ರೇವಣ್ಣಗೆ ಹೊಟ್ಟೆನೋವು, ಹೊಟ್ಟೆಯುರಿ: ಆಸ್ಪತ್ರೇಲಿ ಚಿಕಿತ್ಸೆ

ರೇವಣ್ಣ ಅವರು ಕಳೆದ ನಾಲ್ಕು ದಿನಗಳಿಂದ ಸರಿಯಾಗಿ ಊಟ, ತಿಂಡಿ ಸೇವಿಸುತ್ತಿಲ್ಲ. ಹೀಗಾಗಿ ಗ್ಯಾಸ್ಟ್ರಿಕ್‌ ಹೆಚ್ಚಾಗಿ ಹೊಟ್ಟೆನೋವು ಮತ್ತು ಎದೆ ಉರಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಬಳಿ ಬಳಿ ತಪಾಸಣೆ ಮಾಡಿಸಲಾಗಿದೆ. 

Treatment to HD Revanna For Illness grg

ಬೆಂಗಳೂರು(ಮೇ.08): ಮಹಿಳೆ ಅಪಹರಣ ಆರೋಪದ ಪ್ರಕರಣ ಸಂಬಂಧ ಎಸ್‌ಐಟಿ ವಶದಲ್ಲಿರುವ ಆರೋಪಿ ಎಚ್‌.ಡಿ.ರೇವಣ್ಣ ಅವರಿಗೆ ಹೊಟ್ಟೆ ನೋವು ಮತ್ತು ಎದೆ ಉರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ.

ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಲು ಎಸ್ಐಟಿ ನಾಲ್ಕು ದಿನಗಳ ಕಾಲ ರೇವಣ್ಣನನ್ನು ವಶಕ್ಕೆ ಪಡೆದಿದೆ. ಮಂಗಳವಾರ ಸಂಜೆ ಸಿಐಡಿ ಕಚೇರಿಯಲ್ಲಿ ಎಸ್ಐಟಿ ಅಧಿಕಾರಿಗಳು ರೇವಣ್ಣನನ್ನು ವಿಚಾರಣೆ ಒಳಪಡಿಸಿದ್ದರು. ಈ ವೇಳೆ ಹೊಟ್ಟೆ ನೋವು ಮತ್ತು ಎದೆ ಉರಿ ಎಂದು ರೇವಣ್ಣ ಹೇಳಿದ್ದಾರೆ. ಕೂಡಲೇ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿನ ವೈದ್ಯರು ಇಸಿಜಿ, ಬಿಪಿ, ಶುಗರ್‌ ಪರೀಕ್ಷೆ ಮಾಡಿದ್ದು, ಎಲ್ಲವೂ ನಾರ್ಮಲ್‌ ಬಂದಿದೆ. ಆದರೂ ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ವೈದ್ಯರ ಶಿಫಾರಿಸ್ಸಿನ ಮೇರೆಗೆ ರೇವಣ್ಣನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದೆ.

‘ಏನೂ ಕೇಳಬೇಡಿ, ನನಗೇನು ಗೊತ್ತಿಲ್ಲ’ ಎಸ್‌ಐಟಿ ಅಧಿಕಾರಿಗಳ ನೂರು ಪ್ರಶ್ನೆಗೆ ರೇವಣ್ಣ ಒಂದೇ ಆನ್ಸರ್‌!

ರೇವಣ್ಣ ಅವರು ಕಳೆದ ನಾಲ್ಕು ದಿನಗಳಿಂದ ಸರಿಯಾಗಿ ಊಟ, ತಿಂಡಿ ಸೇವಿಸುತ್ತಿಲ್ಲ. ಹೀಗಾಗಿ ಗ್ಯಾಸ್ಟ್ರಿಕ್‌ ಹೆಚ್ಚಾಗಿ ಹೊಟ್ಟೆನೋವು ಮತ್ತು ಎದೆ ಉರಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಬಳಿ ಬಳಿ ತಪಾಸಣೆ ಮಾಡಿಸಲಾಗಿದೆ. ಬಳಿಕ ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಮಾಡಿಸಿದ ಎಸ್ಐಟಿ ಅಧಿಕಾರಿಗಳು ಮತ್ತೆ ಸಿಐಡಿ ಕಚೇರಿಗೆ ಕರೆದೊಯ್ದಿದ್ದಾರೆ.

Latest Videos
Follow Us:
Download App:
  • android
  • ios