ಬೆಂಗಳೂರು(ನ.07): ದೇವರಿಗೂ ಸಡ್ಡು ಹೊಡೆಯುವ ಛಲವುಳ್ಳ ಪ್ರಾಣಿ ಎಂದರೆ ಅದು ಮನುಷ್ಯ ಮಾತ್ರ. ದೇವರಿಂದ ನಿರ್ಮಿತವಾದ ಸೃಷ್ಟಿಯಲ್ಲಿ ದೇವರ ಪಾರಮ್ಯ ಇರುವುದು ಹೌದಾದರೂ, ತನಗಾಗಿ ಪರ್ಯಾಯ ಜಗತ್ತು ಕಟ್ಟಿಕೊಂಡಿರುವ ಮಾನವ, ಆ ಜಗತ್ತಿಗೆ ಒಡೆಯ ಎಂಬುದೂ ದಿಟ.

ಅದರಂತೆ ಇನ್ಫೋಸಿಸ್ ಎಂಬ ದೈತ್ಯ ಸಂಸ್ಥೆ ಕಟ್ಟಿಕೊಂಡಿರುವ ಕೆಲವು ನೈಜ ಶ್ರಮಜೀವಿಗಳು, ಈ ಆಂತರಿಕ ಜಗತ್ತಿನ ಒಳಿತು ಕೆಡಕುಗಳಿಗೆ ನಾವೇ ಜವಾಬ್ದಾರರು ಎಂದು ಘೋಷಿಸಿದ್ದಾರೆ.

ಇನ್ಫೋಸಿಸ್ ಸಿಇಒ ವಿರುದ್ಧ ಗಂಭೀರ ಆರೋಪ : ಆಡಳಿತ ಮಂಡಳಿಗೆ ಪತ್ರ

ಇನ್ಫೋಸಿಸ್ ಆಂತರಿಕ ಕಚ್ಚಾಟದ ಕುರಿತು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವ ಮುಖ್ಯಸ್ಥ ನಂದನ್ ನೀಲೆಕಣಿ, ಆರ್ಥಿಕ ಮೋಸದಾಟ ಅದೆನೆ ಇರಲಿ, ಸಂಸ್ಥೆಯ ಲೆಕ್ಕಾಚಾರವನ್ನು ಆ ದೇವರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹೂಡಿಕೆದಾರರ ಸಮಾರಂಭವೊಂದರಲ್ಲಿ ಮಾತನಾಡಿದ ನಂದನ್ ನೀಲೆಕಣಿ, ಸಂಸ್ಥೆಯಲ್ಲಿ ಇತ್ತಿಚಿಗೆ ಕೇಳಿ ಬಂದ ಹಣಕಾಸು ದುರುಪಯೋಗ ಆರೋಪ ಪರಿಪೂರ್ಣ ಹಾಗೂ ಗೌರವಾನ್ವಿತ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ಎಂದು ಹರಿಹಾಯ್ದರು.

ಇನ್ಫೋಸಿಸ್ ನಲ್ಲಿ ಆಂತರಿಕ ಕಲಹ ?

ಸಂಸ್ಥೆಯ ಸಹ ಸಂಸ್ಥಾಪಕರ ಬಗ್ಗೆ ತಮಗೆ ಅಪಾರ ಗೌರವವಿದ್ದು, ಅಷ್ಟಕ್ಕೂ ಹಣಕಾಸು ದುರುಪಯೋಗವಾಗಿದ್ದರೆ ಅದನ್ನು ತನಿಖೆ ಮಾಡಲು ಸಂಸ್ಥೆ ಶಕ್ತವಾಗಿದೆ ಎಂದು ನೀಲಕೆಣಿ ಸ್ಪಷ್ಟಪಡಿಸಿದರು.

ಹಣಕಾಸು ದುರುಪಯೋಗದ ಕುರಿತು ಹೂಡಿಕೆದಾನೋರ್ವ ಕೇಳಿದ ಪ್ರಶ್ನೆಗೆ ಸೂಚ್ಯವಾಗಿ ಉತ್ತರಿಸಿದ ನೀಲೆಕಣಿ, ಹಣಕಾಸು ವ್ಯವಹಾರಗಳನ್ನು ಸಶಕ್ತವಾಗಿ ನಿಭಾಯಿಸುವ ತಂಡ ನಮ್ಮಲ್ಲಿದ್ದು, ದೇವರೂ ಕೂಡ ಕಂಪನಿಯ ಲೆಕ್ಕಾಚಾರಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ದಕ್ಷಿಣದವರನ್ನು‘ ಮದ್ರಾಸಿ’ ಎಂದ ಇನ್ಫೋಸಿಸ್ ಸಿಇಒ: ಷೇರು ಕುಸಿತಕ್ಕೆ ಲಬೋ ಲಬೋ!

ಇಂತಹ ಆರೋಪಗಳು ಸಂಸ್ಥೆಯ ಹಣಕಾಸು ವ್ಯವಹಾರಗಳ ಜವಾಬ್ದಾರಿ ಹೊತ್ತಿರುವ ತಂಡವನ್ನು ಅವಮಾನಿಸಿದಂತೆ ಎಂದಿರುವ ನೀಲೆಕಣಿ, ಅದಾಗ್ಯೂ ಆಂತರಿಕ ತನಿಖೆಗೆ ಆದೇಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ನವೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