ಮಿಸ್ ಯೂನಿವರ್ಸ್ ಇಂಡಿಯಾ 2026ರ 52 ಫೈನಲಿಸ್ಟ್‌ಗಳು ತಮ್ಮ 10 ದಿನಗಳ ತರಬೇತಿ ಕಾರ್ಯಕ್ರಮದ ಭಾಗವಾಗಿ ಇಂದೋರ್‌ನಲ್ಲಿ ನಡೆದ ಸೂಫಿ ನೈಟ್‌ನಲ್ಲಿ ಭಾಗವಹಿಸಿದ್ದರು. ಗ್ಲಾಮಾನಂದ್ ಗ್ರೂಪ್ ಆಯೋಜಿಸುತ್ತಿರುವ ಈ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಆಗಸ್ಟ್ 23 ರಂದು ಜೈಪುರದಲ್ಲಿ ನಡೆಯಲಿದೆ.
Miss Universe India 2026 ಕಿರೀಟಕ್ಕಾಗಿ ಸ್ಪರ್ಧಿಸುತ್ತಿರುವ 52 ಫೈನಲಿಸ್ಟ್‌ಗಳು ಫೈನಲ್‌ಗೂ ಮುನ್ನ ನಡೆಯುತ್ತಿರುವ 10 ದಿನಗಳ ತರಬೇತಿ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 8 ರಂದು ಮಧ್ಯಪ್ರದೇಶದ ಇಂದೋರ್/ದೇವಾಸ್ ಬಳಿಯ ಅನ್‌ವಿಂಡ್ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದ್ದ ಸೂಫಿ ನೈಟ್‌ನಲ್ಲಿ ಒಂದೆಡೆ ಸೇರಿದ್ದರು.
ಈ ಸಂಗೀತ ಸಂಜೆಯನ್ನು ಸ್ಪರ್ಧಿಗಳಿಗೆ ವಿಶ್ರಾಂತಿ ನೀಡಲು, ಲೈವ್ ಸಂಗೀತವನ್ನು ಆನಂದಿಸಲು ಮತ್ತು ಕಠಿಣ ಸ್ಪರ್ಧೆಯ ಶೆಡ್ಯುಲ್ಡ್ ನಡುವೆ ಪರಸ್ಪರ ಬೆರೆಯಲು ಆಯೋಜಿಸಲಾಗಿತ್ತು ಎಂದು ರಾಷ್ಟ್ರೀಯ ನಿರ್ದೇಶಕ ನಿಖಿಲ್ ಆನಂದ್ ತಿಳಿಸಿದ್ದಾರೆ.
ಕಾರ್ಯಕ್ರಮದ ಥೀಮ್‌ಗೆ ತಕ್ಕಂತೆ ಸ್ಪರ್ಧಿಗಳು ಸಾಂಪ್ರದಾಯಿಕ ಇಂಡೋ-ವೆಸ್ಟರ್ನ್ ಉಡುಗೆಗಳು ಮತ್ತು ಸೀರೆಗಳಲ್ಲಿ ಮಿಂಚಿದರು.
ಗ್ರ್ಯಾಂಡ್ ಫಿನಾಲೆ ಯಾವಾಗ?
ಗ್ಲಾಮಾನಂದ್ ಗ್ರೂಪ್ ಈ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಇದರ ಗ್ರ್ಯಾಂಡ್ ಫಿನಾಲೆ ಆಗಸ್ಟ್ 23 ರಂದು ರಾಜಸ್ಥಾನದ ಜೈಪುರದ ಝೀ ಸ್ಟುಡಿಯೋಸ್‌ನಲ್ಲಿ ನಡೆಯಲಿದೆ. ಈಗಿನ ಮಿಸ್ ಯೂನಿವರ್ಸ್ ಇಂಡಿಯಾ, ಮನಿಕಾ ವಿಶ್ವಕರ್ಮ ಅವರು ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಉತ್ತರಾಧಿಕಾರಿಗೆ ಕಿರೀಟವನ್ನು ತೊಡಿಸಲಿದ್ದಾರೆ.
