ಷರೀಫ್‌ ಅಳಿಯನ ಸೆರೆ ವಿಡಿಯೋ ಹೊಂದಿದ್ದ ಪಾಕ್‌ ಪತ್ರಕರ್ತ ನಾಪತ್ತೆ!...

ಇತ್ತೀಚೆಗೆ ಕರಾಚಿಯಲ್ಲಿ ನಡೆದ ಹೈಡ್ರಾಮಾದ ವೇಳೆ ಪಾಕಿಸ್ತಾನ ಮುಸ್ಲಿಂ ಲೀಗ್‌ (ನವಾಜ್‌) ಪಕ್ಷದ ಮುಖಂಡ ಸಫ್ದರ್‌ ಅವಾನ್‌ ಅವರನ್ನು ಪಾಕ್‌ ಸೇನೆ ಬಂಧಿಸಿ ಕರೆದೊಯ್ದ ಸಿಸಿ ಟೀವಿ ವಿಡಿಯೋವನ್ನು ಹೊಂದಿದ್ದ ಪತ್ರಕರ್ತರೊಬ್ಬರು ನಾಪತ್ತೆ ಆಗಿದ್ದು, ಅಪಹಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

5 ಸ್ಟಾರ್ ಹೋಟೆಲ್ ಮೇಲೆ ದಾಳಿ: ಸೆಕ್ಸ್ ರಾಕೆಟ್‌ನಲ್ಲಿ ಮೂವರು ಸೀರಿಯಲ್ ನಟಿಯರು...

ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ನಡೆಸಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ನಟಿಯನ್ನು ಬಂಧಿಸಿ ಮೂವರು ಕಿರುತೆರೆ ನಟಿಯರನ್ನು ಪಾರು ಮಾಡಿದ್ದಾರೆ.

ರಾಜ್ಯದಲ್ಲಿ ಅ.28ರ ನಂತರ ಹಿಂಗಾರು ಪ್ರವೇಶ? ಭಾರೀ ಮಳೆ..?...

ಅ. 28ರ ವೇಳೆಗೆ ಮುಂಗಾರು ಅಂತ್ಯಗೊಂಡು ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

'ಸಿದ್ದರಾಮಯ್ಯ-ಡಿಕೆಶಿ ನಡುವೆ ಪೈಪೋಟಿ : ಶುರುವಾಗಿದೆ ಸಿಎಂ ಕುರ್ಚಿಗೆ ಕೈ ಸಂಘರ್ಷ'...

ಇಷ್ಟುದಿನ ಸಿಎಂ ಕುರ್ಚಿಗಾಗಿ ತಮ್ಮೊಳಗೇ ಕನಸು ಕಾಣುತ್ತಿದ್ದ ಕಾಂಗ್ರೆಸ್‌ ನಾಯಕರು ಈಗ ಬಹಿರಂಗವಾಗಿಯೇ ಸಂಘರ್ಷಕ್ಕೆ ಇಳಿದಿದ್ದಾರೆ. ಎಲ್ಲ ಚುನಾವಣೆಗಳಲ್ಲಿ ಸೋತರೂ ಆ ಪಕ್ಷದ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು.

ಮತ್ತೊಂದು ಸಮೀಕ್ಷೆಯಲ್ಲೂ ಎನ್‌ಡಿಎಗೆ ಜಯ!...

ಬಿಹಾರದಲ್ಲಿ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯು ಬಿಜೆಪಿ-ಜೆಡಿಯು ಕೂಟ ಜಯಿಸಲಿದೆ ಎಂದು ಭವಿಷ್ಯ ನುಡಿದಿದೆ.

IPL 2020: 7ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್‌ಗೆ ಇನ್ನೂ ಇದೆ ಪ್ಲೇ ಆಫ್‌ಗೇರುವ ಅವಕಾಶ..!...

11 ಪಂದ್ಯಗಳನ್ನಾಡಿರುವ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಕೇವಲ 4ರಲ್ಲಿ ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹಾಗಂತ ರಾಯಲ್ಸ್ ಪ್ಲೇ ಆಫ್ ಕನಸು ಇನ್ನೂ ಕಮರಿ ಹೋಗಿಲ್ಲ. ಸ್ವಲ್ಪ ಅದೃಷ್ಟ ಜಾಸ್ತಿ ಪರಿಶ್ರಮಪಟ್ಟರೆ ಈಗಲೂ ರಾಜಸ್ಥಾನ ರಾಯಲ್ಸ್ ಅಂತಿಮ 4ರ ಘಟ್ಟದಲ್ಲಿ ಸ್ಥಾನ ಪಡೆಯಬಹುದು. 

