು ರಹಸ್ಯ ಸ್ಥಳದಲ್ಲಿ ಊಟ ಮಾಡಿದ್ದನಂತೆ. ಊಟದ ಬಳಿಕ ಪ್ರಾರ್ಥನಾ ಸ್ಥಳಕ್ಕೆ ಆಗಮಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದು, ಆತನ ಸಾವಿನ ಬಗ್ಗೆ ಅನುಮಾನಗಳು ಹೆಚ್ಚಾಗಿದೆ.

ಭಾರತದಲ್ಲಿ ಉಗ್ರರಿಗೆ ನೆರವು

ಖಾರಿ ಸಯೀದ್ ಅಬ್ದುಲ್ ಅಜೀಜ್ ಲಷ್ಕರ್ ಸಂಘಟನೆಯ ಪ್ರಮುಖ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಭಾರತದ ಜಮ್ಮು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆಗಳ ದಾಳಿಯಲ್ಲಿ ಸಾವನ್ನಪ್ಪಿದ್ದ ಉಗ್ರರ ಕುಟುಂಬಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದನಂತೆ. ಅಲ್ಲದೇ ಆ ಕುಟುಂಬಗಳಿಗೆ ಆರ್ಥಿಕ ನೆರವು, ಬೆಂಬಲ ನೀಡುವ ವಿಭಾಗದ ನೇತೃತ್ವವನ್ನು ಹೊಂದಿದ್ದನಂತೆ.

ಹೃದಯಾಘಾತನಾ? ವಿಷ ಪ್ರಯೋಗ ಆಯ್ತಾ?

ಅಬ್ದುಲ್ ಅಜೀಜ್ ಕಾರಣ ಇದೇ ಆಗಿರುತ್ತದೆ ಎಂದು ಹಲವು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಹೃದಯಾಘಾತ ಆಯ್ತಾ ಅಥವಾ ರಹಸ್ಯ ಸ್ಥಳದಲ್ಲಿ ಸೇವಿಸಿದ ಊಟದಲ್ಲಿ ವಿಷ ಪ್ರಯೋಗ ಮಾಡಿ ಅವರನ್ನು ಕೊಲೆ ಮಾಡಿದ್ರಾ ಎಂದು ಹಲವರು ಭಾವಿಸುತ್ತಿದ್ದಾರೆ. ಆದರೆ ಉದ್ದೇಶ ಪೂರ್ವಕವಾಗಿ ಅಬ್ದುಲ್ ಅಜೀಜ್ ಟಾರ್ಗೆಟ್ ಮಾಡಿ, ಆತನ ಕೊಲೆ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಪೂರವೆಗಳು ಸದ್ಯಕ್ಕೆ ಸಿಕ್ಕಿಲ್ಲ ಎಂದು ಎನ್‌ಡಿ ಟಿವಿ ವರದಿ ಮಾಡಿದೆ. ಈ ಘಟನೆಯ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಆಗಲಿ, ಇತರ ಅಧಿಕಾರಿಗಳ ವರ್ಗವಾಗಲಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.