ಪಾಕಿಸ್ತಾನದ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಎಷ್ಟು ದಂಡ ಹಾಕ್ತಾರೆ ?
ಪಾಕಿಸ್ತಾನದ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತೀರಾ? ಎಚ್ಚರ! ಇಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಈ ದಂಡದ ಲೆಕ್ಕಾಚಾರ ಹೇಗೆ? ತಿಳಿಯಲು ಕ್ಲಿಕ್ ಮಾಡಿ.

ಪಾಕಿಸ್ತಾನದ ರೈಲು
ಮಾನ್ಯವಾದ ಟಿಕೆಟ್ ಇಲ್ಲದೇ ರೈಲುಗಳಲ್ಲಿ ಪ್ರಯಾಣಿಸೋದು ದಂಡಾರ್ಹ ಮತ್ತು ಶಿಕ್ಷಾರ್ಹವಾಗಿದೆ. ಭಾರತೀಯ ರೈಲುಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಕಾಯ್ದೆಯ ಸೆಕ್ಷನ್ 137 ಅಡಿಯಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ನೆರೆಯ ಪಾಕಿಸ್ತಾನದ ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಯಾವ ರೀತಿ ದಂಡ ಹಾಕ್ತಾರೆ ಎಂಬುದನ್ನು ನೋಡೋಣ ಬನ್ನಿ.
ಪಾಕಿಸ್ತಾನದ ರೈಲುಗಳಲ್ಲಿ ದಂಡ
ಪಾಕಿಸ್ತಾನದ ರೈಲು ವಿಭಾಗ ಸಹ ಟಿಕೆಟ್ ರಹಿತ ಪ್ರಯಾಣಕ್ಕೆ ದೊಡ್ಡಮೊತ್ತದ ದಂಡವನ್ನು ವಿಧಿಸುತ್ತದೆ. ತಪಾಸಣೆ ಸಿಬ್ಬಂದಿ ಟಿಕೆಟ್ ರಹಿತ ಪ್ರಯಾಣಿಕನನ್ನು ಹಿಡಿದ ಸ್ಥಳದಿಂದ ದಂಡದ ಲೆಕ್ಕಾಚಾರ ಆರಂಭಗೊಳ್ಳುತ್ತದೆ. ರೈಲು ತನ್ನ ಪ್ರಯಾಣ ಆರಂಭಿಸಿದ ಸ್ಥಳದಿಂದ ದಂಡವನ್ನು ಲೆಕ್ಕ ಮಾಡಲಾಗುತ್ತದೆ.
ಟಿಕೆಟ್ ರಹಿತ ರೈಲು ಪ್ರಯಾಣ
ಟಿಕೆಟ್ ರಹಿತ ರೈಲು ಪ್ರಯಾಣವನ್ನು ಸಂಪೂರ್ಣವಾಗಿ ತಡೆಯಲು ಪಾಕಿಸ್ತಾನ ರೈಲ್ವೆ ಆಡಳಿತವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ನಿಯಮದ ಬಗ್ಗೆ ಪ್ರಯಾಣಿಕರಿಗೆ ನಿಯಮಿತವಾಗಿ ಎಚ್ಚರಿಕೆ ನೀಡಿದೆ. ನೆರೆಯ ಪಾಕಿಸ್ತಾನದಲ್ಲಿ ಮೂಲ ಟಿಕೆಟ್ ದರ ಪಡೆದುಕೊಂಡು ಪ್ರಯಾಣಿಕರನ್ನು ಕಳುಹಿಸಲ್ಲ.
ಎರಡುಪಟ್ಟು ದಂಡ
ಟಿಕೆಟ್ ರಹಿತ ಪ್ರಯಾಣಿಕನಿಗೆ ಎರಡುಪಟ್ಟು ದಂಡ ವಿಧಿಸಲಾಗುತ್ತದೆ. ನಿಯಮಗಳ ಪ್ರಕಾರ, ಟಿಕೆಟ್ ದರದ ದ್ವಿಗುಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ 1 ಸಾವಿರ ರೂಪಾಯಿ ಟಿಕೆಟ್ ಮೊತ್ತವಾದ್ರೆ, ಪ್ರಯಾಣಿಕ 2 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

