ಭಾರತದಲ್ಲಿ ಚೀನಾ ಮೂಲದ ಅನೇಕ ವಸ್ತುಗಳು, ಆಪ್‌ಗಳು ನಿಷೇಧವಾಗಿದ್ದರೂ ಮೊಬೈಲ್‌ ಕಂಪನಿಗಳಿಗೇನೂ ಅಂಥ ವ್ಯತ್ಯಾಸವಾಗಿಲ್ಲ. ಇತ್ತೀಚಿನ ಅಂಕಿ ಸಂಖ್ಯೆಗಳನ್ನು ತೆಗೆದುಕೊಂಡರೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಈ ಕಂಪನಿಗಳ ಸಾಲಿನ ವಿವೋ ಕೂಡ ಸೇರುತ್ತದೆ. ಕಡಿಮೆ ಬೆಲೆಗೆ ಪ್ರೀಮಿಯಮ್ ಫೀಚರ್‌ಗಳನ್ನು ನೀಡುವ ವಿವೋ, ಗ್ರಾಹಕರ ಅಚ್ಚು ಮೆಚ್ಚಿನ ಬ್ರ್ಯಾಂಡ್ ಆಗಿದೆ.

ವಿವೋ ತನ್ನ ಹೊಸ ವಿ20 ಸ್ಮಾರ್ಟ್‌ಫೋನನ್ನು ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ವಿವೋ ವಿ20ಪ್ರೋ ಮತ್ತು ವಿ20 ಎಸ್‌ಇ ಮಾಡೆಲ್ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ವಾಟ್ಸಾಪ್‌ಗೆ ಶೀಘ್ರ ಫೇಶಿಯಲ್ ರೆಕಗ್ನಿಷನ್?

ಸೆಪ್ಟೆಂಬರ್ ತಿಂಗಳಲ್ಲಿ ವಿ20 ಪ್ರೋ ಥೈಲ್ಯಾಂಡ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು ಮತ್ತು ಇದೀಗ ವಿ20 ಎಸ್‌ಇ ಸ್ಮಾರ್ಟ್‌ಫೋನ್‌ನ ಫೀಚರ್‌ಗಳು ಕಳೆದ ಕೆಲವು ವಾರಗಳ ಹಿಂದೆಯೇ ಸೋರಿಕೆಯಾಗಿವೆ ಎನ್ನುತ್ತಿವೆ ವರದಿಗಳು. ವಿವೋ ಇಂಡಿಯಾದ ಜೆರೋಮ್ ಚೆನ್ ಅವರು ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ವಿ20 ಪ್ರೋ ಮತ್ತು ವಿ20 ಎಸ್ಇ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. 

ವಿವೋ ವಿ20 ವಿಶೇಷತೆಗಳು ಏನು?

ಸುಮಾರು 24,990 ಬೆಲೆಯ ಈ ಪೋನ್ 128 ಜಿಬಿ ಮತ್ತು 256 ಜಿಬಿ ಸ್ಟೋರೇಜ್ ಮೆಮೊರಿಗಳ ಮಾದರಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.  256 ಜಿಬಿ ಸ್ಟೋರೇಜ್ ಮೆಮೊರಿ ಇರುವ ಫೋನ್‌ ಬೆಲೆ 27,999 ರೂಪಾಯಿ ಎಂದು ನಿಗದಿಪಡಿಸಲಾಗಿದೆ. 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಇದ್ದು, ವೈಡ್ ಆಂಗಲ್ ಮತ್ತು ಮೈಕ್ರೊ ಆಂಗಲ್‌ಗಾಗಿ ಎಂಟು ಮೆಗಾಪಿಕ್ಸೆಲ್ ಮತ್ತು ಎರಡು ಮೆಗಾಪಿಕ್ಸೆಲ್ ಕ್ಯಾಮರಾಗಳನ್ನು ಕಂಪನಿ ಹೊಸ ಫೋನ್‌ನಲ್ಲಿ ಅಳವಡಿಸಿದೆ.

Google Meetನಲ್ಲಿ ಬ್ರೇಕೌಟ್ ಸೃಷ್ಟಿಸುವುದು ಹೇಗೆ?

ಇನ್ನು ಫೋನ್‌ನ ಫ್ರಂಟ್‌ನಲ್ಲಿ 44 ಮೆಗಾ ಪಿಕ್ಸೆಲ್ ಕ್ಯಾಮರಾ ಅಳವಡಿಸಲಾಗಿದೆ. ಸೆಲ್ಫಿ ಫೋಟೋ ಮತ್ತು ವಿಡಿಯೋಗಳನ್ನು ಮಾಡಬಹುದು. ಈ ಕ್ಯಾಮರಾಗಳ ಸಹಾಯದಿಂದ ನೀವು ಅತ್ಯುತ್ತಮ ಫೋಟೋಗಳನ್ನು ತೆಗೆಯಬಹುದು. ವಿವೋ ಫೋನ್‌ಗಳು ಸಾಮಾನ್ಯವಾಗಿ ಕ್ವಾಲಿಟಿ ಫೋಟೋಗಳನ್ನು ತೆಗೆಯಲು ಹೆಸರವಾಸಿ. ಆ ಘನತೆಗೆ ಚ್ಯುತಿಬಾರದಂತೆ ಈ ಹೊಸ ಫೋನ್ ಕೂಡ ಇದೆ.

