ನವದೆಹಲಿ(ಜೂ.09): ಕೊರೋನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಲಾರಂಭಿಸಿದೆ. ಬಡವರು, ಶ್ರೀಮಂತರೆಂದು ನೋಡದೇ ಈ ಮಹಾಮಾರಿ ಎಲ್ಲರನ್ನೂ ಬಾಧಿಸಲಾರಂಭಿಸಿದೆ. ಸದ್ಯ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ತಾಯಿ ಮಾಧವಿ ರಾಜೆ ಸಿಂಧಿಯಾಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

ಕೊರೋನಾ ವೈಐರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ತಾಯಿಯನ್ನು ಕೊರೋನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ಟೆಸ್ಟ್ ರಿಪೋರ್ಟ್ ಬಂದಿದ್ದು, ಇವರಿಗೆ ಕೊರೋನಾ ಕೊರೋನಾ ತಗುಲಿರುವುದು ಖಚಿತವಾಗಿದೆ. ಈ ವರದಿ ಬೆನ್ನಲ್ಲೇ ಸಿಂಧಿಯಾ ಹಾಗೂ ಅವರ ತಾಯಿಯನ್ನು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ವರ, ಗಂಟಲು ನೋವು: ಸಿಎಂ ಕೇಜ್ರೀವಾಲ್‌ಗೆ ಕೊರೋನಾ ಟೆಸ್ಟ್!

ದೆಹಲಿಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸಿಎಂ ಅರವಿಂದ್ ಕೇಜ್ರೀವಾಲ್‌ಗೂ ಕೊರೋನಾ ಲಕ್ಷಗಣಗಳು ಕಂಡು ಬಂದಿದ್ದವು. ಜ್ವರ ಹಾಗೂ ಗಂಟಲು ನೋವಿನಿಂದ ಬಬಳಲುತ್ತಿದ್ದ ಅರವಿಂದ್ ಕೇಜ್ರೀವಾಲ್ ಸ್ವಯಂ ಕ್ವಾರಂಟೈನ್‌ ಆಗಿದ್ದರು. ಅಲ್ಲದೇ ತಮ್ಮೆಲ್ಲಾ ಸಭೆಗಳನ್ನು ರದ್ದು ಪಡಿಸಿದ್ದರು. ಕೇಜ್ರೀವಾಲ್‌ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ.