ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ 10 ತಿಂಗಳ ಹೆಣ್ಣು ಮಗುವೊಂದು ಮೆದುಳು ನಿಷ್ಕ್ರಿಯಗೊಂಡಿತ್ತು. ದುಃಖದ ನಡುವೆಯೂ, ಮಗುವಿನ ಪೋಷಕರು ತಮ್ಮ ಕಂದನ ಅಂಗಾಂಗಗಳನ್ನು ದಾನ ಮಾಡಿ, ದೇಶದ ಅತಿ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ತಿರುವನಂತಪುರ (ಫೆ.13): ಅಪಘಾತದಲ್ಲಿ ಗಾಯಗೊಂಡಿದ್ದ 10 ತಿಂಗಳ ಹೆಣ್ಣು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ, ಮಗುವಿನ ಪೋಷಕರು ಕಂದಮ್ಮನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಘಟನೆ ಕೇರಳದಲ್ಲಿ ನಡೆದಿದೆ. ಈ ಮೂಲಕ ಅಲಿನ್ ಶೆರಿನ್ ಅಬ್ರಹಾಂ ಎಂಬ 10 ತಿಂಗಳ ಹಸುಗೂಸು ದೇಶದ ಅತಿ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಅಲಿನ್ ಶೆರಿನ್ ಅಬ್ರಹಾಂ ಎನ್ನುವ ಮಗು ತಂದೆ- ತಾಯಿ ಜತೆ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು. ಆದರೆ ಹೆತ್ತ ಮಗುವನ್ನು ಕಳೆದುಕೊಂಡ ದುಃಖದಲ್ಲಿಯೂ ಪಾಲಕರು ಮಗುವಿನ ಮೂತ್ರಪಿಂಡ, ಯಕೃತ್ತು, ಹೃದಯ ಕವಾಟುಗಳನ್ನು ದಾನ ಮಾಡಿದ್ದಾರೆ.

ಈ ಪೈಕಿ ಮೂತ್ರಪಿಂಡವನ್ನು ತಿರುವನಂತಪುರಂನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ವರ್ಷದ ಬಾಲಕಿಗೆ ಕಸಿ ಮಾಡಲಾಗಿದೆ. ಈ ಮಾಹಿತಿಯನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಜಾಲತಾಣದಲ್ಲಿ ಹಂಚಿಕೊಂಡು ಮಗುವಿನ ಹೆತ್ತವರಿಗೆ ಧನ್ಯವಾದ ತಿಳಿಸಿದ್ದಾರೆ.

ಅಂಗಾಂಗ ದಾನದಲ್ಲಿ ಹೊಸ ಇತಿಹಾಸ ಇದಾಗಿದ್ದು, 10 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಲಿನ್ ಶೆರಿನ್ ಅಬ್ರಹಾಂ ಹೆಸರಿನ ಹೆಣ್ಣುಮಗುವಿನ ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯ ಕವಾಟಗಳನ್ನು ಮಹಾದಾನ ಮಾಡಲಾಗಿದೆ. ಈ ಅಂಗಾಂಗವನ್ನು ಕೊಚ್ಚಿಯಿಂದ ರಸ್ತೆ ಮೂಲಕ ತಿರುವನಂತಪುರಂಗೆ ಅದನ್ನು ತೆಗೆದುಕೊಂಡುಹೋಗಲಾಗಿದೆ. ಕಾರು ಅಪಘಾತದಲ್ಲಿ ಅಲಿನ್‌ಳ ಮೆದುಳು ನಿಷ್ಕ್ರಿಯವಾಗಿತ್ತು.

2 ವರ್ಷದ ಮಗುವಿಗೆ ದಾನ

ಅಲಿನ್ ಕೇರಳ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಅತ್ಯಂತ ಕಿರಿಯ ಅಂಗಾಂಗ ದಾನಿ. ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರು. ತಿರುವನಂತಪುರಂ ವೈದ್ಯಕೀಯ ಕಾಲೇಜು SAT ಆಸ್ಪತ್ರೆಯ ಪೀಡಿಯಾಟ್ರಿಕ್ ನೆಫ್ರಾಲಜಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ 2 ಮೂತ್ರಪಿಂಡಗಳನ್ನು ನೀಡಲಾಗುತ್ತದೆ. ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯ ಕವಾಟವನ್ನು ಸಂಜೆ ಎರ್ನಾಕುಲಂ ಅಮೃತ ಆಸ್ಪತ್ರೆಯಿಂದ ತಿರುವನಂತಪುರಂ ವೈದ್ಯಕೀಯ ಕಾಲೇಜು, ತಿರುವನಂತಪುರಂ KIMS ಆಸ್ಪತ್ರೆ ಮತ್ತು ಶ್ರೀ ಚಿತ್ರಾಗೆ ರಸ್ತೆ ಮೂಲಕ ತೆಗೆದುಕೊಂಡು ಹೋಗಲಾಯಿತು.