ಸುಪ್ರೀಂ ಅಂಗಳಕ್ಕೆ SSLC ಪರೀಕ್ಷೆ, ವೇಗಿಗೆ ಬಂದಿತ್ತು ಜೀವ ಬೆದರಿಕೆ: ಜೂ.9ರ ಟಾಪ್ 10 ಸುದ್ದಿ!
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸ್ಬೇಕಾ? ಬೇಡ್ವಾ? ಗೊಂದಲ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಶಾಂತಿ ಮಾತುಕತೆಗೆ ಆಹ್ವಾನಿಸಿದ ಬೆನ್ನಲ್ಲೇ ಗಡಿಯಲ್ಲಿ ಹೆಚ್ಚುವರಿ ಸೈನ್ಯ ಹಾಗೂ ಶಸ್ತ್ರಾಸ್ತ್ರ ನಿಯೋಜಿಸಿದ ಚೀನಾ. ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಅವರ ತಾಯಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಸಚಿನ್ ಔಟ್ ಮಾಡಿದ ವೇಗಿಗೆ ಬೆದರಿಕೆ, ಆಸೀಸ್ ಮಾಜಿ ಮಹಿಳಾ ಕಾರ್ ರೇಸರ್ ಇದೀಗ ಫೇಮಸ್ ಪೋರ್ನ್ ಸ್ಟಾರ್ ಸೇರಿದಂತೆ ಜೂನ್ 09ರ ಟಾಪ್ 10 ಸುದ್ದಿ ಇಲ್ಲಿವೆ.
ಲಾಕ್‌ಡೌನ್ ಮಧ್ಯೆ ಅತಿ ಹೆಚ್ಚು ಮಾರಾಟವಾದ 'ಪಾರ್ಲೆ-ಜಿ', 82 ವರ್ಷದ ದಾಖಲೆ ಉಡೀಸ್!...
'ಪಾರ್ಲೆ-ಜಿ' ಬಿಸ್ಕೆಟ್ ಅದೆಷ್ಟು ಮಾರಾಟವಾಗಿದೆ ಎಂದರೆ ಇದು ಕಳೆದ 82 ವರ್ಷದ ದಾಖಲೆಯನ್ನೇ ಮುರಿದಿದೆ. ಕೇವಲ ಐದು ರೂಪಾಯಿಗೆ ಸಿಗುವ ಪಾರ್ಲೆ-ಜಿ ಪ್ಯಾಕೆಟ್ ನೂರಾರು, ಸಾವಿರಾರು ಕಿ. ಮೀ ದೂರ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ ಕಾರ್ಮಿಕರ ಹಸಿವು ನೀಗಿಸಿದೆ.
ಎದುರಿಗೆ ಶಾಂತಿ ಮಂತ್ರ, ಗಡಿಯಲ್ಲಿ ಯುದ್ಧ ಸಿದ್ಧತೆ: ಬಯಲಾಯ್ತು ಚೀನಾ ಕುತಂತ್ರ ಬುದ್ಧಿ!...
ಭಾರತದ ಜೊತೆಗೆ ಗಡಿ ವಿವಾದದ ಕುರಿತು ಮಾತುಕತೆ ನಡೆಸುತ್ತಿರುವ ವೇಳೆಯಲ್ಲಿಯೇ ತನ್ನ ಈಶಾನ್ಯ ಭಾಗದ ಅತೀ ಎತ್ತರದ ಪ್ರದೇಶದಲ್ಲಿ ಸಾವಿರಾರು ಪ್ಯಾರಾಚೂಟ್ ಗಳಲ್ಲಿ ಯೋಧರನ್ನು ಇಳಿಸುವ ಮೂಲಕ ಚೀನಾ ಮತ್ತೊಮ್ಮೆ ಧಾರ್ಷ್ಟ್ಯ ಮೆರೆದಿದೆ. ಪ್ಯಾರಾಚೂಟ್‌ಗಳ ಜೊತೆಗೆ ಸಾಕಷ್ಟು ಸಶಸ್ತ್ರವಾಹನಗಳು ಇಲ್ಲಿಗೆ ಆಗಮಿಸಿವೆ.
ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ಇಲ್ಲಿದೆ ನೋಡಿ ಆಸ್ತಿ, ಸಾಲದ ವಿವರ!
ರಾಜ್ಯಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು ಕರ್ನಾಟದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇತ್ತ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದರೊಂದಿಗೆ ಆಸ್ತಿ ಘೋಷಣಾ ಪತ್ರವನ್ನೂ ಸಲ್ಲಿಸಿದ್ದು, ಸದ್ಯ ಅವರ ಬಳಿ ಇರುವ ಆಸ್ತಿ ಎಷ್ಟು ಎಂಬ ವಿಚಾರ ಎಲ್ಲರ ಗಮನ ಸೆಳೆದಿದೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕನ ಹೆಸರಲ್ಲಿ ಜಮೀನು ಹಾಗೂ ಕಾರು ಇಲ್ಲ ಎಂಬುವುದು ಭಾರೀ ಅಚ್ಚರಿ ಮೂಡಿಸಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ತಾಯಿಗೆ ಕೊರೋನಾ ವೈರಸ್, ಆಸ್ಪತ್ರೆಗೆ ದಾಖಲು!...
ಕೊರೋನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಲಾರಂಭಿಸಿದೆ. ಬಡವರು, ಶ್ರೀಮಂತರೆಂದು ನೋಡದೇ ಈ ಮಹಾಮಾರಿ ಎಲ್ಲರನ್ನೂ ಬಾಧಿಸಲಾರಂಭಿಸಿದೆ. ಸದ್ಯ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ತಾಯಿ ಮಾಧವಿ ರಾಜೆ ಸಿಂಧಿಯಾಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.
