- Home
- Entertainment
- Cine World
- ಮುಸ್ಲಿಂ ಹುಡುಗನ ಇಷ್ಟಪಟ್ಟ ರುದ್ರಾಕ್ಷಿ ಮಾರೋ ಹುಡುಗಿ.. ನನಗೆ ಫರ್ಮಾನ್ ಖಾನ್ ಬೇಕೇ ಬೇಕು ಅಂತಾ ಹಠ ಹಿಡಿದಿದ್ಯಾಕೆ ಮೊನಾಲಿಸಾ?
ಮುಸ್ಲಿಂ ಹುಡುಗನ ಇಷ್ಟಪಟ್ಟ ರುದ್ರಾಕ್ಷಿ ಮಾರೋ ಹುಡುಗಿ.. ನನಗೆ ಫರ್ಮಾನ್ ಖಾನ್ ಬೇಕೇ ಬೇಕು ಅಂತಾ ಹಠ ಹಿಡಿದಿದ್ಯಾಕೆ ಮೊನಾಲಿಸಾ?
ಕೇವಲ ಒಂದು ಫೋಟೋ, ಒಂದೇ ಒಂದು ವಿಡಿಯೋ ಮೂಲಕ ಇಡೀ ದೇಶದ ಯುವಕರ ನಿದ್ದೆ ಕದ್ದಿದ್ದ ಈಕೆಯ ಹೆಸರು ಮೊನಾಲಿಸಾ ಭೋಸ್ಥೆ. ಆದರೆ, ನೆಟ್ಟಿಗರ ಪಾಲಿಗೆ ಆಕೆ 'ಕುಂಭಮೇಳದ ಮೊನಾಲಿಸಾ'. ಅಂದು ಭಕ್ತಿಭಾವದ ಕುಂಭಮೇಳದಲ್ಲಿ ವೈರಲ್ ಆಗಿದ್ದ ಈ ಸುಂದರಿ, ಇಂದು ರಿಯಲ್ ಲೈಫ್‌ನಲ್ಲೊಂದು ಬಿಗ್ ಟ್ವಿಸ್ಟ್ ಕೊಟ್ಟಿದ್ದಾಳೆ.

ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಆ 'ನೀಲಿ ಕಣ್ಣಿನ ಸುಂದರಿ' ನಿಮಗೆ ನೆನಪಿದ್ದಾಳಾ? ಹೌದು, ತನ್ನ ಆಕರ್ಷಕ ನೀಲಿ ಕಣ್ಣುಗಳು ಹಾಗೂ ಮುಗ್ಧ ನಗುವಿನ ಮೂಲಕ ಇಂಟರ್ನೆಟ್‌ನಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಅದೇ ಹುಡುಗಿ ಮೊನಾಲಿಸಾ (Monalisa) ಈಗ ಮತ್ತೆ ಭಾರಿ ಸುದ್ದಿಯಲ್ಲಿದ್ದಾಳೆ.
ಕೇವಲ ಒಂದು ಫೋಟೋ, ಒಂದೇ ಒಂದು ವಿಡಿಯೋ ಮೂಲಕ ಇಡೀ ದೇಶದ ಯುವಕರ ನಿದ್ದೆ ಕದ್ದಿದ್ದ ಈಕೆಯ ಹೆಸರು ಮೊನಾಲಿಸಾ ಭೋಸ್ಥೆ. ಆದರೆ, ನೆಟ್ಟಿಗರ ಪಾಲಿಗೆ ಆಕೆ 'ಕುಂಭಮೇಳದ ಮೊನಾಲಿಸಾ'. ಅಂದು ಭಕ್ತಿಭಾವದ ಕುಂಭಮೇಳದಲ್ಲಿ ವೈರಲ್ ಆಗಿದ್ದ ಈ ಸುಂದರಿ, ಇಂದು ರಿಯಲ್ ಲೈಫ್‌ನಲ್ಲೊಂದು ಬಿಗ್ ಟ್ವಿಸ್ಟ್ ಕೊಟ್ಟಿದ್ದಾಳೆ. ಅಕ್ಷರಶಃ ಇದೊಂದು ಸಿನಿಮಾ ಸ್ಟೋರಿಯನ್ನೇ ಮೀರಿಸುವಂತಹ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಎಂದರೆ ತಪ್ಪಾಗಲಾರದು!
ಲಕ್ಷಾಂತರ ಯುವಕರ ಹೃದಯ ಕದ್ದವಳು ಫರ್ಮಾನ್ ಖಾನ್‌ಗೆ ಕ್ಲೀನ್ ಬೋಲ್ಡ್!
ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಯುವಕರ ಕ್ರಶ್ ಆಗಿದ್ದ ಈ 'ಮೊನಾಲಿಸಾ' ತನ್ನ ಮನಸ್ಸನ್ನು ಮಾತ್ರ ಫರ್ಮಾನ್ ಖಾನ್ ಎಂಬ ಯುವಕನಿಗೆ ಕೊಟ್ಟಿದ್ದಾಳೆ. ಹೌದು, ಈ ವೈರಲ್ ಸುಂದರಿಯ ಲೈಫ್‌ನಲ್ಲಿ ಈಗ ಪ್ರೀತಿಯ ಎಂಟ್ರಿಯಾಗಿದೆ. ಆದರೆ, ಸಿನಿಮಾಗಳಲ್ಲಿರುವಂತೆ ಈಕೆಯ ಪ್ರೇಮಕಥೆಯಲ್ಲೂ ಒಂದು ದೊಡ್ಡ ವಿಲನ್ ಇದೆ, ಅದೇ ಆಕೆಯ ಕುಟುಂಬ! ಮೊನಾಲಿಸಾ ಭೋಸ್ಥೆ ಮತ್ತು ಫರ್ಮಾನ್ ಖಾನ್ ಇಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದಾರೆ. ಆದರೆ, ಇವರ ಈ ಪ್ರೇಮ ವಿವಾಹಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮನೆಯವರ ಬೆದರಿಕೆ ಹಾಗೂ ವಿರೋಧದಿಂದ ಕಂಗೆಟ್ಟ ಈ ಪ್ರೇಮಿಗಳು, ತಮ್ಮ ಪ್ರಾಣ ರಕ್ಷಣೆಗಾಗಿ ಹಾಗೂ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಊರನ್ನೇ ಬಿಟ್ಟು ಓಡಿಬಂದಿದ್ದಾರೆ.
