ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ 10 ತಿಂಗಳ ಮಗು ಅಲಿನ್ ಶಿರಿನ್ ಅಬ್ರಹಾಂ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಸಾಮಾನ್ಯವಾಗಿ ಗಣ್ಯಾತಿಗಣ್ಯರು, ಖ್ಯಾತ ಕಲಾವಿದರು, ಸೈನಿಕರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

ನಾಲ್ವರ ಜೀವ ಉಳಿಸಿದ 10 ತಿಂಗಳ ದೇವತೆಗೆ ಸರ್ಕಾರಿ ಗೌರವ

ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ 10 ತಿಂಗಳ ಮಗು ಅಲಿನ್ ಶಿರಿನ್ ಅಬ್ರಹಾಂ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಸಾಮಾನ್ಯವಾಗಿ ಗಣ್ಯಾತಿಗಣ್ಯರು, ಖ್ಯಾತ ಕಲಾವಿದರು, ಸೈನಿಕರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ ಅಂಗಾಂಗ ದಾನ ಮಾಡಿ ಸಾಯುವುದಕ್ಕೂ ಮೊದಲು ಹಲವರಿಗೆ ಮರುಜೀವ ನೀಡಿದ ಕಾರಣಕ್ಕೆ ಈ 10 ತಿಂಗಳ ಮಗುವಿಗೆ ಕೇರಳ ಸರ್ಕಾರವೂ ಈ ರಾಜ್ಯ ಮರ್ಯಾದೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಪುಟ್ಟ ಮಗುವಿನ ಸಾವಿನ ನೋವಲ್ಲೂ ಅಂಗಾಂಗ ದಾನಕ್ಕೆ ಮುಂದಾಗಿ ಬೇರೆಯವರ ಬದುಕಿಗೆ ಬೆಳಕಾಗುವಂತಹ ಯೋಚನೆ ಮಾಡಿದ ಮಗು ಅಲಿನ್ ಶಿರಿನ್ ಪೋಷಕರ ದಿಟ್ಟ ನಿರ್ಧಾರಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪೋಷಕರ ಈ ನಿರ್ಧಾರವನ್ನು ಕರುಣೆಯ ಒಂದು ಸ್ಮರಣೀಯ ಕಾರ್ಯವೆಂದು ಬಣ್ಣಿಸಿದ್ದಾರೆ. ಹಾಗೆಯೇ ನಟ ಕಮಲ್ ಹಾಸನ್ ಕುಟುಂಬಕ್ಕೆ ಕಳುಹಿಸಿದ ಸಂದೇಶದಲ್ಲಿ ದಂಪತಿಯ ಮಗು ಈಗ ಐದು ಇತರ ಅಂಗಾಂಗ ದಾನಿಗಳಿಗೆ ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುವ ಮೂಲಕ ಬದುಕುತ್ತದೆ ಎಂದು ಹೇಳಿದ್ದಾರೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಸಮ್ಮುಖದಲ್ಲಿ ಪಟ್ಟಣಂತಿಟ್ಟದ ಚರ್ಚ್‌ನಲ್ಲಿ ಮಗುವಿನ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಮಗುವಿನ ಸಂಬಂಧಿಕರು ಮತ್ತು ನೂರಾರು ಶೋಕತಪ್ತರು ಕಣ್ಣೀರು ತಡೆದುಕೊಳ್ಳಲು ಹೆಣಗಾಡುತ್ತಿದ್ದರು. ದುಃಖದ ಮಧ್ಯೆಯೂ ಮಗುವಿನ ಅಂಗಾಂಗಗಳನ್ನು ದಾನ ಮಾಡುವ ಮನಸ್ಸು ಮಾಡಿದ ಮಗುವಿನ ಹೆತ್ತವರಿಗೆ ಗೌರವ ಸಲ್ಲಿಸುವ ಸಲುವಾಗಿ ಸರ್ಕಾರವು ಸರ್ಕಾರಿ ಅಂತ್ಯಕ್ರಿಯೆಯನ್ನು ಘೋಷಿಸಿದ್ದು, ತಂದೆ ತಾಯಿಯ ಈ ನಿರ್ಧಾರವೂ ಧೈರ್ಯ ಮತ್ತು ಸಹಾನುಭೂತಿಯ ಕಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಟಿವಿ ವಿಚಾರಕ್ಕೆ ಗಲಾಟೆ: ಆಶ್ರಯ ನೀಡಿದ್ದ ಅತ್ತೆಯನ್ನೇ ಹೊಡೆದು ಕೊಂದ 15 ವರ್ಷದ ಸೋದರಳಿಯ

ಫೆಬ್ರವರಿ 5 ರಂದು ಕೊಟ್ಟಾಯಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಲಿನ್ ಅವರಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು .ಈ ದುರಂತದಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ದುರಂತದಲ್ಲಿ ಅಲಿನ್ ತಾಯಿ ಹಾಗೂ ಅಜ್ಜ ಅಜ್ಜಿಯೂ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಗುವನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಫಬ್ರವರಿ 12ರಂದು ಮಗು ಸಾವನ್ನಪ್ಪಿತ್ತು.

ನಂತರ ಅಲಿನ್ ಅವರ ಹೃದಯ ಕವಾಟವನ್ನು ತಿರುವನಂತಪುರದ ಶ್ರೀ ಚಿತ್ರ ಸಂಸ್ಥೆಗೆ, ಅವರ ಯಕೃತ್ತನ್ನು KIMS ಆಸ್ಪತ್ರೆಗೆ ಮತ್ತು ಅವರ ಮೂತ್ರಪಿಂಡಗಳನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯ್ತು. ಅವರ ಕಣ್ಣುಗಳನ್ನು ಸಹ ನೇತ್ರ ಬ್ಯಾಂಕ್‌ಗೆ ದಾನ ಮಾಡಲಾಗಿದೆ. ಹಾಗೆಯೇ ತಿರುವನಂತಪುರದ ಆರು ತಿಂಗಳ ಬಾಲಕಿಗೆ ಅಲಿನ್ ಅವರ ಯಕೃತ್ತು ಕಸಿ ಮಾಡಲಾಗಿದೆ.

ಇದನ್ನೂ ಓದಿ: ಬೀದಿ ಬದಿ ಪಾನಿಪುರಿ ತಿನ್ತಾ ನಿಂತಿದ್ದವರಿಗೆ ಆಘಾತ: ಪಾನಿಯಲ್ಲಿ ಈಜಾಡಿ ಛಂಗನೇ ಹೊರಗೆ ಹಾರಿ ಪರಾರಿಯಾದ ಇಲಿ