52 ಫೈನಲಿಸ್ಟ್‌ಗಳ ಆಯ್ಕೆ
ಭಾರತದಾದ್ಯಂತ ನಡೆದ ಪ್ರಾದೇಶಿಕ ರಾಜ್ಯ ಮಟ್ಟದ ಸ್ಪರ್ಧೆಗಳ ಮೂಲಕ ಈ 52 ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲಾಗಿದೆ. ಅಂತಿಮ ಮತ್ತು ಎನ್‌ಆರ್‌ಐ ಆಡಿಷನ್‌ಗಳ ಮೂಲಕ ಹೆಚ್ಚುವರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯೋಜಕರ ಪ್ರಕಾರ, ಫೆಬ್ರವರಿಯಲ್ಲಿ ಆಡಿಷನ್‌ಗಳು ಪ್ರಾರಂಭವಾಗಿದ್ದವು. ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಮೊದಲು ಸುಮಾರು 8,000 ದಿಂದ 9,000 ಆಕಾಂಕ್ಷಿಗಳನ್ನು ಪರಿಗಣಿಸಲಾಗಿತ್ತು. ಇದೀಗ ಸ್ಪರ್ಧಿಗಳು ಸಂವಹನ, ಪ್ರೆಸೆಂಟೇಶನ್, ನೃತ್ಯ, ರಿಹರ್ಸಲ್ ಮತ್ತು ಸ್ಪರ್ಧೆಯ ಇತರ ಅಂಶಗಳ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಫೈನಲ್‌ಗೆ ಹತ್ತಿರವಾಗುತ್ತಿದ್ದಂತೆ ರಿಹರ್ಸಲ್ ಸಮಯ ದಿನಕ್ಕೆ ಸುಮಾರು 14 ರಿಂದ 15 ಗಂಟೆಗಳವರೆಗೆ ಹೆಚ್ಚಾಗಬಹುದು ಎಂದು ಆಯೋಜಕರು ಹೇಳಿದ್ದಾರೆ.
ಫೈನಲಿಸ್ಟ್‌ಗಳ ಡ್ರಿಮ್ಸ್, ಮಾತುಗಳು
ಪ್ರಮಿತಿ ರಾಣಾ, ದೆಹಲಿ:
ದೆಹಲಿಯ ಫೈನಲಿಸ್ಟ್ ಪ್ರಮಿತಿ ರಾಣಾ ಈ ಅನುಭವವನ್ನು ಒಂದು The Learning Journey
ಎಂದು ಬಣ್ಣಿಸಿದ್ದಾರೆ. 'ಈ ಎಲ್ಲ ವಿಷಯಗಳಿಂದ ನೀವು ಕೇವಲ ಬಾಹ್ಯ ವಿಷಯಗಳನ್ನು ಕಲಿಯುವುದಿಲ್ಲ. ಶಿಸ್ತು, ಸ್ಥೈರ್ಯ, ಈ ಎಲ್ಲ ವಿಷಯಗಳನ್ನು ನೀವು ಒಳಗಿನಿಂದ ಕಲಿಯುತ್ತೀರಿ ಎಂದು ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ರಾಣಾ ಅವರ ಗುರಿ ಸ್ಪಷ್ಟವಾಗಿತ್ತು, 'ಮಿಸ್ ಯೂನಿವರ್ಸ್ ಇಂಡಿಯಾ ಆಗುವುದೇ ನನ್ನ ಗುರಿ.
ದೆಹಲಿಯನ್ನು ಪ್ರತಿನಿಧಿಸುತ್ತಿರುವ ಅವರು, ಈ ರಾಜ್ಯದಿಂದ ಇನ್ನೂ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಬಂದಿಲ್ಲ ಎಂದು ಹೇಳಿ, ನಾನು ಅದನ್ನು ಬದಲಾಯಿಸುತ್ತೇನೆ ಎಂದು ಅತ್ಮವಿಶ್ವಾದಿಂದ ನುಡಿದರು. ಹಿಂದೆ ಮಾಡೆಲಿಂಗ್ ಮತ್ತು ಕ್ಯಾಬಿನ್ ಕ್ರೂ ಅನುಭವವಿದ್ದರೂ, ಇದು ತಮ್ಮ ಮೊದಲ ಸೌಂದರ್ಯ ಸ್ಪರ್ಧೆ ಎಂದು ಹೇಳಿದ ಅವರು ತಮ್ಮ ಆತ್ಮವಿಶ್ವಾಸ, ಮಾತನಾಡುವ ಕೌಶಲ್ಯ, ನಡಿಗೆ ಮತ್ತು ಶಿಸ್ತಿಗೆ ತಮ್ಮ ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸಿದರು.