ಉತ್ತರ ಪ್ರದೇಶ ಟು ಕೇರಳ: ಇದೊಂದು ಪಕ್ಕಾ ಸಿನಿಮಾ ಸ್ಟೋರಿ!
ಪ್ರೀತಿಸಿದವನ ಕೈಹಿಡಿಯಲು ದೃಢ ನಿರ್ಧಾರ ಮಾಡಿದ ಮೊನಾಲಿಸಾ, ಅಪ್ಪಟ ಸಿನಿಮಾ ಹೀರೋಯಿನ್‌ನಂತೆ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಉತ್ತರ ಭಾರತದಿಂದ ಹೊರಟು ನೇರವಾಗಿ 'ದೇವರ ನಾಡು' (God's Own Country) ಕೇರಳಕ್ಕೆ ಬಂದು ತಲುಪಿದ್ದಾಳೆ. ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆಗೆ ಕೇರಳದ ರಾಜಧಾನಿ ತಿರುವನಂತಪುರಂಗೆ ಬಂದಿಳಿದಿರುವ ಈ ಜೋಡಿ, ನೇರವಾಗಿ ಥಂಪನೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. "ನಮ್ಮ ಪ್ರೀತಿಗೆ ಮನೆಯವರ ವಿರೋಧವಿದೆ, ನಮಗೆ ನಮ್ಮ ಕುಟುಂಬದಿಂದಲೇ ತೊಂದರೆ ಆಗುವ ಭೀತಿ ಇದೆ. ದಯವಿಟ್ಟು ನಮಗೆ ಆಶ್ರಯ ಹಾಗೂ ರಕ್ಷಣೆ ಕೊಡಿ" ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಥಂಪನೂರು ಪೊಲೀಸರು ಈ ಪ್ರೇಮಿಗಳ ಕಥೆ ಕೇಳಿ ಆಶ್ರಯ ನೀಡಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಏನು?
ಅಂದು ಕುಂಭಮೇಳದ ಆಧ್ಯಾತ್ಮಿಕ ವಾತಾವರಣದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರುತ್ತಾ ಕ್ಯಾಮೆರಾ ಕಣ್ಣಿಗೆ ಬಿದ್ದು ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮುಗ್ಧ ಹುಡುಗಿ, ಇಂದು ತನ್ನ ಪ್ರೀತಿಗಾಗಿ ಇಷ್ಟೆಲ್ಲಾ ಹೋರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. "ಪ್ರೀತಿಗೆ ಕಣ್ಣಿಲ್ಲ, ಧರ್ಮವಿಲ್ಲ, ಗಡಿಗಳಿಲ್ಲ" ಎನ್ನುವ ಮಾತಿಗೆ ಈ ಜೋಡಿ ಜೀವಂತ ಸಾಕ್ಷಿಯಾಗಿದೆ. ಅಂದು ನೆಟ್ಟಿಗರ ಮೊಬೈಲ್ ಸ್ಕ್ರೀನ್ ಮೇಲೆ ರಾರಾಜಿಸಿದ್ದ ಈ 'ನೀಲಿ ಕಣ್ಣಿನ ಸುಂದರಿ', ಇಂದು ತನ್ನ ನೈಜ ಜೀವನದ ಹೀರೋ ಜೊತೆ ಸೇರಿ ತನ್ನದೇ ಆದ ಬ್ಲಾಕ್ ಬಸ್ಟರ್ ಲವ್ ಸ್ಟೋರಿ ಬರೆಯುತ್ತಿದ್ದಾಳೆ. ಕೇರಳ ಪೊಲೀಸರು ಈ ಜೋಡಿಗೆ ಬೆಂಗಾವಲಾಗಿ ನಿಲ್ಲುತ್ತಾರಾ? ಇವರ ಪ್ರೀತಿಗೆ ಜಯ ಸಿಗುತ್ತಾ? ಕಾದು ನೋಡಬೇಕಿದೆ. ಇದೇನೇ ಇದ್ದರೂ, 'ಕುಂಭಮೇಳ ಟು ಕೇರಳ' ಎನ್ನುವ ಈ ನೈಜ ಪ್ರೇಮಕಥೆ ಬಾಲಿವುಡ್‌ನ ಯಾವುದೇ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾಗೆ ಕಮ್ಮಿ ಇಲ್ಲ ಬಿಡಿ!
ಸದ್ಯಕ್ಕೆ ಈ ಮೊನಾಲಿಸಾ ಹಾಗೂ ಆಕೆಯ ಪ್ರಿಯಕರ ಪೊಲೀಸ್ ಆಶ್ರಯದಲ್ಲಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಸೃಷಿಯಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಮನೆ, ಊರು ಬಿಟ್ಟು ಬಂದಿರುವ ಈ ಜೋಡಿ ಕೇರಳದ ಥಂಪನೂರು ಪೊಲೀಸ್ ಸ್ಟೇಷನ್‌ನಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