ಸಚಿನ್ ತೆಂಡುಲ್ಕರ್ ಔಟ್ ಮಾಡಿದ್ದಕ್ಕೆ ಇಂಗ್ಲೆಂಡ್ ವೇಗಿಗೆ ಬಂದಿತ್ತಂತೆ ಜೀವ ಬೆದರಿಕೆ!...
99 ಶತಕ ಬಾರಿಸಿದ್ದ ತೆಂಡುಲ್ಕರ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 90 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ವಿಕೆಟ್ ಪಡೆದ ಬೌಲರ್ ಹಾಗೂ ವಿವಾದಾತ್ಮಕ ಔಟ್ ನೀಡಿದ ಅಂಪೈರ್ ಜೀವ ಬೆದರಿಕೆ ಎದುರಿಸಿದ್ದರಂತೆ..!
ಆಸೀಸ್ ಮಾಜಿ ಮಹಿಳಾ ಕಾರ್ ರೇಸರ್ ಇದೀಗ ಫೇಮಸ್ ಪೋರ್ನ್ ಸ್ಟಾರ್..!...
ಒಂದು ಕಾಲದಲ್ಲಿ ಕೇವಲ 14ನೇ ವಯಸ್ಸಿಗೆ ಕಾರ್ ರೇಸಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾದ ರೀನೆ ಗ್ರಾಸಿಯಾ ಇದೀಗ ವೃತ್ತಿಪರ ನೀಲಿ ತಾರೆಯಾಗಿ ಬದಲಾಗಿದ್ದಾರೆ. ಆಸ್ಟ್ರೇಲಿಯಾದ ಮೊದಲ ಮಹಿಳಾ ಸೂಪರ್ ಕಾರ್ ರೇಸರ್ ಈಗ ಪೋರ್ನ್ ಇಂಡಸ್ಟ್ರಿಯಿಂದ ವಾರಕ್ಕೆ 19 ಲಕ್ಷ ರುಪಾಯಿ ಸಂಬಳ ಎಣಿಸಲಾರಂಭಿಸಿದ್ದಾರೆ.
ಕೆಟ್ಟ ರಸ್ತೆಯಲ್ಲಿ ಕೈಕೊಟ್ಟ BMW ಕಾರು, ಎತ್ತಿನ ಗಾಡಿಯಲ್ಲಿ ಆಫೀಸ್ ತಲುಪಿದ ಉದ್ಯಮಿ!...
ಲಾಕ್‌ಡೌನ್ ಸಡಿಲಿಕೆ ಮಾಡಿದ ಕಾರಣ ಬಹುತೇಕ ಎಲ್ಲಾ ಕಚೇರಿಗಳು, ಉದ್ಯಮಗಳು ಆರಂಭಗೊಂಡಿದೆ. ಸುದೀರ್ಘ ದಿನಗಳ ಬಳಿಕ ತನ್ನ ಕಚೇರಿಗೆ BMW ಕಾರಿನ ಮೂಲಕ ಪ್ರಯಾಣ ಆರಂಭಿಸಿದ ಉದ್ಯಮಿ, ಕೊನೆಗೆ ಆಫೀಸ್ ತಲುಪಿದ್ದು ಎತ್ತಿನ ಗಾಡಿ ಮೂಲಕ. ಈ ರೋಚಕ ಸ್ಟೋರಿ ಇಲ್ಲಿದೆ.
ರಾಜ್ಯಸಭೆಗೆ ಸ್ಪರ್ಧಿಸಲು ದೊಡ್ಡ ಗೌಡರಿಗೆ ಒತ್ತಡ ಹೇರಿದ್ದು ಸೋನಿಯಾ!...
ದೇವೇಗೌಡರನ್ನು ರಾಜ್ಯಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಒತ್ತಡ ಹೇರಿದ್ದರು ಎಂಬ ಅಂಶವನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಹಿರಂಗ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಅಂಗಳಕ್ಕೆ ಕರ್ನಾಟಕ SSLC ಪರೀಕ್ಷೆ: ರದ್ದಾಗುತ್ತಾ? ನಡೆಯುತ್ತಾ?...
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸ್ಬೇಕಾ? ಬೇಡ್ವಾ? ಎನ್ನುವ ಗೊಂದಲಗಳಿದ್ದು, ಇದರ ಮಧ್ಯೆ ತಮಿಳುನಾಡು ಮತ್ತು ತೆಲಂಗಾಣ ಸರ್ಕಾರ ಹತ್ತನೇ ತರಗತಿ ಪರೀಕ್ಷೆ ರದ್ದು ಮಾಡಿದೆ. ಈಗ ರಾಜ್ಯದಲ್ಲೂ ಈ ಬಗ್ಗೆ ಕೂಗು ಕೇಳಿ ಬರುತ್ತಿವೆ.
ನಮ್ಮಲ್ಲೂ ಇದ್ದಾರೆ ನೀಚರು; ಹಣ್ಣಿನಲ್ಲಿ ವಿಷವಿಟ್ಟು 3 ಹಸುಗಳನ್ನು ಕೊಂದರು..
ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ ಘಟನೆ ನೆನಪು ಮಾಸುವ ಮುನ್ನ ಕರ್ನಾಟಕದಲ್ಲಿ ಕೆಲವು ದುಷ್ಟರು ಅಂತಹದ್ದೇ ಕೃತ್ಯ ಎಸಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಹಣ್ಣಿನಲ್ಲಿ ವಿಷವಿಕ್ಕಿ 3 ಹಸುಗಳನ್ನು ಸಾಯಿಸಿದ್ದಾರೆ. ಇನ್ನೊಂದು ಕಡೆ 200 ಹಂದಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.