6.44 ಇಂಚ್ ಸ್ಕ್ರೀನ್

ವಿವೋ ವಿ20 ಸ್ಮಾರ್ಟ್‌ಫೋನ್ ಆಲ್‌ಮೋಸ್ಟ್ 6.5 ಸ್ಕ್ರೀನ್ ಹೊಂದಿದೆ. ಅಂದರೆ, 6.44 ಇಂಚ್ ಡಿಸ್‌ಪ್ಲೇ ಇದೆ.  ಈ ಸ್ಕ್ರೀನ್ ಅತ್ಯಂತ ಬ್ರೈಟ್ ಹಾಗೂ ಬ್ಯೂಟಿಫುಲ್ ಬಣ್ಣಗಳನ್ನು ಚೆನ್ನಾಗಿ ಪ್ರತಿಫಲಿಸುತ್ತದೆ. ಇದರಿಂದ ನೀವು ಯಾವುದೇ ಮೂವಿಯನ್ನು ಆರಾಮವಾಗಿ ನೋಡಬಹುದು. ನಿಮಗೆ ಒಳ್ಳೆಯ ಅನುಭವ ಸಿಗುತ್ತದೆ. ಹಾಗೆಯೇ ಗೇಮಿಂಗ್‌ಗೂ ಕೂಡ ಇದೇ ಅನುಭವ ಸಿಗುತ್ತದೆ ಎನ್ನುತ್ತದೆ ಕಂಪನಿ. ವಿ20 ಅತ್ಯುತ್ತಮ ಡಿಸ್‌ಪ್ಲೇ ಹೊಂದಿದೆ ಎಂದು ಹೇಳಿದರೂ ಇದೇ ಸೆಗ್ಮೆಂಟ್‌ನಲ್ಲಿ ವಿವೋ ಪ್ರತಿಸ್ಪರ್ಧಿ ಒನ್‌ಪ್ಲಸ್ ನಾರ್ಡ್ ಮತ್ತು ಗ್ಯಾಲಕ್ಸಿ ಎಂ31 ಫೋನ್‌ಗಳಲ್ಲಿ ಈಗಾಗಲೇ ಸೂಪರ್ ಅಮೋಲ್ಡ್ ಡಿಸ್‌ಪ್ಲೇಗಳನ್ನು ನೀಡುತ್ತವೆ ಎಂಬುದನ್ನು ನೀವು ಗಮನಿಸಬಹುದು. ಈ ಫೋನ್ 4000 ಎಂಎಚ್ ಬ್ಯಾಟರಿಯನ್ನು ಒಳಗೊಂಡಿದ್ದು, 8 ಜಿಬಿ ರ್ಯಾಮ್, ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 720ಜಿ ಪ್ರೊಸೆಸರ್ ಒಳಗೊಂಡಿದೆ ಮತ್ತು ಆಂಡ್ರಾಯ್ಡ್ 11 ಆಪರೇಟಿಂಗ್ ಸಾಫ್ಟ್‌ವೇರ್ ಆಧಾರಿತ ಫೋನ್ ಇದಾಗಿದೆ.

ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದೀರಾ,, ಈ ಹ್ಯಾಕರ್ಸ್ ಬಗ್ಗೆ ಎಚ್ಚರ

ಈ ಸ್ಮಾರ್ಟ್‌ಫೋನ್ 7.4 ದಪ್ಪ ಹಾಗೂ ಕೇವಲ 171 ಗ್ರಾಮ್ ತೂಕವಿದೆ. ಈ ಫೋನ್ ತುಂಬ ಹ್ಯಾಂಡಿ ಕೂಡ ಆಗಿದೆ.ಈ ಮೇಲಿನ ಸಂಗತಿಗಳನ್ನು ಗಮನಿಸಿ ನೀವು ಇದೊಂದು ಅತ್ಯುತ್ತಮ ಫೋನ್ ಆಗಿದೆ ಎಂದು ಭಾವಿಸಬಹುದು. ಹಾಗಂತ ಈ ಫೋನ್‌ ಪೂರಿಪೂರ್ಣ ಎಂದೂ ಹೇಳಬೇಕಿಲ್ಲ. ಈ ಸೆಗ್ಮೆಂಟ್‌ನಲ್ಲಿ ದೊರೆಯುವ ಇತರ ಫೋನ್‌ಗಳಿಗೆ ಹೋಲಿಸಿದರೆ ಇದು ಕೆಲವು ವಿಷಯಗಳಲ್ಲಿ ಸ್ವಲ್ಪ ಹಿಂದೆ ಬೀಳುತ್ತದೆ. ಆದರೆ, ಕೊಡುವ ದುಡ್ಡಿಗೆ ಈ ಫೋನ್‌ ನಿಮಗೆ ಮೋಸ ಮಾಡುವುದಿಲ್ಲ ಮತ್ತು ಒಳ್ಳೆಯ ಸ್ಮಾರ್ಟ್ ಫೋನ್ ಅನುಭವವನ್ನು ಖಂಡಿತ ನೀಡುತ್ತದೆ ಎಂದು ಹೇಳಬಹುದು.