ಉಮಾಂಗ ಕುಮಾವತ್, ಮಧ್ಯಪ್ರದೇಶ
ಮಧ್ಯಪ್ರದೇಶದ ಪ್ರತಿನಿಧಿ ಉಮಾಂಗ ಕುಮಾವತ್, ಈ ಸ್ಪರ್ಧೆಯತ್ತ ತಮ್ಮ ಪಯಣ ಹಲವು ವರ್ಷಗಳ ಹಿಂದೆಯೇ ಆರಂಭವಾಯಿತು ಎಂದು ಹೇಳಿದರು. ಸುಶ್ಮಿತಾ ಸೇನ್ ಯಾವಾಗಲೂ ನನ್ನ ಸ್ಫೂರ್ತಿ. ಹಾಗಾಗಿ, ನಾನು ಯಾವಾಗಲೂ ಮಿಸ್ ಯೂನಿವರ್ಸ್ ಇಂಡಿಯಾಗೆ ಹೋಗಿ, ಮಿಸ್ ಯೂನಿವರ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಬಯಸಿದ್ದೆ' ಎಂದರು.
ಕುಮಾವತ್ ಈ ಸ್ಪರ್ಧೆಯನ್ನು 'ತುಂಬಾ ಕಠಿಣ ಸ್ಪರ್ಧೆ' ಎಂದು ಬಣ್ಣಿಸಿದರೂ, ತಯಾರಿ ಉದ್ದಕ್ಕೂ ಸ್ಪರ್ಧಿಗಳು ಬೆಳೆಯುತ್ತಲೇ ಇರುತ್ತಾರೆ ಎಂದರು. ಹಾಗಾಗಿ, ಈಗ ಬೆಳವಣಿಗೆ ಅನ್ನೋದು ಒಂದು ಪಯಣ. ಮತ್ತು ನಾವಿಲ್ಲಿ ಇರುವುದಕ್ಕೆ ತುಂಬಾ ಖುಷಿ ಇದೆ ಎಂದು ಅವರು ಹೇಳಿದರು.
ಅನ್ನಿ ಶರ್ಮಾ, ವೈಲ್ಡ್ ಕಾರ್ಡ್ ಎಂಟ್ರಿ
ದೆಹಲಿಯಲ್ಲಿ ಮೊದಲ ರನ್ನರ್-ಅಪ್ ಆಗಿ, ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧೆಗೆ ಪ್ರವೇಶಿಸಿದ ಅನ್ನಿ ಶರ್ಮಾ, ತಮ್ಮ ಆಕಾಂಕ್ಷೆಗಳು ಸೌಂದರ್ಯ ಸ್ಪರ್ಧೆಗೂ ಮೀರಿದ್ದು ಎಂದು ಹೇಳಿದರು. ನಾನು ನಟಿಯಾಗಲು ಬಯಸುತ್ತೇನೆ ಎಂದ ಅವರು, ತಮ್ಮ ಗುರಿ ಸಮಗ್ರ ಯೋಗಕ್ಷೇಮ ಮತ್ತು ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಪ್ರೋತ್ಸಾಹಿಸುವುದಾಗಿದೆ ಎಂದು ಹೇಳಿದರು.
ಗ್ರ್ಯಾಂಡ್ ಫಿನಾಲೆ ಬಳಿಕ ಮುಂದೇನು?
ಇಂದೋರ್ ಕಾರ್ಯಕ್ರಮದ ನಂತರ, ಸ್ಪರ್ಧಿಗಳು ಆಗಸ್ಟ್ 11 ರಂದು ಜೈಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಆಗಸ್ಟ್ 23 ರ ಫಿನಾಲೆವರೆಗೂ ಮತ್ತೊಂದು ಹಂತದ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 20 ರಂದು, ಅವರು ರಾಷ್ಟ್ರೀಯ ಉಡುಗೆ, ಸೂಟ್ಸ್, ಈವ್ನಿಂಗ್ ಗೌನ್ ಮತ್ತು ಟ್ಯಾಲೆಂಟ್ ರೌಂಡ್‌ಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಂತಿಮ ವಿಜೇತರು ನವೆಂಬರ್ 2026 ರಲ್ಲಿ ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ರಾಷ್ಟ್ರೀಯ ಫೈನಲ್ ಅನ್ನು ಅಧಿಕೃತ ಗ್ಲಾಮಾನಂದ್ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. (ANI)
(ಶೀರ್ಷಿಕೆಯನ್ನು ಹೊರತುಪಡಿಸಿ, ಈ ಸುದ್ದಿಯನ್ನು ಏಷ್ಯಾನೆಟ್ ನ್ಯೂಸ್ ಸಂಪಾದಕೀಯ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)