ಸಾಯಿ ಪಲ್ಲವಿಯನ್ನೇ ಹಿಂದಿಕ್ಕೆ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ?...

ಟಾಲಿವುಡ್‌ನಲ್ಲಿ ಶುರುವಾಯ್ತು ಪೈಪೋಟಿ. ಸಾಯಿ ಪಲ್ಲವಿ ನಿರಾಕರಿಸಿದ ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ. ಹೇಗಿದೆ ನೆಟ್ಟಿಗರ ರಿಯಾಕ್ಷನ್...

ವಿವೋ ವಿ20 ಆಯಿತು, ವಿ20ಪ್ರೋ, ವಿ20 ಎಸ್‌ಇ ಬಿಡುಗಡೆಗೆ ಸಿದ್ಧತೆ...

ಚೀನಾ ಮೂಲದ ವಿವೋ ಸ್ಮಾರ್ಟ್‌ಫೋನ್ ವಿ ಸೀರಿಸ್ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ವಿವೋ ವಿ20 ಫೋನ್‌ ಹಲವು ದೃಷ್ಟಿಯಿಂದ ಅತ್ಯುತ್ತಮ ಫೋನ್ ಎನಿಸಿಕೊಂಡಿದೆ.

ಸಾಲಗಾರರಿಗೆ ಕೇಂದ್ರದ ದಸರಾದ ಬಂಪರ್ ಗಿಫ್ಟ್‌!...

ಲಾಕ್‌ಡೌನ್‌ ವೇಳೆ ಸಾಲದ ಕಂತು (ಇಎಂಐ) ಪಾವತಿಸುವುದರಿಂದ ವಿನಾಯ್ತಿ ಪಡೆದವರು ಹಾಗೂ ವಿನಾಯ್ತಿ ಪಡೆಯದೆ ಕಂತು ಪಾವತಿಸಿದವರಿಬ್ಬರಿಗೂ ಕೇಂದ್ರ ಸರ್ಕಾರ ಚಕ್ರಬಡ್ಡಿಯಿಂದ ವಿನಾಯ್ತಿ ಪ್ರಕಟಿಸುವ ಮೂಲಕ ದಸರಾ ಹಬ್ಬದ ಉಡುಗೊರೆ ನೀಡಿದೆ.

ತುಪ್ಪದ ಹುಡುಗಿ ರಾಗಿಣಿ, ನಾಟಿಕೋಳಿ ಸಂಜನಾ ಬಗ್ಗೆ ಯಾರೂ ಕೇರ್ ಮಾಡ್ತಿಲ್ವಾ?...

ಸುಮಾರು ಒಂದು ತಿಂಗಳುಗಳ ಕಾಲ ಪರಪ್ಪನ ಅಗ್ರಹಾರದಲ್ಲಿರುವ ಗಂಡ ಹೆಂಡತಿ ಖ್ಯಾತಿಯ ಸಂಜನಾ ಹಾಗೂ ತುಪ್ಪದ ಬೆಡಗಿ ರಾಗಿಣಿ ಬಗ್ಗೆ ಯಾರೂ ತೆಲೆ ಕೆಡಿಸಿಕೊಳ್ಳುತ್ತಿಲ್ವಾ? ಸಾಮಾನ್ಯವಾಗಿ ನೇಮ್ ಹಾಗೂ ಫೇಮ್ ಇರುವ ಜನರು ಜೈಲು ಸೇರಿದೆ ನೋಡಲೆಂದು ಆಪ್ತರು ಬರುತ್ತಾರೆ ಅದರಿಲ್ಲಿ ಅವರ ಬಗ್ಗೆ ಯಾರೂ ಕೇರ್ ಮಾಡುತ್ತಿಲ್ಲ. ಒಬ್ಬ ವ್ಯಕ್ತಿಯೂ ನೋಡಲು ಬಂದಿಲ್ಲವಂತೆ.  ಯಾಕೆ ಹೀಗಾಗುತ್ತಿದೆ ಸುಂದರಿಯರಿಗೆ?